ಲಿ.ಡಾ. ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳ ಸ್ಮರಣೋತ್ಸವ-ನುಡಿ ನಮನ ಕಾರ್ಯಕ್ರಮ
ಜಮಖಂಡಿ
ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳದ ಶ್ರೀ ಅನಂದ ದೇವರಿಗೆ ನಗರದ ಓಲೆಮಠದಲ್ಲಿ ಮಂಗಳವಾರ ರುದ್ರಾಕ್ಷಿ ಕಿರೀಟ ಧಾರಣೆ ಮಾಡಲಾಯಿತು.
ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಆನಂದ ದೇವರಿಗೆ ರುದ್ರಾಕ್ಷಿ ಕಿರೀಟ, ಚಿನ್ನದ ಗುಂಡಗಡಿಗಿ, ಶೀರೋ ವಸ್ತ್ರ ಕಾಡೋಲೆಗಳನ್ನು ಹಸ್ತಾಂತರಿಸುವ ಮೂಲಕ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು.
ಒಂದು ವರ್ಷದ ಒಳಗೆ ಶ್ರೀ ಅನಂದ ದೇವರ ಪೀಠಾರೋಹಣ ಕಾರ್ಯಕ್ರಮ ನಡೆಸಲಾಗುವುದೆಂದು ಮಠದ ಮೂಲಗಳು ತಿಳಿಸಿದವು.
ಡಾ. ತೋಂಟದ ಸಿದ್ದರಾಮ ಶ್ರೀಗಳು ಮಾತನಾಡಿ ಮಠದ ಪೀಠ ಅಲಂಕರಿಸುವವರು ತಂದೆ, ತಾಯಿ, ಬಂಧು ಬಾಂಧವರ ಸಂಬಂಧ ಕಡಿದುಕೊಳ್ಳಬೇಕು. ಜವಾಬ್ದಾರಿಯುತ ಸಮಾಜದ ಮಗುವಾಗಿ ಇರಬೇಕು. ನಾಡಿನಾದ್ಯಂತ ಅಧ್ಯಾತ್ಮ, ಬಸವಾದಿ ಶರಣರ ಆಶಯದಂತೆ ನಡೆಯಬೇಕು ಎಂದರು. ವಚನಗಳ ಅಧ್ಯಯನ ಮಾಡಬೇಕು. ವಚನಗಳ ಅಧ್ಯಯನದಿಂದ ಜ್ಞಾನ ಹೆಚ್ಚುತ್ತದೆ ಎಂದರು. ಮಠದ ಪೂಜ್ಯರು, ಸ್ವಾಮೀಜಿಗಳಿಗೆ ವಚನಗಳೇ ಶ್ರೀರಕ್ಷೆಯಾಗಿವೆ, ಎಂದು ಹೇಳಿದರು.
ಓಲೆಮಠದ ನೂತನ ಉತ್ತರಾಧಿಕಾರಿ ಆನಂದ ದೇವರು ಮಾತನಾಡಿ, ಜಮಖಂಡಿ ಓಲೆಮಠಕ್ಕೆ ನಾನು ಹೂ ತರುವ ಕೆಲಸ ಮಾಡುತ್ತೇನೆ, ನಾನು ಜಮಖಂಡಿಯ ಮನ ಮಗನಾಗಿ ಸಮಾಜ ಸೇವೆ ಮಾಡುತ್ತೇನೆ, ನನ್ನಲ್ಲಿ ಪೀಠಾಧಿಕಾರಿ ಎನ್ನುವ ಭೇದ ಇಲ್ಲ. ಮಠಕ್ಕೆ ಲಕ್ಷಾಂತರ ರೂ. ಕೊಡುವುದು ಬೇಡ ನೀವೆಲ್ಲರೂ ಮಠದ ಮೇಲೆ ಲಕ್ಷ, ಇಡಿ ಎಂದರು.
.
ಸ್ಮರಣೋತ್ಸವ-ನುಡಿ ನಮನ
ಓಲಿಮಠದಲ್ಲಿ ನಡೆದ ಲಿ.ಡಾ. ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳ ಸ್ಮರಣೋತ್ಸವ-ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ ಅವರು ಮಾತನಾಡಿದರು.
ಡಾ. ಚನ್ನಬಸವ ಸ್ವಾಮೀಜಿ ಅವರು ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಸಂಪಾದಿಸಿದ್ದರು. 21ನೇ ಶತಮಾನದ ಆಧುನಿಕ ವಚನಕಾರರಾಗಿದ್ದರು. 12ನೇ ಶತಮಾನದ ನಂತರ 21ನೇ ಶತಮಾನದಲ್ಲಿ ದ್ವಿಪತಿ ಛಂದಸ್ಸಿನಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲನೆಯದಾಗಿ ಬಸವ ಪುರಾಣ ಬರೆದ ಹೆಗ್ಗಳಿಕೆಗೆ ಶ್ರೀಗಳು ಪಾತ್ರರಾಗಿದ್ದರು ಎಂದರು.
ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಸಾಹಿತ್ಯ ವಿದ್ವತ್ ಪರಂಪರೆಯನ್ನು ಓಲೆಮಠದ ಶ್ರೀಗಳು ಪ್ರಾರಂಭಿಸಿದ್ದಾರೆ. ಮಠ ಮತ್ತು ಭಕ್ತರ ಮಧ್ಯೆ ಅವಿನಾಭಾವ ಸಂಬಂಧ ಇದೆ ಎಂದರು.
ಶಾಸಕ ಜಗದೀಶ ಗುಡಗುಂಟ ಮಾತನಾಡಿ ಶ್ರೀಮಠದಲ್ಲಿ ಶ್ರೀಗಳು ರಚಿಸಿರುವ ಅಪಾರ ಗ್ರಂಥಗಳಿಗೆ ಗ್ರಂಥಾಲಯ ನಿರ್ಮಿಸಲು ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಲಿಂಗೈಕ್ಯ ಶ್ರೀಗಳ ಸ್ಮರಣೋತ್ಸವ ಮತ್ತು ನೂತನ ಶ್ರೀಗಳ ನೇಮಕ ಕಾರ್ಯಕ್ರಮದಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಶರಣ ಅಶೊಕ ಬರಗುಂಡಿ, ರವಿ ಯಡಹಳ್ಳಿ ಹಾಗೂ ಬಸವ ಕೆಂದ್ರದ ಸದಸ್ಯರು ಬೆಳಿಗ್ಗೆ 5 ಗಂಟೆಯಿಂದ 8.30 ರವರೆಗೆ ಪೂಜ್ಯರ ಕ್ರಿಯಾ ಸಮಾಧಿ ಮುಂದೆ ಬಸವಾದಿ ಶರಣರ ವಚನಗಳ ಪಠಣದೊಂದಿಗೆ ಚಾಲನೆ ಕೊಡಲಾಯಿತು.
ಮಾಜಿ ಶಾಸಕ ಶರಣ ಆನಂದ ನ್ಯಾಮಗೌಡರ ಮಾತನಾಡಿದರು.
ಶರಣ ಶರಣಾರ್ಥಿಗಳು ಈಗ ತಾನೇ ಆಗಿರುವ ಸ್ವಾಮೀಜಿಗಳು ತಮ್ಮ ಮಠದಲ್ಲಿ ಲಿಂಗಾಯತರಿಗೆ ಲಿಂಗ ದೀಕ್ಷೆ ನೀಡುತ್ತಾ ಬಸವಾದಿ ಶರಣರ ಆದರ್ಶ ದಂತೆ ನಡೆದರೆ ನಾವು ಲಿಂಗಾಯತರಾಗಿ ಹುಟ್ಟಿದ್ದು ಜನ್ಮ ಸಾರ್ಥಕವಾಗುತ್ತದೆ