ಔರಾದ
ಮೇ ತಿಂಗಳಿನಲ್ಲಿ ಪಟ್ಟಣದಲ್ಲಿ ಮಡೆಯುವ ಲಿಂಗಾಯತ ಜಾಗೃತಿ ಸಮಾವೇಶಕ್ಕೆ ಆಗಮಿಸುವಂತೆ ಬಿ.ವೈ.ವಿಜಯೇಂದ್ರ ಅವರನ್ನು ಔರಾದ ಲಿಂಗಾಯತ ನಿಯೋಗ ಮನವಿ ಮಾಡಿದರು.
ಕಲಬುರ್ಗಿಯಲ್ಲಿ ಬಿವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಔರಾದ ಲಿಂಗಾಯತ ನಿಯೋಗ ಸದಸ್ಯರು ಔರಾದ-ಕಮಲನಗರ ತಾಲೂಕಿನ ವತಿಯಿಂದ ಬಸವ ಭಕ್ತರು ಅರ್ಥಪೂರ್ಣವಾದ ಕಾರ್ಯಕ್ರಮ ನಿಯೋಜನೆ ಮಾಡಿದ್ದು, ತಾವು ನಮ್ಮ ತಾಲೂಕಿಗೆ ಆಗಮಿಸಿ ಸಮಾರಂಭಕ್ಕೆ ಶೋಭೆ ತರಬೇಕೆಂದು ಮನವಿ ಮಾಡಿದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ನಾಡೋಜ ಡಾ.ಬಸವಲಿಂಗಪಟ್ಟದೇವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಮಠಾಧೀಶರ ಸನ್ನಿಧಾನದಲ್ಲಿ ಸಮಾವೇಶ ಆಯೋಜಿಸುತ್ತಿದ್ದು ತಾವು ಆಗಮಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿ ನಾಡಿಗೆ ಸಮಾಜದ ಸಂಘಟನೆಗೆ ಹೊಸ ಚೈತನ್ಯವನ್ನು ತುಂಬಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಗುಂಡಪ್ಪ ವಕೀಲ, ರವೀಂದ್ರ ಮೀಸೆ, ಪ್ರಕಾಶ ಘೂಳೆ, ಶರಣಪ್ಪ ಪಂಚಾಕ್ಷರಿ, ವಸಂತ ವಕೀಲ, ಶಿವಕುಮಾರ ಘಾಟೆ, ಸಂಜೀವಕುಮಾರ ಜುಮ್ಮಾ, ಶರಣಪ್ಪ ಮಿಠಾರೆ, ರಾಜೇಂದ್ರ ಮುದ್ದಾ, ದಯಾನಂದ ಹಳ್ಳಿಖೇಡೆ, ಬಸವರಾಜ ಜೊನ್ನೆಕೇರಿ, ಆನಂದ ದ್ಯಾಡೆ ಸೇರಿದಂತೆ ಇನ್ನಿತರರಿದ್ದರು.