ಆಶ್ರಯ ನೀಡಿದ ವೀರಶೈವ ಕಡೆಗಣಿಸಬೇಡಿ; ಧರ್ಮ ಒಡೆಯಬೇಡಿ; ಲಿಂಗಾಯತ ಹಿಂದೂ ಧರ್ಮದ ಭಾಗ
ಲಕ್ಷ್ಮೇಶ್ವರ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರದಲ್ಲಿ ಬುಧವಾರ ಸಂಜೆ ಪಂಚಪೀಠಗಳ ಸಭೆ ನಡೆಯಿತು. ಸಮಾಲೋಚನೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳೂ ಭಾಗವಹಿಸಿದ್ದರು.
ಭಿನ್ನಾಭಿಪ್ರಾಯಗಳಿಂದ ಬಣಗಳಾಗಿರುವ ಪಂಚಪೀಠಗಳನ್ನು ಒಗ್ಗೂಡಿಸಲು ನಡೆದ ಸಭೆಯಲ್ಲಿ ಕೇದಾರ ಶ್ರೀಗಳನ್ನು ಹೊರತು ಪಡಿಸಿ ಮಿಕ್ಕ ಆಚಾರ್ಯರು ಭಾಗವಹಿಸಿದ್ದರು.
ಪಂಚಾಚಾರ್ಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು ಭಿನ್ನಾಭಿಪ್ರಾಯಗಳು ಹಿತಕರವಲ್ಲ. ಎಲ್ಲ ಪೀಠಗಳಿಗೆ ಪತ್ರ ಕಳಿಸಲಾಗಿತ್ತು. ಅದಕ್ಕೆ ಎಲ್ಲ ಪೀಠಾಧೀಶರು ಒಪ್ಪಿ ಬಂದಿದ್ದು ಆನಂದವಾಗಿದೆ ಎಂದರು.

ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಂಭಾಪುರಿ ಶ್ರೀಗಳ ಪ್ರಯತ್ನದಿಂದ ಸಮಾವೇಶ ಸಾಧ್ಯವಾಗಿದೆ. ಪಂಚಪೀಠಗಳು ಸನಾತನ ಪೀಠಗಳಾಗಿವೆ. ಎಂದೋ ಈ ಸಮಾವೇಶ ನಡೆಯಬೇಕಾಗಿತ್ತು. ಕೇದಾರ ಶ್ರೀಗಳು ಕಾರ್ಯನಿಮಿತ್ತ ಇಂದಿನ ಸಭೆಗೆ ಬಂದಿಲ್ಲ, ಮೇ 30ರ ನಂತರ ಬರುವುದಾಗಿ ತಿಳಿಸಿದ್ದಾರೆ. ಎಂದರು.
ದಾವಣಗೆರೆ ಸಮಾವೇಶ
ಜೂನ್ ತಿಂಗಳಲ್ಲಿ ದಾವಣಗೆರೆಯಲ್ಲಿ ಪಂಚಪೀಠಾಧೀಶ್ವರರ ಮತ್ತು ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ದೊಡ್ಡ ಸಮಾವೇಶ ನಡೆಸಿ, ಒಮ್ಮತದ ನಿರ್ಣಯ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಕಾಂತರಾಜು ಆಯೋಗದ ವರದಿ ಜಾತಿ ಜನಗಣತಿ ಅಲ್ಲ.ಅದೊಂದು ಸಾಮಾಜಿಕ, ಆರ್ಥಿಕ ಸಮೀಕ್ಷೆ. ಈ ಸಮೀಕ್ಷೆಯಲ್ಲಿ ಹಿಂದೂ ಮತ್ತು ಲಿಂಗಾಯತ ಎನ್ನುವ ಗೊಂದಲದಿಂದ ಬೇರೆ ಬೇರೆ ಪಂಗಡದಲ್ಲಿ ವೀರಶೈವ ಲಿಂಗಾಯತ ಸಮಾಜದ ಉಪಜಾತಿಗಳು ಸೇರಿವೆ. ನಮ್ಮ ಜನಸಂಖ್ಯೆ ಕಡಿಮೆ ಆಗಿಲ್ಲ.ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.

ಲಿಂಗಾಯತ ಹಿಂದೂ ಧರ್ಮದ ಅಂಗ: ಬಿದರಿ
ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ ವೀರಶೈವ ಲಿಂಗಾಯತ ಎನ್ನುವುದು ಹಿಂದೂ ಧರ್ಮದ ಅವಿಭಾಜ್ಯ ಅಂಗ. 2026 ಜನವರಿಯಿಂದ ಡಿಸೆಂಬರ್ ವರೆಗೆ ವೀರಶೈವ ಲಿಂಗಾಯತ ಮಹಾ ಸಭಾದಿಂದ ಸಮಾಜದ ಪ್ರತಿಯೊಬ್ಬರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಕಾಂತರಾಜು ಆಯೋಗದ ವರದಿ ಕಪೋಲಕಲ್ಪಿತವಾಗಿದೆ. ಉದಾಹರಣೆಗೆ ಹಿಂದು ಹೆಳವ ಎಂದರೆ ೨ಎ, ಲಿಂಗಾಯತ ಹೆಳವ ಎಂದರೆ ೩ಬಿ ಸೇರಿಸಿದ್ದಾರೆ. ಇವರ ಸಾಮಾಜಿಕ ಸ್ಥಾನದಲ್ಲಿ ಏನು ಬದಲಾವಣೆ ಇಲ್ಲದಿದ್ದರೂ ಅವರನ್ನ ಬೇರೆ ಬೇರೆ ಮೀಸಲಾತಿ ಪಟ್ಟಿಗೆ ಸೇರಿದ್ದಾರೆ. ಹೀಗಾಗಿ ಸರಕಾರ ಅವೈಜ್ಞಾನಿಕವಾಗಿರುವ ಈ ವರದಿಯನ್ನು ತಿರಸ್ಕರಿಸಬೇಕು ಎಂದರು.
ಆಶ್ರಯ ಕೊಟ್ಟ ವೀರಶೈವ
ಲಿಂಗಾಯತ ರೂಢಿಯಿಂದ ಬಂದಿದೆ, ಪೂರ್ವದ ಹೆಸರು ವೀರಶೈವ. ಆಶ್ರಯ ಕೊಟ್ಟ ವೀರಶೈವವನ್ನು ಕಡೆಗಣಿಸಿದ್ದು ತಪ್ಪು, ಎಂದು ರಂಭಾಪುರಿ ಶ್ರೀಗಳು ಹೇಳಿದರು.
ಬಸವಣ್ಣನವರು ವೀರಶೈವ ಧರ್ಮವನ್ನು ಅಪ್ಪಿಕೊಂಡಿದ್ದಾರೆ. ಆದರೆ ಇವತ್ತು ಬಸವಣ್ಣನವರ ಹೆಸರಿನಲ್ಲಿ ಮಾತನಾಡುವ ಜನರು ವೀರಶೈವ ಬೇರೆ. ಲಿಂಗಾಯತ ಬೇರೆ ಎಂದು ಹೇಳುತ್ತಿದ್ದಾರೆ.
ವೀರಶೈವದ ಜೊತೆಗೆ ಲಿಂಗಾಯತ ಸೇರಿಸಲು ಹಿಂದೆ ನಿರ್ಧರಿಸಲಾಗಿತ್ತು. ಆದರೆ ಕೆಲವರು ವೀರಶೈವ ಬಿಟ್ಡು ಲಿಂಗಾಯತ ಉಳಿಸಿಕೊಳ್ಳಲು ಹೇಳಿರುವುದು ವಿಷಾದನೀಯ. ವೀರಶೈವ ಧರ್ಮದ ಹೆಸರಲ್ಲಿ ಮೇಲೆ ಬಂದವರು ಈಗ ಅದನ್ನೆ ವಿರೋಧಿಸುತ್ತಿರುವುದು ಖೇದದ ಸಂಗತಿಯಾಗಿದೆ ಎಂದರು.
ಜಾತಿಗಣತಿಯಲ್ಲಿ ಹಿಂದೂ ಧರ್ಮದ ಜತೆಗೆ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳ ಹೆಸರನ್ನೂ ಸ್ಪಷ್ಟವಾಗಿ ನಮೂದಿಸಬೇಕು ಎಂದು ರಂಭಾಪುರಿ ಶ್ರೀಗಳು ಕರೆ ನೀಡಿದರು. ಈ ಬಗ್ಗೆ ಹೊಸ ಕಾಲಂ ಸೃಷ್ಟಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ನರೇಂದ್ರ ಮೋದಿಯವರು ಜನಗಣತಿಯೊಂದಿಗೆ ಜಾತಿಗಣತಿಗೆ ಮುಂದಾಗಿದ್ದು ಸ್ವಾಗತಾರ್ಹ. ಅಖಿಲ ಭಾರತ ವೀರಶೈವ ಮಹಾಸಭೆ ಇದಕ್ಕೆ ಒಪ್ಪಿದೆ ಎಂದರು.
ಸಮಾರಂಭದಲ್ಲಿ ರಂಭಾಪುರಿ ಪೀಠದ ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಪೀಠದ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ರಾಜಣ್ಣ ಮಾತನಾಡಿ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹಾಗೂ ಅನೇಕ ಮಠಾಧೀಶರು, ಭಕ್ತರು ಉಪಸ್ಥಿತರಿದ್ದರು.
24ನೇ ವೀರಶೈವ ಲಿಂಗಾಯತ ಮಹಾಸಭಾದಿಂದ 8 ನಿರ್ಣಯಗಳಲ್ಲಿ ಇದು ಒಂದು
ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನ ಗಣತಿಯ ವೇಳೆ ನಮ್ಮ ಸಮಾಜದ ಬಾಂಧವರು
“ಹಿಂದು ಮತ್ತು ತಮ್ಮ ಉಪ ಜಾತಿಯ ಹೆಸರುಗಳನ್ನು ಬರೆಸಬಾರದು”.
ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸುವಂತೆ ಈ ಮಹಾಧಿವೇಶನ ಮನವಿ ಮಾಡಲು ನಿರ್ಣಯ ಮಾಡಿರುತ್ತದೆ.
ಆದರೆ ಬಿದರಿಯವರು ಹಿಂದೂ ಎಂದು ಬರೆಸಲು ಹೇಳುತ್ತಿದ್ದಾರೆ
https://www.facebook.com/share/p/1AWqySN9Ar/
Share this clipping if you agree with me please