ಬಸವ ಪರುಷಕಟ್ಟೆ ವತಿಯಿಂದ ಶ್ರಾವಣ ಮಾಸದ ಶರಣ ಚಿಂತನ ಗೋಷ್ಟಿ

ಚಿಂಚೋಳಿ

ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ ವತಿಯಿಂದ ಶ್ರಾವಣ ಮಾಸದ ಶರಣ ಚಿಂತನ ಗೋಷ್ಟಿ ನಡೆಯಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಮಿತಿ ಅಧ್ಯಕ್ಷ ಆನಂದಕುಮಾರ ಬೆಡಸೂರೆ, ನಮ್ಮ ಶ್ರೀ ಬಸವ ಪರುಷ ಕಟ್ಟೆಯ ಪ್ರಾರ್ಥನೆ, ಪೂಜೆ, ಪ್ರಸಾದ, ಚಿಂತನಗೋಷ್ಟಿ, ಅತಿಥಿ ಸತ್ಕಾರ , ವಚನ ಕಂಠಪಾಠ ಸ್ಪರ್ಧೆ ಸೇರಿದಂತೆ ಎಲ್ಲಕ್ಕೂ ದಾಸೋಹ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ಅದೇ ರೀತಿ ಸಮಾರೋಪ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶರಣರು ಭಾಗವಹಿಸಲು ಕೋರಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ರಾಮಚಂದ್ರ ಗಣಾಪುರ, ಅಕ್ಕಮಹಾದೇವಿ ಸ್ತ್ರೀ ಶಕ್ತಿಯ ಸ್ವರೂಪ ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ನಾಗಾಯಿದಲಾಯಿ ಗ್ರಾಮದ ಲಿಂಗಾಯತ ಮುಖಂಡ ಉದಯಕುಮಾರ ಪಾಟೀಲ, ಶ್ರೀ ಬಸವ ಪರುಷ ಕಟ್ಟೆ ಕಾರ್ಯಗಳನ್ನು ಕೊಂಡಾಡಿದರು. ಒಂದು ಮಠ, ಮಠದ ಸ್ವಾಮಿ ಮಾಡಬೇಕಿದ್ದ ಕೆಲಸವನ್ನು ಶ್ರೀ ಬಸವ ಪರುಷ ಕಟ್ಟೆ ಸಮಿತಿ ಮಾಡುತ್ತಿರುವುದು ಒಂದು ಮಾದರಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವ ಪರುಷ ಕಟ್ಟೆ ರೂವಾರಿ ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಿ.ಎಸ್. ರಗಟೆ ಅವರು ತಾವೇ ಮಾಡಿಸಿದ ಸುಂದರವಾದ ಪರುಷ ಕಟ್ಟೆ ಬಸವೇಶ್ವರ ಫೋಟೋಗಳನ್ನು ಎಲ್ಲಾ ಶರಣ ಬಂಧುಗಳಿಗೆ ವಿತರಣೆ ಮಾಡಿ ಬಸವಣ್ಣನವರು ನಮಗೆಲ್ಲರಿಗೂ ಆದರ್ಶ ಹಾಗೂ ದೈವಿಶಕ್ತಿ ಸ್ವರೂಪ.

ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು , ಬಸವ ಧ್ಯಾನ ಮಾಡಿ ಅವರ ತತ್ವ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ತಾಯಂದಿರು ಮಾಡಬೇಕೆಂದು ತಿಳಿಸಿದರು.

ಇದೇ ವೇಳೆ ಸರ್ಕಾರಿ ಸೇವೆಯಿಂದ ನಿವೃತ್ತರಾದ ರಾಜಕುಮಾರ ಕೋಳಕೂರು, ತುಕಾರಾಮ ಭಕ್ತಂಪಳ್ಳಿ ಹಾಗೂ ರತನಕುಮಾರ ತೆಲಕಾಪಳ್ಳಿಯವರನ್ನು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಚುನಾಯಿತರಾದ ಮಂಜುನಾಥ ದುಬಲಗುಂಡಿ ಅವರನ್ನು ಸನ್ಮಾನಿಸಲಾಯಿತು.

ದಯಾನಂದ ಕಲ್ಲೂರು, ಸಿದ್ಧಲಿಂಗ ದುಬಲಗುಂಡಿ ಸಂಗೀತ ಸೇವೆ ಸಲ್ಲಿಸಿದರು. ಪ್ರೇಮಾ ಕೊಡಂಗಲ್ ಸ್ವಾಗತಿಸಿದರು. ಜ್ಯೋತಿ ಸಂಗೊಂಡ ನಿರೂಪಣೆ ಮಾಡಿದರು. ಮಹಾನಂದ ಸಂಗೊಂಡ ಶರಣು ಸಮರ್ಪಣೆ ಮಾಡಿದರು.

ಇದೇ ವೇಳೆ ದಾಸೋಹಿಗಳಾದ , ಚಂದ್ರಯ್ಯ ಸ್ವಾಮಿ, ಚೆನ್ನಬಸವಮ್ಮ, ವಿಜಯಕುಮಾರ್ ದಂಪತಿಗಳು, ಮಾಲತಿಬಾಯಿ ಸತ್ಯಕುಮಾರ ದಂಪತಿಗಳಿಗೆ ಸತ್ಕರಿಸಲಾಯಿತು. ವಿಶಾಲಾಕ್ಷಿ ವೀರಸಂಗಯ್ಯ ಮಠ, ರಾಧಿಕಾ ಶಿವರುದ್ರಯ್ಯ ಹಿರೇಮಠ, ಅರುಣಾ ಮಹೇಶಕುಮಾರ ಕೊಡಂಗಲ್, ಅಶ್ವಿನಿ ಶಾಂತಕುಮಾರ ಸೀತಾಳಗೇರಾ, ನಾಗಮ್ಮ ಪ್ರಭುಲಿಂಗಯ್ಯ, ಬಸವಯ್ಯ ಸ್ವಾಮಿ, ವೀರಶೆಟ್ಟಿ ದುಬಲಗುಂಡೆ, ಅಣಿವೀರಯ್ಯ ಮದರಗಿಮಠ, ಅರುಣ ವರ್ದನ ಮರಪಳ್ಳಿ, ಗುರುಶಾಂತ ಹುಂಡೇಕಾರ, ಶ್ರೀಕಾಂತ ಹೂಗಾರ, ಅಶೋಕ ಸಜ್ಜನ, ದಿಲೀಪ್ ಬೆಡಸೂರು, ಮಲ್ಲಿಕಾರ್ಜುನ ಬುರುಕಪಳ್ಳಿ, ಶರಣಕುಮಾರ ನೇತಿ, ಬಸವರಾಜ ಬುರುಕಪಳ್ಳಿ, ಶಿವಮೂರ್ತಿ ಜಾಡರ, ಸುಭಾಷಚಂದ್ರ ಕಿಳ್ಳಾ, ಅಶೋಕ ಹಡಪದ, ಕಿರಣಕುಮಾರ ಬೆಡಸೂರೆ, ಸಂಗಮೇಶ ರಗಟೆ ಮುಂತಾದವರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *