ದಾವಣಗೆರೆ
ವೀರಶೈವ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ರಂಭಾಪುರಿ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೇಣುಕಾ ಮಂದಿರದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿ, 9ನೇ ತರಗತಿಯ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ವೀರಶೈವ ಎಂಬ ಪದ ಬಿಟ್ಟಿದ್ದೇ ಬೊಮ್ಮಾಯಿ ಹಾಗು ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್ ಎಂದರು, ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.
ಬೊಮ್ಮಾಯಿ ಕಾಲದಲ್ಲಿ ಶಿಫಾರಸ್ಸು ಆಗಿ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಮುದ್ರಣಗೊಂಡು ಜಾರಿಗೆ ಬಂತು, ಎಂದರು. ಹಿಂದೆ ಕಾಂಗ್ರೇಸ್ ಸಮಾಜ ಒಡೆಯುವ ಕೆಲಸ ಮಾಡಿತ್ತು, . ಬಿಜೆಪಿ ಈಗ ಗೊತ್ತಿಲ್ಲದಂತೆ ಸಮಾಜ ಒಡೆಯುವ ಕೆಲಸ ಮಾಡಲು ಮುಂದಾಗಿದೆ, ಎಂದು ಹೇಳಿದರು.
ಸಮಾಜದ ಮುಖ್ಯಸ್ಥರು ವೀರಶೈವ ಪದವನ್ನು ತೆಗೆದು ಹಾಕಲು ಹುನ್ನಾರ ನಡೆಸಿದ್ದಕ್ಕೆ ಯಾವುದೇ ಕ್ಷಮೆ ಕೊಡುವುದಿಲ್ಲ. ಈ ರೀತಿ ತಪ್ಪು ಮುಂದೆ ಯಾರು ಮಾಡಬಾರದು ಎಂದರು.
ಪ್ರಾಚೀನ ಪರಂಪರೆಯಲ್ಲಿ ಲಿಂಗಾಯತ ಎನ್ನುವ ಪದ ರೂಢಿಗತವಾಗಿ ಬಂದಿತ್ತು. ಆದರೆ ಈಗ ಅಖಿಲ ಭಾರತ ವೀರಶೈವ ಮಹಾಸಭೆಯವರನ್ನು ಕೆಲ ಸ್ವಾಮೀಜಿಗಳು ಹೆದರಿಸಿ ಬೆದರಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಂದು ಮಾಡಿದ್ದಾರೆ. ಎಂದು ಹೇಳಿದರು.
ಬಸವಣ್ಣನ ಅನುಯಾಯಿಗಳಾದ ಬುದ್ದಿ ವಿಕಾರಗೊಂಡ ಮಠಾಧೀಶರು, ವೀರಶೈವ ತೆಗೆದುಹಾಕಿ ಬಸವಣ್ಣನವರ ನಿಜವಾದ ಚಾರಿತ್ರ್ಯಕ್ಕೆ ಕಪ್ಪುಚುಕ್ಕಿ ತರುವ ಕೆಲಸ ಮಾಡುತ್ತಿದ್ದಾರೆ. ಈ ದ್ವಂದ್ವ ಖಂಡಿಸುವೆ, ಇದನ್ನು ಸರಿಪಡಿಸಬೇಕು ಎಂದು ವೀರಶೈವ ಮಹಾಸಭೆಗೆ ತಿಳಿಸಿದ್ದೇವೆ ಎಂದರು.