ನೆಲಮಂಗಲ
ರಾಜ್ಯಮಟ್ಟದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ 12ನೇ ಶತಮಾನದ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆಯನ್ನು ಎಪ್ರೀಲ್ 19 ಪವಾಡ ಶ್ರೀ ಬಸವಣ್ಣ ದೇವರ ಮಠದ ವತಿಯಿಂದ ಏರ್ಪಡಿಸಲಾಗಿದೆ. ಆಸಕ್ತಿಯುಳ್ಳವರಿಗೆ ಈ ಮಾಹಿತಿಯನ್ನು ತಿಳಿಸಬೇಕಾಗಿ ಎಂದು ಶ್ರೀಮಠದಿಂದ ಬಂದಿರುವ ಪ್ರಕಟಣೆ ಕೋರಿದೆ.
ಸ್ಪರ್ಧೆಯ ಬಹುಮಾನಗಳು:
ಪ್ರಥಮ ಬಹುಮಾನ 1000 ವಚನಗಳು ಹೇಳಿದವರಿಗೆ 1 ಲಕ್ಷ ರೂ.ಗಳು.
ದ್ವಿತೀಯ ಬಹುಮಾನ 75 ಸಾವಿರ ರೂ.ಗಳು.
ಹಾಗೂ ತೃತೀಯ 50ಸಾವಿರ ರೂಂ.ಗಳು.
ಸಮಾಧಾನಕರ ಬಹುಮಾನವನ್ನು ಸ್ಪರ್ಧಾ ಆಯೋಜಕರು ನಿಗದಿಪಡಿಸುತ್ತಾರೆ.
ಸ್ಪರ್ಧಾ ಪ್ರಾಯೋಜಕರು:
ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಧ್ಯಕ್ಷರು,
ಪವಾಡ ಶ್ರೀ ಬಸವಣ್ಣ ದೇವರ ಮಠ, ನೆಲಮಂಗಲ ಟೌನ್, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ-562123.

ಸ್ಪರ್ಧೆಯ ನಿಯಮಗಳು :
- ಸ್ಪರ್ಧಾರ್ಥಿಗಳು ಸರಿಯಾಗಿ 8 ಗಂಟೆಗೆ ಕಡ್ಡಾಯವಾಗಿ ಹಾಜರಿರುವುದು.
- ವಚನ ಹೇಳುವಾಗ ನಿರರ್ಗಳವಾಗಿ, ಸ್ಪಷ್ಟವಾಗಿ, ವ್ಯಾಕರಣ ದೋಷವಿಲ್ಲದೆ ಹೇಳಬೇಕು.
- ನೀವು ಹೇಳುವ ವಚನಗಳು ಸ್ಪಷ್ಟವಾಗಿರುವ ಮುದ್ರಿತ/ ಲಿಖಿತವಾಗಿ ಬರೆದಿರುವ ಒಂದು ಪ್ರತಿಯನ್ನು ಕಡ್ಡಾಯವಾಗಿ ತೀರ್ಪುಗಾರರಿಗೆ ವಚನ ಹೇಳುವ ಮುನ್ನವೇ ಸಲ್ಲಿಸುವುದು. ವಚನ ಹೇಳುವ ಪ್ರತಿಯನ್ನು ಸಲ್ಲಿಸದಿದ್ದಲ್ಲಿ ಅಂಥವರನ್ನು ಸ್ಪರ್ಧೆಯಿಂದ ತಿರಸ್ಕರಿಸಲಾಗುವುದು.
- ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ.
- ದಿನಾಂಕ : 18.04.2026 ರಾತ್ರಿ ಉಳಿಯಲು ಬರುವವರಿಗೆ ಅವಕಾಶ ಮಾಡಲಾಗಿದೆ.
- ಸ್ಪರ್ಧಾರ್ಥಿಗಳು ಹೇಳುವ ವಚನಗಳು ಬಸವಾದಿ ಶರಣರ ವಚನಗಳೇ ಆಗಿರಬೇಕು. ಅಂದರೆ 12ನೇ ಶತಮಾನದ ವಚನಕಾರರ ವಚನಗಳು ಮಾತ್ರ ಹೇಳಬೇಕು.
ದಿನಾಂಕ: 19.04.2026 ಸಮಯ ಬೆಳಗ್ಗೆ : 8ಕ್ಕೆ.
ಸ್ಪರ್ಧೆ ನಡೆಯುವ ಸ್ಥಳ:
ಪವಾಡ ಶ್ರೀ ಬಸವಣ್ಣ ದೇವರ ಮಠ, ನೆಲಮಂಗಲ ಟೌನ್,
ಬೆಂಗಳೂರು ಗ್ರಾಮಾಂತರ ಜಿಲ್ಲೆ -562123.
ಸಂಪರ್ಕಿಸಬೇಕಾದ ಪ್ರತಿನಿಧಿಗಳ ವಿವರ :
- ಅಭಿಲಾಷ್ ಎಂ. ಆರ್, 8147395591,
- ಜ್ಞಾನೇಶ ಟಿ. 9845454536,
- ಷಣ್ಮುಖಪ್ಪ 9980496763.
