ದಾವಣಗೆರೆ
ಪೂಜ್ಯ ಪೇಚಾವರ ಶ್ರೀಗಳೇ ಮಂಗಳೂರಿನಲ್ಲಿ ನಡದ ವಚನ ಸಾಹಿತ್ಯ ಸಮ್ಮೇಳನದಲ್ಲಿ ನೀವು ಶಾಸ್ತ್ರಗಳಲ್ಲಿ ಇರುವುದನ್ನೇ ಕನ್ನಡದಲ್ಲಿ ಶರಣರು ಮನೆಮನೆಗೆ ತಲುಪಿಸಿದ್ದಾರೆ ಎಂದು ಅಪ್ಪಣೆ ಕೊಟ್ಟಿದ್ದೀರಿ
ನಿಮ್ಮ ಅಭಿಪ್ರಾಯದಂತೆ ನಮಗೆ ಕೆಲವು ವಚನಗಳ ಅರ್ಥ ಗೊತ್ತಾಗುತ್ತಿಲ್ಲ ಅಂತಹ ಕೆಲವು ವಚನಗಳ ಸಾಲುಗಳನ್ನು ಇಲ್ಲಿ ಉದಾಹರಿಸುತ್ತೇನೆ ತಾವುಗಳು ದಯಮಾಡಿ ಆ ವಚನಗಳ ಅರ್ಥ ಸಹಿತ ವಿವರಿಸಬೇಕಾಗಿ ಅತ್ಯಂತ ವಿನಮ್ರ ಪ್ರಾರ್ಥನೆ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
ವೇದಂಗಳೆಲ್ಲ ಬ್ರಹ್ಮನೆಂಜಲು, ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು, ಆಗಮಂಗಳೆಲ್ಲ ರುದ್ರನೆಂಜಲು, ಪುರಾಣಂಗಳೆಲ್ಲ ವಿಷ್ಣುವಿನೆಂಜಲು, ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು, ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು. ಇಂತಿವೆಲ್ಲವ ಹೇಳುವರು ಕೇಳುವರು ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ.
ನಾಲ್ಕು ವೇದವನೋದಿದನಂತರ ಮನೆಯ ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು. ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು. “ಶ್ವಾನೋ ಶ್ರೇಷ*ವೆಂದು ಇಕ್ಕಿದೆನು ಮುಂಡಿಗೆಯ. ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು. ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು
ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು.
ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷಿ*, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು
ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ಪುರಾಣ ಪೂರೈಸಲರಿಯದೆ ಕೆಟ್ಟವು. ಹಿರಿಯರು ತಮ್ಮ ತಮ್ಮ(ತಾವು ?) ಅರಿಯದೆ ಕೆಟ್ಟರು: ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು. ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ ?
ವೇದಂಗಳೆಂಬವು ಬ್ರಹ್ಮನ ಬೂತಾಟ. ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ. ಆಗಮಗಳೆಂಬವು ಋಷಿಯ ಮರುಳಾಟ. ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ (ಒದ್ದಾಟ?) ಇಂತು ಇವನು ಅರಿದವರ ನೇತಿಗಳೆದು ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು!
These people never learns from history. There are people who are claiming that they are followers of Basavanna. For ex. Aravind Jatti. They have no objection to attend functions organised by Vedagama organisations. They want to rde two horses. The problem is that they cannot reach their destination. We have to take firm decision not to support these double game players.
ಮನುವ್ಯಾದಿಯ ಈ ಸನಾತನಿಗಳಿಗೆ ಶರಣ ಸಂತತಿಯನ್ನೆ ನುಂಗಿನೀರುಕುಡಿದ ಇತಿಹಾಸವಿದೆ,,,
ಅಂದಿನಿಂದ ಇಂದಿನವರೆಗೂ ನಾವು ಬಿಟ್ಟೆವೆಂದರೂ ಬಿಡದೆ ನಮ್ಮ ಬುಡಕ್ಕೆ ಬಂದು ಬಂದು ನಮ್ಮ ಶರಣಸಂಕುಲದ ಅಸ್ಥಿತ್ವವನ್ನೆ ನಾಶಮಾಡುವ ಹುನ್ನಾರ,,,
ಶರಣರು ಯಾವತ್ತೂ ಇವರನೆರಳನ್ನೂ ಸಹ ಸೋಕಿದವರಲ್ಲ,,,ಅವರದೇ ಆದ ಕಾಯಕ ನಿಷ್ಟೆ ದಾಸೋಹ ದಲ್ಲೆ ದೇವರ ಕಂಡವರು
ಇವರಂತೆ ಕಲ್ಲುದೇವರ ಉಪಾಸಕರಲ್ಲ,,,
ಕೊನೆಯದಾಗಿ,,,,,,ಇವರಿಗೆ ಲಿಂಗಾಯತರ ನೆರಳಿಲ್ಲದೆ ಉಳಿಗಾಲವಿಲ್ಲ ಅದಕೆ ಆದಷ್ಟು ಅವರಲ್ಲಿ ವಿಷಬೆರೆಸುವ ಕಾಯಕ ಅಂದಿನಿಂದ ಇಂದಿನವರೆಗೂ ನಡೆದಿದೆ,,,ನಮ್ಮವೂ ಸಹ ಇವರ ತಾಳಕ್ಕೆ ಕುಣಿಯುವ ಗೊಂಬೆಗಳಾಗಿದ್ದು ದುಃಖಕರ,,😥
ಅರವಿಂದ ಜತ್ತಿಯವರು ಮಂಗಳೂರಿನಲ್ಲಿ ನಡೆದ
ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪೇಜಾವರ ಶ್ರೀಗಳು
ಆಡಿದ ಮಾತಿಗೆ ಶರಣರ ವಚನಗಳ ಮೂಲಕ ಸ್ಪಷ್ಟೀಕರಣ
ನೀಡಬೇಕಾಗಿದ್ದು ಅವರ ಕರ್ತವ್ಯ. ಒಂದು ಪರ್ಯಾಯ
ಧರ್ಮದ ಸಿದ್ದಾಂತವು ಇನ್ನೂಂದು ಧರ್ಮದ ಸಮೀಕರಣ
ಹೇಗೆ ಎಂಬುದು ನಾಡಿನ ಬಸವ ಸಮಿತಿಯ ಅಧ್ಯಕ್ಷರಾಗಿ,
ಸಮ್ಮೇಳನಾಧ್ಯಕ್ಷರಾಗಿದ್ದು ಉತ್ತರ ನೀಡುವುದು ನಿಮ್ಮ ಆದ್ಯ ಕರ್ತವ್ಯ . ಇದು ಒಬ್ಬ ಸಾಮಾನ್ಯ ವ್ಯಕ್ತಿಗೆ ಅರ್ಥವಾಗುತ್ತದೆ ನಿಮಗೆ ಅರ್ಥವಾಗಲಿಲ್ಲವೇ
ಬಸವಣ್ಣನವರ ಹೆಸರನ್ನು ಬಂಡವಾಳವಾಗಿ ಸ್ವಾರ್ಥಕ್ಕೆ
ಬಳಸಿಕೊಳ್ಳಬೇಡಿ. .
ವಿಶ್ವೇಶ್ವರಯ್ಯ ಬಿ.ಎಂ. ಅವರ ಎಂಟು ವಚನಗಳು ವೇದದಿಂದ ಪಡೆದವಾದರೆ ಅದರ ಸವಿಸ್ತಾರವಾದ ಅರ್ಥ ಮತ್ತು ಮಾಹಿತಿಯನ್ನು ಪೂಜ್ಯರು ತಿಳಿಸಬೇಕಾಗಿ ಸವಿನಯ ಪೂರ್ವಕ ವಿನಂತಿ.