ಬೆಳಗಾವಿ
ಲಿಂಗಾಯತ ಸಂಘಟನೆ ವತಿಯಿಂದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ವಾರದ ಸಾಮೂಹಿಕ ಪ್ರಾರ್ಥನೆ ಅನುಭಾವ ಕಾರ್ಯಕ್ರಮ ನಡೆಯಿತು.
ಶ್ರೀಕಾಂತ ಶಾನವಾಡ ಅವರು ಪ್ರಸಾದ ದಾಸೋಹದ ಕುರಿತು ಮಾತನಾಡುತ್ತಾ, “ಪ್ರಸಾದ ತತ್ವವು ಶರಣರ ತತ್ವವಾಗಿದ್ದು, ಕಾಯಕದಿಂದ ಪಡೆದದ್ದನ್ನು ದಾಸೋಹ ಮಾಡುವ ಮೂಲಕ ತಮ್ಮ ಸ್ವಂತ ಕ್ರಿಯೆಗಳಿಂದಲೇ ಕ್ರಿಯಾತೀತ ಸ್ಥಿತಿಯನ್ನು ತಲುಪುವುದೇ ಇದರ ಮುಖ್ಯ ಉದ್ದೇಶವಾಗಿದೆ” ಎಂದರು.
“ದಾಸೋಹ ತಾನು ಕಾಯಕದಿಂದ ಸಂಪಾದಿಸಿದ ಸಂಪತ್ತನ್ನು ಇತರರಿಗೆ ಹಂಚಿಕೊಳ್ಳುವುದು ಇದು ಒಂದು ನಿಷ್ಕಾಮ ಕ್ರಿಯೆಯಾಗಿದೆ. ಮತ್ತು ಪ್ರಸಾದಕ್ಕೆ ವಚನಕಾರರು ವಿಶೇಷ ಮಹತ್ವ ಕೊಡುತ್ತಾರೆ. ಬಹಳಷ್ಟು ಜನ ವಚನಕಾರರು ಗುರು ಲಿಂಗ ಜಂಗಮಕ್ಕೆ ಕೊಟ್ಟಷ್ಟೇ ಮಹತ್ವವನ್ನು ಪ್ರಸಾದಕ್ಕೆ ಕೊಡುತ್ತಾರೆ. ಉಪಯೋಗಕ್ಕೆ ಬಾರದ ವಸ್ತು ದಾಸೋಹವಾಗಿರಬಾರದು. ಅನುಗ್ರಹ ದಯೆ ಯಾವುದರಲ್ಲಿ ಸಮತೆ ಇರುವುದೋ ಅದೆ ಪ್ರಸಾದ. ನೈವೇದ್ಯ ನಂದು ಅಲ್ಲಾ, ಎಲ್ಲಾ ನಿನ್ನದೇ ಶಿವಾ ನಿನಗೇ ಮೀಸಲು, ಹೊಸ ಜೋಳ, ಗೋದಿ, ಗಿಣ್ಣ ಇತ್ಯಾದಿ ಮೀಸಲು ಇಡುವುದು ಪದ್ದತಿ ಇದೆ. ಪ್ರಸಾದ ಎಂದರೆ ಪ್ರಸರಿಸು ಹಂಚಿಕೊಳ್ಳುವುದು ಎಂದರ್ಥ” ಎಂದು ಶಾನವಾಡ ಹೇಳಿದರು.

ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಅಕ್ಕಮಹಾದೇವಿ ತೆಗ್ಗಿ, ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಬಸವರಾಜ ಇಂಚಲ, ಜಾಹ್ನವಿ ಘೋಪ೯ಡೆ, ಸುರೇಶ ನರಗುಂದ, ಶಂಕರ ಗುಡಸ, ಶರಣೆ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.
ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು. ಪ್ರತಿವಾರ ಮುಕ್ತ ವೇದಿಕೆ ಇದಾಗಿದ್ದು ವಚನ ವಿಶ್ಲೇಷಣೆ ಮಾಡಬಹುದಾಗಿದೆ. ಇದರ ಉಪಯೋಗ ಯುವ ವಗ೯ ಬಳಸಿಕೊಳ್ಳಬೇಕೆಂದರು. ಭಕ್ತಿ ಮಠದ ಪ್ರಸಾದ ವ್ಯವಸ್ಥೆ ಮಾಡಿದ್ದರು. ಸುವಣಾ೯ ಗುಡಸ, ಜಯಶ್ರೀ ಚಾವಲಗಿ, ಸುವಣಾ೯ಗುಡಸ, ಬಸವರಾಜ ಕರಡಿಮಠ, ರತ್ನಾ ಶಿವಾನಂದ ನಾಯಕ, ಗದಿಗೆಪ್ಪ ತಿಗಡಿ, ಮಹಾಂತೇಶ ಮೆಣಸಿನಕಾಯಿ, ಶ್ರೀದೇವಿ ನರಗುಂದ, ಸುವಣಾ೯ಗುಡಸ, ಜಯಶ್ರೀ ಚಾವಲಗಿ ಶರಣ ಶರಣೆಯರು ಉಪಸ್ಥಿತರಿದ್ದರು.
ಸುರೇಶ ನರಗುಂದ ಸ್ವಾಗತಿಸಿ ವಂದಿಸಿದರು.ಸಂಗಮೇಶ ಅರಳಿ ನಿರೂಪಿಸಿದರು. ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.