ರಾಯಬಾಗದ ಹಾರುಗೇರಿ ಪಟ್ಟಣದಲ್ಲಿ “ವಚನ ದರ್ಬಾರ್” ಕಾರ್ಯಕ್ರಮ

ರಾಯಬಾಗ:

ಮಹಿಳಾ ಕದಳಿ ವೇದಿಕೆ ತಾಲೂಕು ಘಟಕದ ವತಿಯಿಂದ, ಹಾರುಗೇರಿ ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ನಡೆದ “ವಚನ ದರ್ಬಾರ್” ಕಾರ್ಯಕ್ರಮವು ಶರಣೆ ಶ್ರೀಮತಿ ಆಶಾ ಕುಮಾರಿ ಮಹಾದೇವ ನಾವ್ಹಿ ಅವರ ಮಹಾಮನೆಯಲ್ಲಿ ನೇರವೇರಿತು.

ಪೂಜ್ಯ ಗುರುಗಳಾದ ಶ್ರೀ ಆಯ್. ಆರ್. ಮಠಪತಿ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮ ರೂಪಿಸಲಾಗಿದೆ. ಅಲಕ್ಷಿತ ವಚನಕಾರರ ವಚನಗಳನ್ನು ಆರಿಸಿ ಮೂರು ಊರುಗಳಲ್ಲಿ ಒಟ್ಟಿಗೆ ಒಂದೇ ಬಗೆಯ ವಚನಗಳನ್ನು ಎಲ್ಲಾ ಕದಳಿ ವೇದಿಕೆಯ ಸದಸ್ಯೆಯರಿಂದ ಪ್ರತಿದಿನವೂ ಒಂದೊಂದು ವಚನ ನಿರ್ವಚನ ಮಾಡುವ ವಿಶಿಷ್ಟ ಕಾರ್ಯಕ್ರಮಕ್ಕೆ ರೂಪೂರೇಷೆ ಹಾಕಿಕೊಟ್ಟು “ವಚನ ದರ್ಬಾರ್” ಕಾರ್ಯಕ್ರಮವನ್ನು ಮಠಪತಿ ಶರಣರು ವಿಶಿಷ್ಟವಾಗಿರಿಸಿದ್ದಾರೆ. ಈ ನವರಾತ್ರಿ ಕಾರ್ಯಕ್ರಮಗಳು 11ನೇ ವರ್ಷಕ್ಕೆ ಕಾಲಿಟ್ಟಿದೆ.

ಮೊದಲ ದಿನದ “ವಚನ ದರ್ಬಾರ್ ” ಕಾರ್ಯಕ್ರಮದಲ್ಲಿ ಶರಣೆ ರೇಚವ್ವೆಯ ವಚನ ನಿರ್ವಚನವನ್ನು ಕದಳಿ ವೇದಿಕೆಯ ಅಧ್ಯಕ್ಷರಾದ ಶರಣೆ ಶ್ರೀಮತಿ ಅನುಸೂಯ ಶೇ. ಮುಳವಾಡ ಅವರು ನೇರವೇರಿಸಿದರು. ಪ್ರತಿದಿನ ಶರಣೆಯೊಬ್ಬರ ವಚನಗಳ ನಿರ್ವಚನ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ಶರಣು ಸಮರ್ಪಣೆಯನ್ನು ಕುಮಾರಿ ಅಂಜಲಿ ನಾವ್ಹಿ ನೇರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಉಪನ್ಯಾಸಕರಾದ ಡಾ.ರತ್ನಾ ಬಾಳಪ್ಪನವರ ಅವರು ವಹಿಸಿಕೊಂಡಿದ್ದರು. ಕದಳಿ ವೇದಿಕೆಯ ಎಲ್ಲಾ ಸದಸ್ಯೆಯರು ಹಾಜರಿದ್ದು 30ಕ್ಕು ಹೆಚ್ಚು ವಚನಗಳ ಪಠಣ ಮಾಡುವುದರ ಮೂಲಕ ಗಮನ ಸೆಳೆದರು.

ಗ್ರಾಮದ ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share This Article
1 Comment

Leave a Reply

Your email address will not be published. Required fields are marked *