ವಚನ ಪಠಣದೊಂದಿಗೆ ರಾಯಚೂರಿನಲ್ಲಿ ಬಸವ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಶಿವಕುಮಾರ ಮಾಟೂರ
ಶಿವಕುಮಾರ ಮಾಟೂರ

ರಾಯಚೂರು:

ರಾಯಚೂರು ನಗರದ ಬಸವ ಕೇಂದ್ರ ಮತ್ತು ಅಕ್ಕನ ಬಳಗದ ಸಕ್ರಿಯ ಸದಸ್ಯರಾದ ಡಾಕ್ಟರ್ ಪ್ರಿಯಾಂಕ ಗದ್ವಾಲ್ ಇವರ ನೂತನ ಬಸವ ಡೆಂಟಲ್ ಕ್ಲಿನಿಕ್ ಉದ್ಘಾಟನೆ ಕಾರ್ಯಕ್ರಮ ಬಸವ ತತ್ವದ ಅಡಿಯಲ್ಲಿ ವೈಚಾರಿಕ ನೆಲೆಯಲ್ಲಿ, ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.

ಬಸವಾದಿ ಶರಣರ ವಚನಗಳ ಘೋಷದೊಂದಿಗೆ, ಶರಣ ದಂಪತಿಗಳಾದ ಡಾಕ್ಟರ್ ಪ್ರಿಯಾಂಕ ಗದ್ವಾಲ್ (ದಂತ ವೈದ್ಯ ತಜ್ಞರು) ಮತ್ತು ಡಾಕ್ಟರ್ ಅವಿನಾಶ್ ಗದ್ವಾಲ್ (ಮಕ್ಕಳ ತಜ್ಞರು) ವಿಶ್ವಗುರು ಬಸವಣ್ಣನವರ ಭಾವಚಿತ್ರ ಮತ್ತು ವಚನ ಸಾಹಿತ್ಯ ಪುಸ್ತಕವನ್ನು ಹೊತ್ತುಕೊಂಡು ನೂತನ ಆಸ್ಪತ್ರೆಯ ಒಳಕ್ಕೆ ಬರುವುದರೊಂದಿಗೆ, ಬಸವ ಡೆಂಟಲ್ ಕ್ಲಿನಿಕ್ ಉದ್ಘಾಟನೆ ಯಾಯಿತು.

ಯಾವುದೇ ವೈದಿಕ ಆಚರಣೆಯ ಆಡಂಬರವಿಲ್ಲದೆ, ಅರ್ಥವಾಗದ ಸಂಸ್ಕೃತ ಮಂತ್ರಘೋಷವಿಲ್ಲದೆ, ವೈದಿಕ ಪದ್ಧತಿಯ ಆಚಾರ ಅಥವಾ ಪೂಜಾರಿಗಳಿಲ್ಲದೆ ಯಜ್ಞ, ಹೋಮ, ಹವನ, ಅಭಿಷೇಕವೆಂದು ದುಂದು ವೆಚ್ಚ ಮಾಡದೆ, ಅಪ್ಪಟ ಬಸವ ತತ್ವದ ಅಡಿಯಲ್ಲಿ, ಅನೇಕ ಬಸವಾದಿ ಶರಣರ ವಚನಗಳನ್ನು ಪಠಣ ಮಾಡುತ್ತಾ ಸರಳವಾಗಿ ಜರುಗಿದ ಈ ಉದ್ಘಾಟನಾ ಕಾರ್ಯಕ್ರಮ ನೆರೆದಿದ್ದ ಎಲ್ಲ ಬಸವಾಭಿಮಾನಿಗಳ ಹಾಗೂ ಗದ್ವಾಲ್ ಕುಟುಂಬದವರ ಮನಸೂರೆಗೊಂಡಿತು.

ಬಸವ ಕೇಂದ್ರದ ಅಧ್ಯಕ್ಷರಾದ ಶರಣ ಶ್ರೀ ರಾಚನಗೌಡ ಕೋಳೂರು ಮತ್ತು ಅಕ್ಕನ ಬಳಗದ ಅಧ್ಯಕ್ಷರಾದ ಶರಣೆ ಜಗದೇವಿ ಚೆನ್ನಬಸವ ಅವರು ಶರಣ ದಂಪತಿಗಳಿಗೆ ಗೌರವ ಸನ್ಮಾನ ಸಮರ್ಪಣೆ ಮಾಡಿದರು.

ಬಸವಾದಿ ಪ್ರಮಥರ ಕೃಪೆಯಿಂದ, ನೂತನ ಬಸವ ಡೆಂಟಲ್ ಕ್ಲಿನಿಕ್, ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಮತ್ತು ನಗರಕ್ಕೆ ಮಾದರಿ ಕ್ಲಿನಿಕ್ ಆಗಿ ಬೆಳೆಯಲಿ ಎಂದು ನೆರೆದಿದ್ದ ಅಣ್ಣನ ಬಳಗ ಮತ್ತು ಅಕ್ಕನ ಬಳಗದ ಸದಸ್ಯರು ಶುಭ ಹಾರೈಸಿದರು.

Share This Article
Leave a comment

Leave a Reply

Your email address will not be published. Required fields are marked *