ರಾಯಚೂರು ನಿಜಾಚರಣೆ ಕಮ್ಮಟದಲ್ಲಿ 300 ಶರಣ, ಶರಣೆಯರು ಭಾಗಿ

ರಾಯಚೂರು

ಲಿಂಗಾಯತ ಧರ್ಮದ ಸಂಸ್ಕಾರ ಸಿದ್ಧಾಂತ ಮತ್ತು ನಿಜಾಚರಣೆಗಳ ಕಮ್ಮಟದ ಎರಡನೇ ದಿನ ಶರಣ ಪಿ. ರುದ್ರಪ್ಪ ಅವರು, ಶಿವಯೋಗ ಅಷ್ಟಾವರಣ ಮತ್ತು ಪಂಚಾಚಾರಗಳ ನಿರ್ವಹಣೆ ಕುರಿತು ಅನುಭಾವ ನೀಡಿದರು. ಲಿಂಗಾಚಾರಣೆಯ ಮಹತ್ವವನ್ನು ತಿಳಿಸಿ, ಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿದರು. 

ಕಲಬುರ್ಗಿಯ ಮಹಾಂತೇಶ ಕುಂಬಾರ ಅವರು ಲಿಂಗಾಂಗ ಯೋಗದ ಬಗ್ಗೆ ಸರಳವಾಗಿ ತಿಳಿಸಿ, ಅನುಭಾವವನ್ನು ನೀಡಿದರು.

ಕಲ್ಯಾಣ ಮಹೋತ್ಸವ  ಆಚರಣೆ ಹಾಗೂ ಕಾರ್ಯ ವಿಧಾನ, ಅಂತ್ಯಸಂಸ್ಕಾರ ವಿಧಾನ ಮತ್ತು ಸ್ಮರಣೋತ್ಸವ ಕಾರ್ಯ ವಿಧಾನಗಳನ್ನು ಶರಣ ಎಸ್. ಎನ್. ಅರಭಾವಿ ಅವರು ತಿಳಿಸಿಕೊಟ್ಟರು.

ಲಿಂಗಾಯತ ಧರ್ಮ ಇತರ ಧರ್ಮಗಳಿಗಿಂತ ಹೇಗೆ ಭಿನ್ನವಾಗಿದೆ ಹಾಗೂ ಅದರ ವೈಶಿಷ್ಟತೆಗಳ ಕುರಿತು ಎಸ್.ಎನ್. ಅರಭಾವಿ ತಮ್ಮ ಅನುಭಾವ ನುಡಿಗಳನ್ನಾಡಿದರು.

ಸೃಷ್ಟಿಯ ಬಗ್ಗೆ ಮೊದಲು ತಿಳಿದುಕೊಂಡವರೇ ಬಸವಣ್ಣನವರು. ಆ ಮಹಾಬೆಳಗನ್ನು ಕಾಣಲು ನಾವು ಅಷ್ಟಾವರಣ,  ಷಟಸ್ಥಲ, ಪಂಚಾಚಾರಗಳನ್ನು ಲಿಂಗವಂತರು ತಪ್ಪದೇ ಪಾಲಿಸಬೇಕೆಂದು ಪ್ರೊ. ಸಂಜಯ್ ಮಾಕಲ್ ತಿಳಿಸಿದರು.

ವೇದಿಕೆಯ ಮೇಲೆ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಶರಣೆ ಲಲಿತಾ ಡಾ. ಎಂ. ಬಸನಗೌಡ, ಪಿ. ರುದ್ರಪ್ಪಗೌಡರು, ಜೆ. ಬಸವರಾಜ, ಅನ್ನಪೂರ್ಣಮ್ಮ ಮೇಟಿ, ಡಾ. ಸರ್ವಮಂಗಳ ಸಕ್ರಿ, ಉಪಸ್ಥಿತರಿದ್ದರು. ನಾಗನಗೌಡ ಹರವಿ ಅವರು  ಅಧ್ಯಕ್ಷತೆ ವಹಿಸಿದ್ದರು.

ಕುಮಾರಿ ಖುಷಿ ಅವರು ವಚನ ನೃತ್ಯ ಮಾಡಿದರು. ಶರಣೆ ಸುಮಂಗಲ ಸಕ್ರಿ ಅವರು ಕಾರ್ಯಕ್ರಮ ನಿರೂಪಿಸಿದರು.

ಕಮ್ಮಟದಲ್ಲಿ ಒಟ್ಟು 300  ಶರಣ – ಶರಣೆಯರು ಭಾಗವಹಿಸಿದ್ದರು. ಮಾರ್ಚ್ 1, 2 ಎರಡು ದಿನ ಬಸವ ಕೇಂದ್ರದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಅಕ್ಕನ ಬಳಗ, ಕದಳಿ ವೇದಿಕೆ, ವಿಶ್ವ ವಚನ ಫೌಂಡೇಶನ್ ಹಾಗೂ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಕಮ್ಮಟ ಯಶಸ್ವಿಯಾಗಿ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/IxxC2m7AXyW84KPf73t5iL

Share This Article
3 Comments
  • ಅತ್ಯುತ್ತಮ ಸಂಘಟನೆ. ರಾಯಚೂರು ಬಸವಕೇಂದ್ರ ಒಂದು ಶಕ್ತಿಕೇಂದ್ರ. ಶರಣ ಪಿ ರುದ್ರಪ್ಪನವರು ನಿಜಾಚರಣೆ ಅದ್ಭುತ ಶಕ್ತಿ. ಇದೇ ರೀತಿ ಎಲ್ಲ ಜಿಲ್ಲೆಗಳಲ್ಲಿ ನಡೆಯಲೆಂದು ಹಾರೈಸುತ್ತೇನೆ. ಸುಂದರ ಕಾರ್ಯಕ್ರಮ ಯಶಸ್ವಿ ಮಾಡಿದ್ದಕ್ಕೆ ಸರ್ವರಿಗೂ ಅಭಿನಂದನೆಗಳು. ಶರಣು ಶರಣಾರ್ಥಿಗಳು 🎉💐🎉💐🙏🙏

  • ರಾಯಚೂರ ಬಸವಕೇಂದ್ರದಲ್ಲಿ ನಿಜಾಚರಣೆ ಕಾರ್ಯಕ್ರಮವು ಅದ್ಭುತ ಯಶಸ್ವಿ ಕಂಡಿತು.🙏🙏

  • ಉತ್ತಮ ಕಾರ್ಯಕ್ರಮ! ಶರಣ ಪಿ.ರುದ್ರಪ್ಪನವರು ಉಳಿದವರ ಸಹಯೋಗದೊಂದಿಗೆ ಲಿಂಗಾಯತ ನಿಜಾಚರಣೆಗಳ ಬಗ್ಗೆ ಒತ್ತು ಕೊಡುತ್ತಿರುವುದು ಶ್ಲಾಘನೀಯ! ಶರಣು, ಶರಣಾರ್ಥಿಗಳು!

Leave a Reply

Your email address will not be published. Required fields are marked *