ಶಿವರಾತ್ರಿ: ರಾಯಚೂರು ಬಸವ ಕೇಂದ್ರದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ರಾಯಚೂರು

ನಗರದ ಬಸವ ಕೇಂದ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ “ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶರಣರ ದೃಷ್ಟಿಯಲ್ಲಿ ಇಷ್ಟಲಿಂಗ ಪೂಜಾ ವಿಧಾನ ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶರಣೆ ಪಾರ್ವತಿ ಪಾಟೀಲ ಅವರು ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ನಡೆಸಿಕೊಟ್ಟು, ಶರಣರ ದೃಷ್ಟಿಯಲ್ಲಿ ಇಷ್ಟಲಿಂಗ ಪೂಜಾಕ್ರಮ ಮತ್ತು ಮಹತ್ವವನ್ನು ತಿಳಿಸಿದರು.

ಶರಣೆ ಮುಕ್ತಾ ನರಕಲದಿನ್ನಿ ಮಾತನಾಡಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ತಮ್ಮ ಸ್ವಾರ್ಥಕ್ಕಾಗಿ ಲಿಂಗಾಯತ ಧರ್ಮಕ್ಕೆ ಪೆಟ್ಟು ಕೊಡುತ್ತಲೇ ಬಂದು ಹೀನಾಯ ಸ್ಥಿತಿ ಮುಟ್ಟಿಸಿದ್ದರು. ಇಂಥ ಪೆಟ್ಟುತಿಂದ ಸಂದರ್ಭದಲ್ಲಿ ಧರ್ಮವನ್ನು ಎತ್ತಿ ಹಿಡಿದ ರಕ್ಷಿಸಿದ ಶ್ರೇಯಸ್ಸು ಡಾ. ಫ. ಗು. ಹಳಕಟ್ಟಿ, ಹರ್ಡೇಕರ ಮಂಜಪ್ಪ ಹಾಗೂ ಉತ್ತಂಗಿ ಚನ್ನಪ್ಪ ಅವರಂಥವರಿಗೆ ಸಲ್ಲುತ್ತದೆಂದು ಸ್ಮರಿಸಿದರು.

ಇಂಥ ಲಿಂಗಾಂಗ ಪ್ರಾತ್ಯಕ್ಷಿತೆ ಯುವ ಜನಾಂಗಕ್ಕೆ ಪ್ರೇರಣಾ ಶಕ್ತಿಯಾಗಬೇಕು. ಸಂಘಟನಾತ್ಮಕರಾಗಿ ಒಕ್ಕಟ್ಟಿನಿಂದ ಬದುಕಲು ಸಾಧ್ಯವೆಂದರು.

ಶರಣೆ ಸರ್ವಮಂಗಳ ಸಕ್ರಿ ಮಾತನಾಡಿದರು. ಷಟಸ್ಥಲ ಧ್ವಜಾರೋಹಣವನ್ನು ಕಾರ್ಯದರ್ಶಿ ಚನ್ನಬಸವಣ್ಣ ಮಹಾಜನಶೆಟ್ಟಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಚನ್ನಬಸವ, ಉಪಾಧ್ಯಕ್ಷರು ಬಸವ ಕೇಂದ್ರ ವಹಿಸಿದ್ದರು. ವಚನಗಾಯನ ಡಾ. ಪ್ರಿಯಾಂಕ ಗದ್ವಾಲ್ ಹಾಗೂ ಪೂರ್ಣಿಮಾ ಪಾಟೀಲ ಹಾಡಿದರು. ಸರೋಜಾ ಮಾಲಿಪಾಟೀಲ, ಸಿ. ಬಿ. ಪಾಟೀಲ, ಲಲಿತಾ ಮಲ್ಲಿಕಾರ್ಜುನ ಗುಡಿಮನಿ, ಜಯಶ್ರೀ ಮಹಾಜನಶೆಟ್ಟಿ, ಪ್ರಭಾವತಿ ಹರವಿ, ವೆಂಕಣ್ಣ ಆಶಾಪುರ, ನಿರ್ಮಲ ಮುಂತಾದವರು ಉಪಸ್ಥಿತರಿದ್ದರು.

ಶರಣಬಸವ ನರಕಲದಿನ್ನಿ ಸ್ವಾಗತಿದರು, ಡಾ. ಲಲಿತಾ ಬಸವನಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವರಂಜಿನಿ ನಿರೂಪಿಸಿದರು. ರೇಖಾ ಪಾಟೀಲ ಶರಣು ಸಮರ್ಪಣೆ ಮಾಡಿದರು.

Share This Article
Leave a comment

Leave a Reply

Your email address will not be published. Required fields are marked *