ರಾಯಚೂರು
ಬಸವ ಕೇಂದ್ರದಲ್ಲಿ ರವಿವಾರ ಶರಣ ಚಿಂತನೆ ಹಾಗೂ ಮಕ್ಕಳಿಗೆ ವಚನ ಪಾಠ ಕಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶರಣ ರಂಗಪ್ಪ ಮೇದಾರ ಅಧ್ಯಕ್ಷರು, ಬಸವ ಕೇಂದ್ರ, ಮಾನ್ವಿ ವಿಶೇಷ ಚಿಂತಕರಾಗಿ ಆಗಮಿಸಿ, ಸಕಲರನ್ನು ನಮ್ಮವ, ಇವನಮ್ಮವ ಎಂದು ಅಪ್ಪಿಕೊಳ್ಳುವ ಬಸವಣ್ಣನವರ ಶ್ರೇಷ್ಠತೆಗೆ ಮಾರುಹೋದ ವಿಚಾರವಂತರು ಬಸವಪ್ರಜ್ಞೆಯನ್ನು ಪಾಲಿಸುತ್ತಿದ್ದಾರೆ. ನಾವು ಕೂಡ ವಚನಗಳನ್ನು ಅಧ್ಯಯನ ಮಾಡಿ, ಶರಣರ ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.
ಬೆಟ್ಟಪ್ಪ ಕಸ್ತೂರಿ ಮಾತನಾಡಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕ ಬಸವಪ್ರಜ್ಞೆಯನ್ನೇ ಆಧಾರವಿಟ್ಟುಕೊಂಡು ನಡೆದರೆ ಹೊಸ ತಿರುವು ಪಡೆಯಲು ಸಾಧ್ಯವೆಂದರು.
ಪ್ರೊ. ಪರಮೇಶ್ವರ ಸಾಲಿಮಠ ಮಾತನಾಡಿ, ಬಸವಣ್ಣನವರು ಧರ್ಮ, ಕ್ರಾಂತಿಯ ಹೆಸರಿನಿಂದ ಭ್ರಮೆಗಳನ್ನು ಹುಟ್ಟಿಸಲಿಲ್ಲ, ಶೋಷಣೆಗೆ ಯಾವುದೇ ಅವಕಾಶ ಮಾಡಿಕೊಡಲಿಲ್ಲ, ವಾಸ್ತವತೆಯ ಬದುಕನ್ನು ಪರಿಚಯಸುವ ನಿಟ್ಟಿನಲ್ಲಿ ಬಸವಣ್ಣನವರ ಕೊಡುಗೆ ಅಪಾರವಾಗಿದೆಂದರು.

ಶರಣೆ ಪೂರ್ಣಿಮಾ ಮೇಡಂ ಮಕ್ಕಳಿಂದ ವಚನ ಪಠಣ ಮಾಡಿಸಿದರು. ಅಧ್ಯಕ್ಷತೆಯನ್ನು ರಾಚನಗೌಡ ಕೋಳೂರ ವಹಿಸಿದ್ದರು. ಸುಮಂಗಲಾ ಪಾಟೀಲ, ಸರೋಜಾ ಅಕ್ಕ ಮಾಲಿಪಾಟೀಲ, ಸುಮಂಗಲಾ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ವಚನಗಾಯನ / ಸಾಮೂಹಿಕ ಬಸವ ಪಾರ್ಥನೆಯನ್ನು ರಾಘವೇಂದ್ರ ಆಶಾಪುರ, ಪಾರ್ವತಿ ಪಾಟೀಲ, ನಾಗೇಶಪ್ಪ ನಡೆಸಿಕೊಟ್ಟರು.

ವೆಂಕಣ್ಣ ಆಶಾಪುರ ಸ್ವಾಗತಿಸಿದರು. ಸಿ. ಬಿ. ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಜೆ. ಬಸವರಾಜ ವಕೀಲರು ವಂದಿಸಿದರು.
