ರಾಜಕಾರಣವು ಸೇವೆಯ ಒಂದು ಮಾದರಿ: ಇಳಕಲ್ ಶ್ರೀ

ಹುನಗುಂದ

‘ಸಮಾಜದಲ್ಲಿ ಎರಡು ವರ್ಗಗಳಿರುತ್ತವೆ. ಒಂದು ಉತ್ಪಾದಕ ವರ್ಗ ಇನ್ನೊಂದು ಸೇವಾ ವರ್ಗ. ಉತ್ಪಾದಕ ವರ್ಗ ಕ್ರಿಯಾಶೀಲವಾಗಬೇಕು, ಸೇವಾವರ್ಗ ಅದಕ್ಕೆ ಸಹಾಯಕವಾಗಿ ನಿಲ್ಲಬೇಕು. ರಾಜಕಾರಣವು ಸೇವಾ ವರ್ಗದ ಒಂದು ಮಾದರಿ’ ಎಂದು ಇಳಕಲ್ ಗುರುಮಂಹಾತ ಸ್ವಾಮೀಜಿ ಹೇಳಿದರು.

ಇಲ್ಲಿನ ಎಸ್.ಎಸ್. ಕಡಪಟ್ಟಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ನಡೆದ ಮಾಜಿ ಶಾಸಕ ಶಿವಸಂಗಪ್ಪ ಸಿದ್ದಪ್ಪ ಕಡಪಟ್ಟಿ ಅವರ 35ನೇ ಸ್ಮರಣೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಶಿವಸಂಗಪ್ಪ ರೈತನಾಗಿ, ರಾಜಕಾರಣಿಯಾಗಿ, ಶಾಸಕರಾಗಿ, ವ್ಯಾಪಾರಿಯಾಗಿದ್ದರೂ ತಮ್ಮ ಸರಳತೆ ಮತ್ತು ಉನ್ನತ ವಿಚಾರಗಳಿಂದ ಜನರ ಮನಸ್ಸನ್ನು ಗೆದ್ದಿದ್ದರು’ ಎಂದು ಹೇಳಿದರು.

ತುಂಗಭದ್ರಾ ಕಾಡಾದ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ ಮಾತನಾಡಿ, ‘ಶಿವಸಂಗಪ್ಪ ಕಡಪಟ್ಟಿ ಅವರು ಶಿಸ್ತಿನ ಸಿಪಾಯಿ ಹಾಗೂ ಜನರ ಬದುಕನ್ನು ಹಸನಾಗಿಸುವ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿದ್ದ ವ್ಯಕ್ತಿ’ ಎಂದರು.

ಲಿಂಗಸುಗೂರಿನ ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಹಾಗೂ ಕುಷ್ಟಗಿಯ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ವಿ.ಎಸ್. ಪಾಟೀಲ, ಮಾತಾ ಎಜುಕೇಷನಲ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್‌ನ ಟ್ರಸ್ಟಿ ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ಶಾಲೆಯ ಪ್ರಾಚಾರ್ಯ ಸಾಯಿಕೃಷ್ಣ, ಶಿಕ್ಷಕರಾದ ಲಕ್ಷ್ಮಿ, ಆಸ್ಮ, ಕಾವ್ಯ, ಸಂಗು ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *