ರಾಮತ್ನಾಳದ ನೂರು ಮನೆಗಳಲ್ಲಿ ವಚನ ಗ್ರಾಮ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಸಿಂಧನೂರು

ಸಿಂಧನೂರು ತಾಲೂಕಿನ ರಾಮತ್ನಾಳ ಗ್ರಾಮದಲ್ಲಿ ವಿಶ್ವ ವಚನ ಪೌಂಡೇಶನ್, ರಾಯಚೂರು ಜಿಲ್ಲೆ ವತಿಯಿಂದ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ವಚನ ಗ್ರಾಮ ಕಾರ್ಯಕ್ರಮ ನಡೆಯಿತು.

ಬಸವಣ್ಣನವರ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಇನ್ನಿತರ ವಚನಕಾರರ ವಚನಗಳನ್ನು ಹೇಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.

ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅಮರೇಗೌಡ ಮಾಲಿಪಾಟೀಲ ಅವರು ಆತ್ಮೋನ್ನತಿಗಾಗಿ ಬಸವಾದಿ ಶರಣರ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಒಳಿತು ಎಂದರು.

ವಚನಕಾರ ಶಶಿಧರ ಸ್ವಾಮಿ ಉದ್ಬಾಳ ಹಾಗೂ ಶರಣಯ್ಯ ಸ್ವಾಮಿ ಮಾತನಾಡಿ, ಲಿಂಗನಿಷ್ಠೆ ಜಂಗಮನಿಷ್ಠೆ, ಭಕ್ತಿನಿಷ್ಠೆ ಮತ್ತು ಕಾಯಕನಿಷ್ಠೆಗಳು ದಾನವರನ್ನು ಮಾನವನ್ನಾಗಿ ಮಾಡುತ್ತವೆ ಎಂದು ಹೇಳಿದರು.

ಸಾಹಿತಿ ಶ್ರೀಧರ ಮಸ್ಕಿ ಮಾತನಾಡಿ, ಪ್ರತಿಯೊಬ್ಬರಿಗೂ ಅನುಭವ ದೊಡ್ಡದು, ಜೀವನ ಪ್ರತಿನಿತ್ಯ ಹೊಸತನವನ್ನು ಪಡೆಯುತ್ತಾ ಸಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮರಗುಂಡಪ್ಪ ಹೂಗಾರ ನಾನು ಎಂಬ ಮನೋಭಾವ ಬಿಟ್ಟು ಮನದ ಗುಣದಲ್ಲಿ ಎಲ್ಲರೂ ಶರಣರಂತೆ ಒಗ್ಗಟ್ಟಾಗಿ ಇರಬೇಕು ಎಂದರು.

ಗ್ರಾಮದ ಹಿರಿಯರಾದ ಅಮರೇಗೌಡ ಮಾಲಿಪಾಟೀಲ, ಅಮರಪ್ಪಗೌಡ ಶಾಖಾಪೂರ, ವೀರೇಶ ಹೂಗಾರ, ಸಿದ್ದಾರೆಡ್ಡಿ ಶಿವರಾಜ್ ದಿನ್ನಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸುಮಾರು ನೂರು ಮನೆಗಳಿಗೆ ವಚನಗಳ ಕಿರುಪುಸ್ತಕ ತಲುಪಿಸಲಾಯಿತು.

ವಿಶ್ವ ವಚನ ಪೌಂಡೇಶನ್ ರಾಯಚೂರು ಜಿಲ್ಲೆಯ ಅಧ್ಯಕ್ಷ ಶರಣ ಬೆಟ್ಟಪ್ಪ ಕಸ್ತೂರಿ ಅತ್ತನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರೂಪಣೆ ಮಹಾಂತೇಶ ಗವಿಗಟ್ಟ ಮಾಡಿದರು, ಮೈನುದ್ದೀನ ಬೂದಿನಾಳ ವಂದಿಸಿದರು.

Share This Article
1 Comment

Leave a Reply

Your email address will not be published. Required fields are marked *