ಬಸವಕಲ್ಯಾಣ
‘ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಅನುಭವ ಮಂಟಪ ಲೋಕಾರ್ಪಣೆಗೆ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರಿಗೆ ಆಹ್ವಾನ ನೀಡುತ್ತೇನೆ’ ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದಸರಾ ದರ್ಬಾರ್ ಕಾರ್ಯಕ್ರಮದಿಂದ ಈ ನೆಲ ಪಾವನವಾಗಿದೆ. ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಬರೆಸಬೇಕು. ನಾನೂ ಅದನ್ನೇ ಬರೆಸುತ್ತೇನೆ,’ ಎಂದರು.
ಸಮ್ಮೇಳನದಲ್ಲಿ ರಂಭಾಪುರಿ ಶ್ರೀ ಗದಗಿನ ವಿಮುಲರೇಣುಕ ವಿರಕ್ತಮುನಿ ಶಿವಾಚಾರ್ಯರಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ಶಾಸಕ ಶರಣು ಸಲಗರ ಉಪಸ್ಥಿತರಿದ್ದರು
ಬಸವಕಲ್ಯಾಣದ ಅವಿವೇಕಿ ಶಾಸಕ ಈತ ಶರಣ ಚಳುವಳಿಯ ಬಸವ ವಿರೋಧಿ
ನಾನು ಈ ಮುಖಾಂತರ ಬಸವದ್ರೋಹಿ (ಶೋ)ಶಾಷಕನಿಗೆ ಧಿಕ್ಕಾರ ಹೇಳುತ್ತೇನೆ