ವಾಹನ ಪಲ್ಲಕ್ಕಿಗೆ ಒಪ್ಪಿದ ರಂಭಾಪುರಿ ಶ್ರೀ, ವಿರೋಧ ನಿಲ್ಲಿಸಿದ ಭಾಲ್ಕಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್

ಬಸವಕಲ್ಯಾಣದಲ್ಲಿ ಭಕ್ತರ ಹೆಗಲ ಬದಲು ತೆರೆದ ವಾಹನದ ಮೇಲೆ ಅಡ್ಡಪಲ್ಲಕ್ಕಿ ಉತ್ಸವ ನಡೆಸಲು ರಂಭಾಪುರಿ ವೀರಸೋಮೇಶ್ವರ ಶ್ರೀಗಳು ಸಮ್ಮತಿ ನೀಡಿದ್ದಾರೆ.

ಅದರ ಹಿನ್ನೆಲೆಯಲ್ಲಿಯೇ ಇಂದು ಬಸವಕಲ್ಯಾಣದಲ್ಲಿ ನಡೆಯಬೇಕಿದ್ದ ದಸರಾ ದರ್ಬಾರ ವಿರೋಧಿ ಸಭೆಯನ್ನು ಡಾ. ಬಸವಲಿಂಗ ಪಟ್ಟದೇವರು ರದ್ದು ಗೊಳಿಸಿದ್ದಾರೆ.

ಶನಿವಾರ ಸಂಜೆ ಕಳಿಸಿದ ಪ್ರಕಟಣೆಯಲ್ಲಿ ರಂಭಾಪುರಿ ಶ್ರೀಗಳು ಹಾರಕೂಡ ಪೂಜ್ಯರ ಮಾರ್ಗದರ್ಶನದಲ್ಲಿ, ಸ್ವಾಗತ ಸಮಿತಿಯ ಮತ್ತು ಈ ಭಾಗದ ಭಕ್ತರ ಇಚ್ಛಾನುಸಾರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಮುಂಚೆ ಅಡ್ಡ ಪಲ್ಲಕ್ಕಿಯ ವಿಷಯದಲ್ಲಿ ದಸರಾ ದರ್ಬಾರ್ ಸಮಿತಿ ಮತ್ತು ರಂಭಾಪುರಿ ಶ್ರೀಗಳ ನಡುವೆ ಗಂಭೀರವಾದ ಬಿನ್ನಾಭಿಪ್ರಾಯ ಮೂಡಿತ್ತು.

ಸಮಿತಿಯ ಸದಸ್ಯರು ರಂಭಾಪುರಿ ಶ್ರೀಗಳಿಗೆ ಬಸವಣ್ಣನವರ ನಾಡಿನಲ್ಲಿ ನಿಮ್ಮ ಹೊತ್ತುಕೊಂಡು ಅಡ್ಡಪಲ್ಲಕ್ಕಿ ಮಾಡುವುದು ಬೇಡ, ವಾಹನದಲ್ಲಿ ಕೂರಿಸಿ ಮಾಡೋಣ ಎಂದು ಹೇಳಿದ್ದರು. ಅದನ್ನು ಶ್ರೀಗಳು ತಿರಸ್ಕರಿಸಿದ ಮೇಲೆ ಹಾರಕೂಡ ಶ್ರೀಗಳು ದಸರಾ ದರ್ಬಾರ್ ಕಾರ್ಯಕ್ರಮದಿಂದ ದೂರವುಳಿಯಲು ನಿರ್ಧರಿಸಿದ್ದರು.

ರಂಭಾಪುರಿ ಶ್ರೀಗಳ ಪ್ರಕಟಣೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಭಾಲ್ಕಿ ಶ್ರೀಗಳು ಒಂದು ಹೇಳಿಕೆ ನೀಡಿ ಇಂದಿನ ಸಭೆಯನ್ನು ರದ್ದುಗೊಳಿಸಿದರು.

“ರಂಭಾಪುರಿ ಶ್ರೀಗಳು ಬಸವಕಲ್ಯಾಣದ ದಸರಾ ದರ್ಬಾರದಲ್ಲಿ ಮನುಷ್ಯರ ಹೆಗಲ ಮೇಲೆ ಅಡ್ಡಪಲ್ಲಕ್ಕಿ ಮಾಡುವುದಿಲ್ಲ ಎಂದು ಹೇಳಿಕೆ ಪ್ರಕಟಿಸಿದ್ದಾರೆ. ಅದಕ್ಕಾಗಿ ಬಸವ ತತ್ವಪರ ಇದ್ದ ಅನೇಕ ಪೂಜ್ಯರ ಮತ್ತು ಗಣ್ಯರ ಜೊತೆ ಚರ್ಚಿಸಿ ನಾಳಿನ ಸಭೆ ರದ್ದುಗೊಳಿಸಲಾಗಿದೆ,” ಎಂದು ಭಾಲ್ಕಿ ಶ್ರೀ ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
9 Comments
  • ಬಸವ ಭಕ್ತರು ಕೇವಲ ಶಿವನ ವಾಹನವಾದ ಮೃತದೇಹವನ್ನು ಹೊತ್ತು ಮೋಕ್ಷ. ಸ್ಥಳಕ್ಕೆ ಹೆಗಲಮೇಲೆ ಒಯ್ಯುತ್ತಾರೆ. ಅಥವಾ ಲಿಂಗ್ಯಕ್ಯ ರಾದವರ ಭಾವಚಿತ್ರವನ್ನು ಹೊತ್ತು ಕೊಂಡು ಹೋಗುವುದು ವಾಡಿಕೆ. ಅಲ್ಲದೆ ಶರಣರ ವಚನಗಳನ್ನು ಉಳಿಸಿದ ಪ್ರತೀಕವಾದ, ವಚನ ಸಾಹಿತ್ಯ ಹೊತ್ತುಕೊಂಡು ಮೆರವಣಿಗೆ ಮಾಡುವುದು ವಾಡಿಕೆ. ಶರಣ ಬರವೇಣಗೆ ಪ್ರಾಣ ಜೀವಾಳವಯ್ಯಾ, ಗುಡಿ ತೋರಣವ ಕಟ್ಟಿ ಬರವ ಹಾರುವೇನಯ್ಯ ಎನ್ನುವಂತೆ ಸಂಭ್ರಮ ಪಡುತ್ತಾರೆ. ಆದರೆ ಜೀವಂತ ಶರೀರಾಧಾರಿ ಗಳನ್ನು ಹೊತ್ತು ಕೊಂಡು ಹೋಗುವುದು ಇಲ್ಲಿ ಸಾಧ್ಯವಿಲ್ಲ. ರೋಗವುಳ್ಳ ಶರೀರ ಆಸ್ಪತ್ಗರೆಗೆ ಸಲು ಮಾತ್ರ ಬಳಸಬಹುದು. ಎಲ್ಲರ ಮುಕ್ತ ಚರ್ಚೆ ಪರಿಹಾರಕ್ಕೆ ನಾಂದಿ ಹಾಡಿದೆ. ತಮ್ಮೆಲ್ಲರ ಉತ್ತಮ ನಿಲುವಿಗೆ ಧನ್ಯವಾದಗಳು. ಜಗದ ಮಾನವರೆಲ್ಲ ದೇವನ ಮಕ್ಕಳು ಎಂಬ ಅರಿವು ಮೂಡಲಿ,ಎಲ್ಲರಿಗೂ ಶುಭವಾಗಲಿ.

    • ದೇವರಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡ್ತೀರಾ ಇಲ್ವ ಹಾಗೆ ರಂಭಾಪುರಿ ಶ್ರೀಗಳ ನಮಗೆ ದೇವರಕ್ಕಿಂತ ಹೆಚ್ಚು ನಮಗೆ ಅದಕ್ಕೆ ಪಲ್ಲಕ್ಕಿ ಹೊತ್ತೂರು ನಾವು ನಿನಗೆ ಏಕೆ ಅಸ್ಟೊಂದು ಉರಿಯುತ್ತದೆ.

  • ಬಸವ ಭಕ್ತರ ಒತ್ತಾಯಕ್ಕೆ ಮಣಿದು ಅಡ್ಡ ಪಲ್ಲಕ್ಕಿ ಬೇಡ ಅಂದಿದ್ದಾರೆ ಆದರೆ ದಸರಾ ದರ್ಬಾರಿನಲ್ಲಿ ಗುರು ಬಸವಣ್ಣನವರ ಬಗ್ಗೆ ಶರಣ ಬಗ್ಗೆಯಾಗಲಿ ಹಗುರವಾಗಿ ಮಾತನಾಡಿದರೆ ಗಣಚಾರಿಗಳಾದ ನಾವು ಸುಮ್ಮನೆ ಕುಡುವುದಿಲ್ಲ ಅರ್ಥ ಮಾಡಿಕೊಂಡರೆ ಒಳ್ಳೆಯದು

  • ಭಾಲ್ಕಿ ಬಸವಲಿಂಗಪಟ್ಟ ದೇವರಿಗೆ ಧನ್ಯವಾದಗಳು ಇದು ಬಸವ ತತ್ವಕ್ಕೆ ಸಂದ ಜಯ

  • ಮಾನ್ಯ ರವಿ papde ರವರನ್ನು ನಾವು ಬೆಂಬಲಿಸುತ್ತೇವೆ.ವೇದಿಕೆಯಮೇಲೆ ಬಸವಣ್ಣನವರ ಭಾವಚಿತ್ರ ಇರುವಂತೆ ನಾವು ನೋಡಿಕೊಳ್ಳಬೇಕು.

  • ಬಸವಕಲ್ಯಾಣದಲ್ಲಿ ನಡೆಯುವ ಸಭೆಯನ್ನು ರದ್ದು ಮಾಡುವ ಅವಶ್ಯಕತೆ ಇರಲಿಲ್ಲ. ಏಕೆಂದರೆ ಧರಣಿ ಸತ್ಯಾಗ್ರಹ ಅಥವಾ ಪ್ರತಿಭಟನೆ ಇದ್ದಿದ್ದರೆ ಅದನ್ನು ರದ್ದು ಮಾಡಬಹುದಿತ್ತು. ಆದರೆ ಈ ರೀತಿ ತುರ್ತಾಗಿ ಒಂದು ಮೀಟಿಂಗ್ ಸಭೆಯನ್ನು ಹಿಂಪಡೆಯುವ ಅವಶ್ಯಕತೆ ಇರಲಿಲ್ಲ.
    ರಂಭಾಪುರಿ ಶ್ರೀಗಳು ಭಕ್ತರ ಹೆಗಲ ಮೇಲೆ ಬಿಟ್ಟು ವಾಹನದ ಮೇಲೆ ಅಡ್ಡ ಪಲ್ಲಕ್ಕಿ ಮಾಡುತ್ತೇವೆ ಎಂದು ನಿರ್ಧಾರ ತೆಗೆದುಕೊಂಡ ಮೇಲೆ ನಮ್ಮ ಮುಂದಿನ ನಡೆ ಏನಾಗಬೇಕು?, ನಾವು ಕಾರ್ಯಕ್ರಮಕ್ಕೆ ವಿರೋಧ ಮಾಡಬೇಕೆ ಅಥವಾ ಬೇಡವೇ? ಯಾವ ಷರತ್ತುಗಳನ್ನು (ಕಂಡಿಷನ್ಸ್) ಹಾಕಿ ನಾವು ಕಾರ್ಯಕ್ರಮಕ್ಕೆ ಅನುವು ಮಾಡಬೇಕು? ಎಂಬ ವಿಷಯಗಳ ಮೇಲೆ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿತ್ತು.
    ಏಕೆಂದರೆ ದಾವಣಗೆರೆಯಲ್ಲಿ ಯಾವ ರೀತಿ ಗುರುಬಸವಣ್ಣನವರ ಬಗ್ಗೆ ತಪ್ಪು ಹೇಳಿಕೆಗಳನ್ನು ಕೊಟ್ಟಿರುವ ರಂಭಾಪುರ ಶ್ರೀಗಳು ಬಸವಕಲ್ಯಾಣದಲ್ಲಿಯೂ ಆ ರೀತಿ ಮಾಡದಂತೆ ಈ ಸಭೆಯ ಮೂಲಕ ಎಚ್ಚರಿಕೆ ಕೊಡಬಹುದಿತ್ತು. ಗುರುಬಸವಣ್ಣನವರ ಫೋಟೋ ಆಗಲಿ ಅಥವಾ ಅವರ ಬಗ್ಗೆ ಹೇಳಿಕೆಗಳನ್ನು ಕೊಡದಂತೆ ಕಂಡಿಷನ್ ಹಾಕಬಹುದಿತ್ತು. ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಸಭೆಯನ್ನು ರದ್ದು ಮಾಡಿರಬಹುದು ಎಂಬ ಸಂದೇಹ ಎದ್ದು ಕಾಣುತ್ತಿದೆ.

  • ಇನ್ನು ಮೇಲೆ ಈ ಪಂಚರು ಎಲ್ಲೆ ಸಭೆ ನಡೆಸಲಿ ಅಲ್ಲಿ ಬಸವಣ್ಣನವರ ಭಾವ ಚಿತ್ರ ಯೋಗ್ಯ ರೀತಿಯಲ್ಲಿ ಪ್ರದರ್ಶಿಸಬೇಕು. ಬಸವಣ್ಣನವರ ಘನತೆಗೆ ಕುಂದು ಬರುವಂತೆ ನಡೆದುಕೊಂಡರೆ ಬಸವ ಭಕ್ತರು ಅಂಥವರಿಗೆ ತಕ್ಕ ಶಾಸ್ತಿ ಮಾಡಲೇಬೇಕು.

Leave a Reply

Your email address will not be published. Required fields are marked *