ಬೆಂಗಳೂರು
ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಅಂಚೆ ಚೀಟಿಯನ್ನು ಅಂಚೆ ಇಲಾಖೆ 23ರಂದು ಬಿಡುಗಡೆ ಮಾಡಿತು.
ಕನ್ನಡ ನಾಡಿನ ಹೆಮ್ಮೆಯ ರಾಣಿಯ ಗೌರವಾರ್ಥವಾಗಿ ಬಂದಿರುವ ಅಂಚೆ ಚೀಟಿಯಲ್ಲಿ ಒಂದು ಕನ್ನಡ ಪದವೂ ಇಲ್ಲದಿರುವುದು ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಇಂಗ್ಲಿಷ್, ಹಿಂದಿಯಲ್ಲಿ ಕಿತ್ತೂರಿನ 200ನೇ ವಿಜಯೋತ್ಸವ ಎಂಬ ಉಲ್ಲೇಖ ಮಾತ್ರವಿದೆ. ರಾಣಿ ಚನ್ನಮ್ಮ ಅವರ ಹೆಸರೂ ಕಾಣದಾಗಿದೆ.
ರಾಣಿ ಚನ್ನಮ್ಮನವರನ್ನು ಭಾರತದ ಎಲ್ಲಾ ಭಾಗದವರಿಗೂ ಪರಿಚಯ ಮಾಡಿಕೊಡಲು ಅಂಚೆ ಚೀಟಿ ಹೊರ ತರಲಾಯಿತು. ಈಗ ಈ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಎಂಬ ಎಂಬ ಪ್ರಶ್ನೆ ಬಂದಿದೆ.