ರಸ್ತೆ ನಿಯಮಗಳನ್ನು ಪಾಲಿಸಿ: ಎಫ್. ವೈ. ತಳವಾರ

ಬೆಳಗಾವಿ

ಹದಿಹರೆಯದ ಯುವಕ ಯುವತಿಯರು ಅತಿಯಾದ ಸ್ಪೀಡ್ ಚಾಲನೆ ಮಾಡಬಾರದು. ಅವಸರವೇ ಅಪಘಾತಕ್ಕೆ ಕಾರಣ. ಸೀಟ್ ಬೆಲ್ಟ್ ಹಾಕಿದರೆ ಏರ್ ಬ್ಯಾಗ ಓಪನ್ ಆಗಿ, ಜೀವ ರಕ್ಷಿಸುತ್ತದೆ. ಮೆದುಳಿಗೆ ಪೆಟ್ಟು ತಾಗಿದರೆ ರಕ್ತ ಹೆಪ್ಪುಗಟ್ಟುತ್ತದೆ ಕಾರಣ ಹೆಲ್ಮೆಟ್ ಕಡ್ಡಾಯವಾಗಿ ಹಾಕಬೇಕು ಎಂದು ಸಾಹಿತಿ, ಪೊಲೀಸ್ ಅಧಿಕಾರಿ ಎಫ್. ವೈ. ತಳವಾರ ಹೇಳಿದರು.

ಅವರು ಲಿಂಗಾಯತ ಸಂಘಟನೆ ವತಿಯಿಂದ, ಡಾ. ಫ.ಗು.ಹಳಕಟ್ಟಿ ಭವನದಲ್ಲಿ ರವಿವಾರದಂದು ಜರುಗಿದ ಸಾಮೂಹಿಕ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಚಾರಿ ನಿಯಮಗಳ ಪಾಲನೆ ಮತ್ತು ಸಮಾಜದಲ್ಲಿ ಆರಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಿದರು.

ರಸ್ತೆ ನಿಯಮಗಳನ್ನು ನಾವು ಪಾಲಿಸಬೇಕು.ಸ್ಪೀಡಾಗಿ ಗಾಡಿ ಓಡಿಸಬಾರದು. ಟೂ ವೀಲರನವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ವಾಹನದ ಕಾಗದಪತ್ರ ಒಂದು ಸೆಟ್ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸ್ಪೀಡ್ ಹೋಗಬಾರದು. ಮಧ್ಯಪಾನ ಮಾಡಬಾರದು. ಸಮಸ್ಯೆಗಳು ಬಂದಾಗ ೧೧೨ ನಂಬರ್ ಕ್ಕೆ ಕರೆ ಮಾಡಿ. ನಿಮ್ಮ ವಾಹನಗಳ ತಪಾಸಣೆ ಮಾಡಿಸುತ್ತಾ ಇರಬೇಕು, ಎಂದರು.

ಆರಂಭದಲ್ಲಿ ಶರಣೆ ಅಕ್ಕಮಹಾದೇವಿ ಅರಳಿಯವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಬಿ.ಪಿ. ಜೇವಣಿ, ಆನಂದ ಕರ್ಕಿ, ಜಯಶ್ರೀ ಚಾವಲಗಿ, ಮಂಗಳಾ ಕಾಕತಿಕರ, ಶ್ರೀದೇವಿ ನರಗುಂದ, ಬಸವರಾಜ ಬಿಜ್ಜರಗಿ, ವಿ.ಕೆ.ಪಾಟೀಲ, ಸುರೇಶ ನರಗುಂದ, ವಚನ ಗಾಯನ ಮಾಡಿದರು. ಮಹಾಂತೇಶ ಮೆಣಸಿನಕಾಯಿ ಅತಿಥಿ ಪರಿಐಯ ಮಾಡಿಕೊಟ್ಟರು. ಸಂಗಮೇಶ ಅರಳಿ ನಿರೂಪಿಸಿದರು. ಬಸವರಾಜ ಬಿಜ್ಜರಗಿ, ಸೋಮಶೇಖರ ಕತ್ತಿ, ಸದಾಶಿವ ದೇವರಮನಿ, ಸುನೀಲ ಸಾಣೇಕೊಪ್ಪ, ಸಿದ್ದಪ್ಪ ಸಾರಾಪುರಿ, ಜ್ಯೋತಿ ಬದಾಮಿ, ಲಲಿತಾ ವಾಲಿ ಇಟಗಿ, ವಿದ್ಯಾ ಕಕಿ೯, ಶೋಭಾ ದೇಯಣ್ಣವರ, ಶಿವಾನಂದ ಲಾಳಸಂಗಿ, ಸಿದ್ದಲಿ೦ಗಪ್ಪ ರೇವಣ್ಣವರ, ಕಮಲಾ ಗಣಾಚಾರಿ, ಅನೀಲ ರಘಶೆಟ್ಟಿ, ಶೇಖರ ವಾಲಿ ಇಟಗಿ, ಸಿದ್ದಪ್ಪ ಸಾರಾಪೂರಿ, ಹಾಗೂ ಶರಣ ಶರಣೆಯರು ಉಪಸ್ಥಿತರಿದ್ದರು.

Share This Article
1 Comment
  • ಇನ್ನು ಹೆಚ್ಚಿನ ಮಾಹಿತಿ ತಿಳದುಕೊಳ್ಳುವುದು ಇದೇ

Leave a Reply

Your email address will not be published. Required fields are marked *