ಧಾರವಾಡ
ಬಸವ ಮೀಡಿಯಾಗೆ ಧಾರವಾಡದಿಂದ ವರದಿ ಮಾಡುತ್ತಿರುವ ಪತ್ರಕರ್ತ, ಶರಣಜೀವಿ ರವಿಕುಮಾರ ಚನಬಸಪ್ಪ ಕಗ್ಗಣ್ಣವರ ಅವರಿಗೆ ಕರ್ನಾಟಕ ಸರ್ಕಾರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಿದೆ.
ಮಾಧ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ವರದಿಗಾರಿಕೆ, ಬಸವ ತತ್ವ ಪ್ರಚಾರ ಮತ್ತು ಪ್ರಾಮಾಣಿಕ ಸಮಾಜ ಸೇವಾ ಕಾರ್ಯ ಪರಿಗಣಿಸಿ ರವಿಕುಮಾರ ಅವರಿಗೆ ‘ಕರ್ನಾಟಕ ಮಾಧ್ಯಮ ಅಕಾಡೆಮಿ ಅಭಿಮಾನಿ’ ಪ್ರಶಸ್ತಿ ನೀಡಿ ಗೌರವಿಸಲಿದೆ.
2025 ಜನೆವರಿ ತಿಂಗಳಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಬಸವ ಮೀಡಿಯಾದ ಸಮಸ್ತ ಬಳಗವು ರವಿಕುಮಾರ ಅವರಿಗೆ ಅಭಿನಂದಿಸಿ ಶುಭ ಕೋರಿದೆ.