ಬಳ್ಳಾರಿ
ರಾಷ್ಟ್ರೀಯ ಬಸವ ದಳದ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕರ್ತರ ಸಮಾವೇಶ ಇದೇ 26ರ ರವಿವಾರ, ಬೆಳಿಗ್ಗೆ 10-30 ಗಂಟೆಯಿಂದ ಬಸವೇಶ್ವರ ನಗರದ ವಿಶ್ವಗುರು ಬಸವ ಮಂಟಪದಲ್ಲಿ ನಡೆಯಲಿದೆ.
ಸಮಾವೇಶದ ಸಾನಿಧ್ಯವನ್ನು ಕೂಡಲಸಂಗಮ ಬಸವ ಧರ್ಮ ಮಹಾ ಜಗದ್ಗುರು ಪೀಠದ ಪೂಜ್ಯ ಡಾ. ಗಂಗಾ ಮಾತಾಜಿ ವಹಿಸಲಿದ್ದಾರೆ. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್. ಲಿಂಗಾಯತ ಉಪಸ್ಥಿತರಿರಲಿದ್ದಾರೆ.
1 ರಾಷ್ಟ್ರೀಯ ಬಸವ ದಳದ ಪುನಶ್ಚೇತನ.
2 ಲಿಂಗಾಯತ ಧರ್ಮದ ಸಂವಿಧಾನಾತ್ಮಕ ಮನ್ನಣೆಗಾಗಿ ಮುಂದಿನ ಹಂತದ ಹೋರಾಟದ ರೂಪುರೇಷೆಗಳು.
3 ಈ ವರ್ಷ ಭಾರತ ಸರ್ಕಾರದಿಂದ ನಡೆಯುವ ಜನಗಣತಿಯ ಬಗ್ಗೆ ಜನ ಜಾಗೃತಿ ಆಂದೋಲನ.
4 ಬಸವ ಧರ್ಮಪೀಠದಿಂದ ಬೆಂಗಳೂರಲ್ಲಿ ನಿರ್ಮಾಣವಾಗುತ್ತಿರುವ ವಿಶ್ವಗುರು ಬಸವಣ್ಣನವರ 112 ಅಡಿ ಎತ್ತರದ ಪುತ್ತಳಿಯ ಉದ್ಘಾಟನೆಯ ಪೂರ್ವ ಸಿದ್ಧತೆ.
5 2025 ನೇ ಸಾಲಿನ ಕಾರ್ಯಕ್ರಮಗಳ ಘೋಷಣೆ.
ಈ ಎಲ್ಲ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ, ತೀರ್ಮಾನಗಳಾಗಲಿವೆ.
ಆರಂಭದಲ್ಲಿ ಬಸವ ಧ್ವಜಾರೋಹಣ, ಗುರು ಪೂಜೆ, ಸಾಮೂಹಿಕ ಪ್ರಾರ್ಥನೆ, ಧ್ಯಾನ ಸಹ ನಡೆಯಲಿವೆ. ಮಹಾಮಂಗಳದ ನಂತರ ದಾಸೋಹ ವ್ಯವಸ್ಥೆ ಇರುತ್ತದೆ.
ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣದ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸಮಿತಿ ಉಪಾಧ್ಯಕ್ಷ, ಜಿಲ್ಲಾ ಮುಖ್ಯಸ್ಥರಾಗಿರುವ ಕೆ.ವಿ. ರವಿಶಂಕರ ತಿಳಿಸಿದ್ದಾರೆ.
