ಮತ್ತೆ ಆಂದೋಲನ: ರಾಷ್ಟ್ರೀಯ ಬಸವದಳದ ಏಳು ಮುಖ್ಯ ನಿರ್ಣಯಗಳು

ಬಳ್ಳಾರಿ

ರಾಷ್ಟ್ರೀಯ ಬಸವದಳದ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕರ್ತರ ಮಹಾ ಅಧಿವೇಶನ ನಗರದ ಬಸವೇಶ್ವರನಗರದಲ್ಲಿರುವ ವಿಶ್ವಗುರು ಬಸವ ಮಂಟಪದಲ್ಲಿ ರವಿವಾರ ನಡೆಯಿತು.

ಶರಣ ವೀರಣ್ಣ ಲಿಂಗಾಯತ್ ಇವರ ನೇತೃತ್ವದಲ್ಲಿ ಬಸವ ಧ್ವಜಾರೋಹಣ, ಗುರು ಪೂಜೆ, ಪ್ರಾರ್ಥನೆ ಮತ್ತು ಧ್ಯಾನ ನಡೆಯಿತು.

ನಂತರ ರಾಷ್ಟ್ರೀಯ ಬಸವದಳದ ಸಂಘಟನೆಯ ಬಗ್ಗೆ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ ಎನ್.ಚಂದ್ರಮೌಳಿ ಇವರು ಚಿಂತನೆ ನೀಡಿದರು.

ಬಸವ ಧರ್ಮಪೀಠದ ಜಗದ್ಗುರು ಮಾತೆ ಗಂಗಾದೇವಿ ಮಾತಾಜಿ ಅವರು ವಿಡಿಯೋ ಮೂಲಕ ಶುಭ ಸಂದೇಶ ನೀಡಿ ಕಾರ್ಯಕರ್ತರು ಕ್ರಿಯಾಶೀಲರಾಗಿ ವಚನ ಅಧ್ಯಯನ, ಅನುಷ್ಠಾನ ಹಾಗೂ ಪ್ರಚಾರ ಮಾಡಲು ಆದೇಶ ನೀಡಿದರು.

ಬಸವದಳ ಬಳ್ಳಾರಿ ಜಿಲ್ಲಾ ಕಾರ್ಯ ಕರ್ತರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು:

1) ಜನಗಣತಿಯಲ್ಲಿ ಧರ್ಮ ಕಾಲಂನಲ್ಲಿ, ಲಿಂಗಾಯತ ಎಂದು ನಮೂದಿಸುವ ಬಗ್ಗೆ ಜನ ಆಂದೋಲನ.

2) ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕೇಂದ್ರ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಹೋರಾಟ.

3) ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾವನ್ನು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ. ಸಂಘಟಿಸಲು ವಿಶೇಷ ಕಾರ್ಯ ಕರ್ತರ ಸಮಿತಿಯನ್ನು ನೇಮಿಸಲಾಯಿತು.

4) ವೈದಿಕ ಆಚರಣೆಯಲ್ಲಿ ತೊಡಗಿರುವ ಪೂಜ್ಯ ವಚನಾನಂದ ಸ್ವಾಮೀಜಿಗಳ ನಿಲುವಿಗೆ ಖಂಡನೆ.

5) ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಶ್ವಗುರು ಬಸವಣ್ಣನವರ ಪುತ್ತಳಿ ಅನಾವರಣದ ಬಗ್ಗೆ ರಾಜ್ಯಾದ್ಯಂತ ಬಸವ ಜ್ಯೋತಿಯಾತ್ರೆ.

6) ಈ ವರ್ಷ ಬಸವ ಧರ್ಮಪೀಠದ ವತಿಯಿಂದ ನಡೆಯುವ ಕಾರ್ಯಕ್ರಮಗಳ ಘೋಷಣೆ ಮಾಡಲಾಯಿತು.

7) ಮಾರ್ಚ್ 16ರಂದು ಬೆಂಗಳೂರು ಕುಂಬಳಗೋಡಿನಲ್ಲಿ ನಡೆಯುವ ಪರಮಪೂಜ್ಯ ಲಿಂಗೈಕ್ಯ ಮಹಾ ಜಗದ್ಗುರು ಮಾತೆ ಮಹಾದೇವಿಯವರ ಸಂಸ್ಮರಣೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲು ವಿನಂತಿ.

ಶರಣ ವೀರೇಶಪ್ಪ ರಾಜ್ಯ ಅಧ್ಯಕ್ಷರು, ಶರಣ ಈಶಣ್ಣ, ಲಿಂಗಾಯತ ಧರ್ಮ ಮಹಾಸಭೆ, ಶರಣ ಪ್ರಕಾಶ್ ಜೀರಿಗೆ, ರಾಷ್ಟ್ರೀಯ ಬಸವದಳ ಯುವ ಘಟಕ ಸೇರಿದಂತೆ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ಹಾಗೂ ಇತರ ಜಿಲ್ಲೆಗಳಿಂದ ಸುಮಾರು 500 ಜನ ಕಾರ್ಯಕರ್ತರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ.

Share This Article
Leave a comment

Leave a Reply

Your email address will not be published. Required fields are marked *

ರಾಷ್ಟ್ರೀಯ ಬಸವ ಧಳ, ಬಳ್ಳಾರಿ ಘಟಕ