ಕುರುಬರ ಗುರು ರೇವಣಸಿದ್ಧರು ವೀರಶೈವರ ಕೈಯಲ್ಲಿ ರೇಣುಕಾಚಾರ್ಯರಾಗಿ ಬದಲಾದರು

ರೇವಣಸಿದ್ಧರು ಹಾಲುಮತ ಕುರುಬರ ಕುಲಗುರು. ವೀರಶೈವರು ಅವರ ಇತಿಹಾಸವನ್ನು ಬದಲಾಯಿಸಿ ರೇಣುಕಾಚಾರ್ಯರನ್ನಾಗಿ ಪರಿವರ್ತಿಸಿದರು. ಶತಮಾನಗಳ ಹಿಂದೆ ನಡೆದ ಈ ಪಲ್ಲಟದ ಮೇಲೆ ಪ್ರೊ ಎಂ ಎಂ ಕಲ್ಬುರ್ಗಿಯವರ ಸಂಶೋಧನೆ ಸರಳ ಕನ್ನಡದಲ್ಲಿ.

1)ಕುರುಬರ ಗುರು ರೇವಣಸಿದ್ಧರು ವೀರಶೈವರ ಕೈಯಲ್ಲಿ ರೇಣುಕಾಚಾರ್ಯರಾಗಿ ಬದಲಾದರು

2) ಶರಣ ಚಳುವಳಿಯಿಂದ ದೂರವುಳಿದ ರೇವಣಸಿದ್ಧರು

3) ಆಚಾರ್ಯರಾಗಿ ಬದಲಾದ ರೇವಣಸಿದ್ಧರು

4) ರೇವಣಾಚಾರ್ಯರ ಕಲ್ಪಿತ ಇತಿಹಾಸ

5) ರೇವಣಸಿದ್ಧರ ಭಕ್ತರ ಸೆಳೆದ ಚತುರಾಚಾರ್ಯರ ಪರಂಪರೆ

6) ಬಾಳೇಹಳ್ಳಿಯ ನಾಥ ಮಠ ಪಂಚಾಚಾರ್ಯ ಪೀಠವಾಯಿತು

ಪ್ರಾಚೀನ ಕರ್ನಾಟಕದ ಪ್ರಖ್ಯಾತ ಧರ್ಮ ಗುರುಗಳಾಗಿದ್ದ ರೇವಣಸಿದ್ಧರ ವಿಷಯದಲ್ಲಿ ಒಂದು ಗೊಂದಲವಿದೆ. ಎರಡು ಭಿನ್ನ ಧಾರ್ಮಿಕ ಪರಂಪರೆಗಳ ಪ್ರಮುಖರಾಗಿ ಅವರು ಬಿಂಬಿತವಾಗಿದ್ದಾರೆ.

ಕುರುಬ ಕುಟುಂಬದಲ್ಲಿ ಜನಿಸಿದ ಅವರು ನಾಥ ಸಿದ್ದ ಪಂಥದ ಗುರುವಾಗಿ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಪ್ರಸಿದ್ಧರಾದರು. ಅನೇಕ ಶಾಸನ, ಕೃತಿಗಳಲ್ಲಿ ಅವರ ಪ್ರಭಾವವನ್ನು ಕಾಣಬಹುದು.

ಹರಿಹರ, ರಾಘವಾಂಕರಂತಹ ಪ್ರಸಿದ್ಧರೂ ಅವರ ಮೇಲೆ ಕಾವ್ಯ ರಚಿಸಿದರು. ಕಕ್ಕೇರಿ, ಸಿರಿವಾಳ ಮುಂತಾದ ಕಡೆ ಅವರ ಶಾಸನಗಳು ದೊರೆತಿವೆ. ಅವುಗಳಲ್ಲೆಲ್ಲಾ ಅವರು ಒಬ್ಬ ನಾಥ ಗುರುವಾಗಿ ಮಾತ್ರ ಕಾಣಿಸಿದ್ದಾರೆ.

ಆದರೆ ೧೫ನೇ ಶತಮಾನದಲ್ಲಿ ರಚಿತವಾದ ವೀರಶೈವ ಕೃತಿಗಳಲ್ಲಿ ಅವರು ಏಕಾಏಕಿ ರೇವಣಾಚಾರ್ಯರಾಗಿ ಬದಲಾದರು. ರಂಭಾಪುರಿಯ ಪಂಚಾಚಾರ್ಯ ಪೀಠದ ಸಂಸ್ಥಾಪಕರೂ ಆದರು.

೧೨ನೇ ಶತಮಾನದಲ್ಲಿ ಬದುಕಿದ್ದ ಅವರ ಕಾಲ ಕೃತಯುಗದಷ್ಟು ಹಿಂದಕ್ಕೆ ಒಯ್ಯಲಾಯಿತು. ನಾಥ ಸಿದ್ದರಾಗಿ ಜೀವಿಸಿದ್ದ ಅವರು ವೀರಶೈವ ಧರ್ಮವನ್ನು ಅಗಸ್ತ್ಯರಿಗೆ ಭೋದಿಸಿದರೆಂಬ ಕಲ್ಪನೆಯೂ ಸೃಷ್ಟಿಯಾಯಿತು.

ರೇವಣಸಿದ್ದರು ರೇವಣಾಚಾರ್ಯ ಅಥವಾ ರೇಣುಕಾಚಾರ್ಯರಾಗಿ ಬದಲಾಗಿದ್ದು ಇತಿಹಾಸದ ಮೈಲುಗಲ್ಲುಗಳಲ್ಲಿ ಒಂದು. ಈ ಪರಿವರ್ತನೆಯನ್ನು ಆಧಾರ ಸಮೇತ ವಿಶ್ಲೇಷಿಸಬಹುದು.

(‘ಹಾಲುಮತ ಸಂಸ್ಕೃತಿ ಸಮ್ಮೇಳನ ಸರ್ವಾಧ್ಯಕ್ಷ ಭಾಷಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *