ಬಸವಣ್ಣ ವಿರೋಧಿಸಿದ ವೈದಿಕತೆಗೆ ಜೋತು ಬೀಳುತ್ತಿರುವ ಲಿಂಗಾಯತರು ಎಸ್.ಜಿ. ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಬಸವಣ್ಣನವರು ತಮ್ಮ 64 ವಚನಗಳಲ್ಲಿ ವೈದಿಕತೆ ವಿರೋಧಿಸಿದ್ದಾರೆ, ಒಟ್ಟಾರೆ 41 ವಚನಕಾರರು 441 ವಚನಗಳಲ್ಲಿ ವೈದಿಕ ಪಠ್ಯವನ್ನು ವಿರೋಧಿಸಿದ್ದಾರೆ. ಆದರೆ ಇಂದು ಲಿಂಗಾಯತರು ಶರಣರು ವಿರೋಧಿಸಿದ ವೈದಿಕ ಧರ್ಮಕ್ಕೆ ಜೋತು ಬೀಳುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ `ಲಿಂಗಾಯತ ಧರ್ಮ ಸಮಕಾಲೀನ ಅವಶ್ಯಕತೆ’ ವಿಷಯದ ಮೇಲೆ ಮಾತನಾಡುತ್ತ ಅವರು ವಚನಗಳೇ ಲಿಂಗಾಯತ ಧರ್ಮದ ನಿಜವಾದ ಪಠ್ಯಗಳು. “ವಚನಗಳು ಭಜನೆಯಲ್ಲ. ಕ್ರಾಂತಿಯ ಜೊತೆ ಜೊತೆಯಲ್ಲಿಯೇ ಸೃಷ್ಟಿಯಾದ ಸಾಹಿತ್ಯ, ” ಎಂದು ಹೇಳಿದರು.

ಲಿಂಗಾಯತರು ಬ್ರಾಹ್ಮಣ ಪೌರೋಹಿತ್ಯವನ್ನು ಒಪ್ಪದಿದ್ದರೂ, ನಾಮಕರಣ, ಗೃಹ ಪ್ರವೇಶ ಎಲ್ಲದಕ್ಕೂ ಬ್ರಾಹ್ಮಣ ಪೌರೋಹಿತ್ಯವನ್ನು ಅನುಸರಿಸಲಾಗುತ್ತಿದೆ. “ಸಾಂಸ್ಕೃತಿಕ ಗುಲಾಮಗಿರಿ ನಾವು ಮುಕ್ತವಾಗಿಲ್ಲ,” ಎಂದರು.

ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Share This Article
Leave a comment

Leave a Reply

Your email address will not be published. Required fields are marked *