ಸದನಕ್ಕೆ ಪಂಚೆ ಉಟ್ಟು ಬಂದ ಶರಣಗೌಡ ಕಂದುಕೂರ್

ಬಸವ ಮೀಡಿಯಾ
ಬಸವ ಮೀಡಿಯಾ

ವಿಧಾನಸಭೆ :

ಮಾಲ್ ಒಂದರಲ್ಲಿ ಪಂಚೆ ಉಟ್ಟಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ ರೈತರ ಬೆಂಬಲಾರ್ಥವಾಗಿ ಜೆ.ಡಿ.ಎಸ್ ಶಾಸಕ ಶರಣ್ ಗೌಡ ಕಂದಕೂರ್ ಗುರುವಾರದಂದು ವಿಧಾನಸೌಧಕ್ಕೆ ಪಂಚೆ ಉಟ್ಟು ಬಂದಿದ್ದರು. ಸದನದಲ್ಲಿ ಇದು ಎಲ್ಲರ ಗಮನ ಸೆಳೆಯಿತು.

ಇದೆ ಸಮಯದಲ್ಲಿ ಮಾತನಾಡುತ್ತ ಮೆಟ್ರೋ ಮಾಲ್ ಗಳಲ್ಲಿ ಇಂಥ ಘಟನೆ ನಡೆದಿರುವುದು ನೋವಿನ ಸಂಗತಿ ಎಂದರು. ರೈತ ದೇಶದ ಬೆನ್ನೆಲುಬು, ನಾವೂ ರೈತನ ಮಕ್ಕಳೆ ಇಂಥ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದರು. ಹಾವೇರಿ ಜಿಲ್ಲೆಯ ರೈತ ಪಕೀರಪ್ಪ ಎಂಬವರು ಮಾಲ್ ನಲ್ಲಿ ಹೋದಾಗ

ಅವರಿಗೆ ಪ್ರವೇಶ ನಿರಾಕರಿಸಿ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಸಭಾಧ್ಯಕ್ಷರಿಗೂ ಸಹಿತ ಈ ವಿಷಯವಾಗಿ ಮನವಿ ಮಾಡುತ್ತೇನೆ ಎಂದರು, ಬೆಂಗಳೂರಿನಲ್ಲಿ ಇಂಥ ಘಟನೆ ನಡೆಯುತ್ತಿರುವುದರ ಬಗ್ಗೆಯೂ ತಿಳಿಸುತ್ತೇನೆ,

ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ ಎಂದರು.

Share This Article
Leave a comment

Leave a Reply

Your email address will not be published. Required fields are marked *