ಬೆಳಗಾವಿ
ತಾಲೂಕಿನ ಹಲಗಾ ಗ್ರಾಮದಲ್ಲಿ ಗುರು ಬಸವ ಬಳಗ ಆಯೋಜಿಸಿದ್ದ ಶ್ರಾವಣ ಮಾಸದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ಆಗಮಿಸಿದ್ದರು.
ಅವರು ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡು ಗುರುಬಸವಣ್ಣನವರ ಸಪ್ತ ಸಾಲಿನ ಸೂತ್ರವನ್ನು ವಿಶ್ಲೇಷಣೆ ಮಾಡಿದರು.

“ಈ ನಾಡು ಬಸವ ಸಂಸ್ಕೃತಿಯ ನಾಡಾಗಿದೆ. ಬಸವ ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ಪಸರಿಸಲು ‘ಬಸವ ಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ನಾವೆಲ್ಲ ಪಾಲ್ಗೊಳ್ಳೋಣ” ಎಂದರು.
ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆಯನ್ನು ಮಹಾಂತೇಶ ತೋರಣಗಟ್ಟಿ ಹಾಗೂ ಸಂಗಡಿಗರಾದ ಬಿ.ಪಿ. ಜೇವನಿ, ಶಿವಾನಂದ ಲಾಳಸಿಂಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ ಶೀಲಿ ವಹಿಸಿದ್ದರು. ಬಸವರಾಜ ಹಿರೇಹೊಳಿ ನಿರೂಪಿಸಿದರು. ಪ್ರಾರ್ಥನೆಯನ್ನು ಸುನಿತಾ ತೋರಣಗಟ್ಟಿ, ವಿಜಯಲಕ್ಷ್ಮಿ ಜೇವನಿ ಮಾಡಿದರು.

ಶರಣ ಸಂಸ್ಕೃತಿ ಅಭಿಯಾನದ ಪ್ರಚಾರಾರ್ಥವಾಗಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರಾದ ಎ. ವಾಯ್. ಬೆಂಡಿಗೇರಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅಭಿಯಾನದ ಕರಪತ್ರ ಪ್ರದರ್ಶಿಸಲಾಯಿತು.
ಬಸವರಾಜ ಕೋರಿಶೆಟ್ಟಿ, ಗುಂಡಪ್ಪ ಮೊದಗಿ, ಈರಣ್ಣ ಹಂಪಣ್ಣವರ, ರುದ್ರಪ್ಪ ಹಿರೇಹೊಳಿ, ಸಂಜು ಕೆ, ಪ್ರಕಾಶ ನೇಲಿ, ಗದಗಯ್ಯ ಚರಂತಿಮಠ, ಪ್ರಕಾಶ ಹಂಪಣ್ಣವರ, ನಾಗಪ್ಪ ಶಹಾಪುರಿ, ಕಲ್ಲಯ್ಯ ಹಿರೇಮಠ, ಚಂದ್ರಕಾತ ಮೊದಗಿ, ಚಂದ್ರಕಾಂತ ದಳವಾಯಿ, ಗದಗಯ್ಯ ಹಿರೇಮಠ, ರವಿ ಕೋರಿಶೆಟ್ಟಿ, ಪ್ರಕಾಶ ಸ್ವಾಮಿ, ಶಂಕರ ಗಜಪತಿ, ಸಾಗರ ಮಾಸ್ತಮರ್ಡಿ, ಸಾಗರ ಕಾಮನಾಚೆ, ವಿಜಯ ಪಾಟೀಲ, ಕಿರಣ ಹಣಮಂತಾಚೆ, ಚಂದ್ರಕಾಂತ ಕಾನೋಜಿ, ವಿಲಾಸ ಪರೀಟ, ತವನಪ್ಪ ಪಾಯಕ್ಕಾ, ಮಹಾವೀರ ಪಾಟೀಲ, ಮಹಾವೀರ ಗಂದಿಗವಾಡ, ಭರತೇಶ ಬೆಲ್ಲದ, ಶಾಂತು ಬೆಲ್ಲದ, ಸುಕುಮಾರ ಹುಡೇದ, ಧರಣೇಂದ್ರ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.