ಬೆಂಗಳೂರು
ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬಸವತತ್ವ ಬಿತ್ತಿದ್ದ ಗುರು
ಮಲ್ಲೇಶ್ವರರ ಗುಂಡ್ಲುಪೇಟೆಯ ಶಾಖಾ ಮಠದಿಂದ ಬಸವ ತತ್ವ ಜಂಗಮನೋರ್ವರನ್ನು ಪೀಠತ್ಯಾಗ ಮಾಡುವ ಸ್ಥಿತಿಗೆ ತಂದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ.
ವೇಶ್ಯೆಯ ಪುತ್ರನಾಗಲಿ, ದಾಸಿಯ ಪುತ್ರನಾಗಲಿ
ಶಿವ ದೀಕ್ಷೆಯಾದ ಬಳಿಕ
ಕುಲವನರಿಸುವದುಂಟೆ?
ಎನ್ನುವ ಮಾತಿಗೆ ಬದ್ದರಾಗದೆ
ಲಿಂಗಾಯತರು ಜಾತಿಭೂತದಿಂದ ಹೊರಗೆ ಬರದೆ, ಜಾತಿ ವ್ಯವಸ್ಥೆ ಪೋಷಿಸುವ ಸಮುದಾಯವಾಗುತ್ತಿರುವದು
ನಾಚಿಗೇಡುತನವಾಗಿದೆ.
ಬಾಯಲ್ಲಿ ಬಸವ ನಾಮ
ಮನದಲ್ಲಿ ಸದಾ ಜಾತೀಯತೆಯಿಂದ ಇರುವುದು ಬಸವ ತತ್ವಕ್ಕೆ ಮಾಡಿದ ದ್ರೋಹ.
ಲಿಂಗಾಯತ ಧರ್ಮದ
ಸಿದ್ಧಾಂತದನ್ವಯ ಗುರು ಕಾರುಣ್ಯ ಪಡೆದು ಅಂಗದ
ಮೇಲೆ ಲಿಂಗ ಸಾಹಿತ್ಯ ಪಡೆದು
ಅಂಗದ ಮೇಲೆ ಲಿಂಗವ ಧರಿಸಿ
ಪುನರ್ಜಾತರಾದ ಬಳಿಕ ವ್ಯಕ್ತಿ
ಪೂರ್ವಾಶ್ರಮದಲ್ಲಿ ಯಾವದೇ
ಧರ್ಮದವಾಗಿರಲಿ, ಜಾತಿಯವನಾಗಿರಲಿ, ಕಾಯಕ
ಸಮುದಾಯದವರಾಗಿರಲಿ,
ಭಕ್ತನಾಗಿ, ಜಂಗಮನಾಗಿ,
ಬಸವ ಲಿಂಗಾಯತ ಧರ್ಮದ ತತ್ವ ಪ್ರಸಾರ ಮಾಡುವ ಹಕ್ಕನ್ನು
ಹೊಂದಿರುತ್ತಾನೆ.
ಇದನ್ನು ಅರಿಯದ ಲಿಂಗಾಯತರು ಚಾರ್ತುವರ್ಣ ವ್ಯವಸ್ಥೆಯ ಗುಲಾಮರಾಗಿ ತಮ್ಮ ಧರ್ಮದ ಪರಂಪರೆಯ ಸತ್ಯವನ್ನು ಅರಿಯದೆ, ಅಳವಡಿಸಿಕೊಳ್ಳದೇ ಅಸ್ಮಿತೆ ಉಳಿಸಿಕೊಳ್ಳದೆ ಅಂಚಿನ ಸ್ಥಿತಿಗೆ ಸಾಗುತ್ತಿರುವುದು ನೋವಿನ ಸಂಗತಿಯಾಗಿದೆ.
ಇನ್ನಾದರೂ ಮುಂದಿನ ದಿನಗಳಲ್ಲಿ ತಮ್ಮ ತಪ್ಪನ್ನು ಅರಿತು ಬಸವ ಮಾರ್ಗದಲ್ಲಿ ಸಾಗಿ ಎಂದು ಹೇಳುವುದು ಬಿಟ್ಟು ಬೇರೆ ಮಾರ್ಗವಿಲ್ಲ.