ಬೆಳಗಾವಿ
ಜಾತಿ ಸಮೀಕ್ಷೆಯಲ್ಲಿ “ಲಿಂಗಾಯತ” ಧರ್ಮ ಎಂದು ನಮೂದಿಸಲು ಅವಕಾಶ ಮಾಡಿಕೊಡಬೇಕೆಂದು ಲಿಂಗಾಯತ ಸಂಘಟನೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಮನವಿಪತ್ರ ಸ್ವೀಕರಿಸಿದರು.
ರಾಜ್ಯದಲ್ಲಿ 108 ಬಣಗಳನ್ನು ಹೊಂದಿರುವ ಲಿಂಗಾಯತ ಸಮುದಾಯವು ಬಹುದೊಡ್ಡ ಸಮಾಜವಾಗಿದ್ದರೂ ಕೂಡ ಜನಗಣತಿಯಲ್ಲಿ ಒಟ್ಟು ಜನಸಂಖ್ಯೆಯ ಕೇವಲ 11% ಮಾತ್ರ ಲಿಂಗಾಯತರು ಎಂದು ದಾಖಲಿಸಲಾಗಿದೆ.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಲು ಅವಕಾಶವಿಲ್ಲದೆ ಬಹುತೇಕ ಜನರು ಧರ್ಮವನ್ನು “ಹಿಂದೂ” ಅಥವಾ “ಇತರೆ” ಎಂದು ನಮೂದಿಸಿದ ಕಾರಣ, ಲಿಂಗಾಯತರ ನಿಜ ಜನಸಂಖ್ಯೆ ವರದಿಯಾಗುತ್ತಿಲ್ಲ. ಜಾತಿ ಕಾಲಂನಲ್ಲಿ ಸಹ ಲಿಂಗಾಯತರ ಎಲ್ಲ ಬಣಗಳಿಗೆ ‘ಲಿಂಗಾಯತ’ ಎಂದು ಬರೆಸಲು ಅವಕಾಶವಿಲ್ಲ. ಹೀಗಾಗಿ ಧರ್ಮ, ಜಾತಿ ಮತ್ತು ಉಪಜಾತಿ ಕಾಲಂಗಳಲ್ಲಿ ಬಹುತೇಕ ಬಣಗಳಿಗೆ ‘ಲಿಂಗಾಯತ’ ಎಂದು ಬರೆಸಲು ಅವಕಾಶವೇ ಇಲ್ಲದಂತಾಗಿದೆ. ಹೀಗಾಗಿ ಅಂಕಿ-ಅಂಶಗಳ ಪ್ರಕಾರ, ಲಿಂಗಾಯತ ಸಮುದಾಯ ಕ್ಷೀಣಿಸುತ್ತಿದೆ.

ಆದ್ದರಿಂದ, ಮುಂದಿನ ತಿಂಗಳು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸರ್ಕಾರವು ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ನಮೂದಿಸಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ಬರೆಯಲು ಅವಕಾಶ ಕೊಡದಿದ್ದರೆ, ಧರ್ಮದ ಕಾಲಂನಲ್ಲಿ “ಯಾವುದೂ ಇಲ್ಲ” ಎಂದು ನಮೂದಿಸಿ, ಜಾತಿ ಕಾಲಂನಲ್ಲಿ “ಲಿಂಗಾಯತ” ಅಥವಾ “ಲಿಂಗಾಯತದ ಜೊತೆಗೆ ತಮ್ಮ ಉಪಜಾತಿ”ಯನ್ನು ನಮೂದಿಸಲು ಅವಕಾಶ ಮಾಡಿಕೊಡಬೇಕು. ಅಥವಾ ಜಾತಿ ಕಾಲಂನಲ್ಲಿ “ಲಿಂಗಾಯತ” ಮತ್ತು ಉಪಜಾತಿ ಕಾಲಂನಲ್ಲಿ “ತಮ್ಮ ಉಪಜಾತಿ / ಕುಲಕಸುಬು/ ಒಳಪಂಗಡ “ವನ್ನು ನಮೂದಿಸುವಂತೆ ಅವಕಾಶ ಮಾಡಿಕೊಡಬೇಕು.
ಯಾವುದೇ ಕಾರಣಕ್ಕೂ “ಹಿಂದೂ ಅಥವಾ ಇತರೆ” ಎಂದು ಧರ್ಮದ ಕಾಲಂನಲ್ಲಿ ಲಿಂಗಾಯತರನ್ನು ಸೇರಿಸಬಾರದು ಎಂದು ವಿನಂತಿಸುತ್ತೇವೆ.

ಹೀಗಾಗಿ, ಲಿಂಗಾಯತ ಜಾತಿಸಮೀಕ್ಷೆ ಮತ್ತು ಲಿಂಗಾಯತರ ಕುರಿತು ಸರ್ಕಾರ ಸ್ಪಷ್ಟ ನಿಲುವನ್ನು ತಾಳಬೇಕು. ಲಿಂಗಾಯತರಿಗೆ ಸಮೀಕ್ಷೆಯಲ್ಲಿ ತಮ್ಮ ಧರ್ಮವನ್ನು ನಮೂದಿಸಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಲಿಂಗಾಯತರನ್ನು ಗುರುತಿಸುವ ವ್ಯವಸ್ಥೆ ಮಾಡದೇ ಹೋದರೆ, ಜಾತಿ ಸಮೀಕ್ಷೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ವಿನಂತಿಪೂರ್ವಕ ಆಗ್ರಹದ ಮೂಲಕ ಸರ್ಕಾರಕ್ಕೆ ಎಚ್ಚರಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯಣ್ಣವರ, ಕಾರ್ಯದರ್ಶಿ ಸುರೇಶ ನರಗುಂದ, ಪ್ರಮುಖರಾದ ಶಂಕರ ಗುಡಸ, ಸಂಗಮೇಶ ಅರಳಿ, ಸುನೀಲ ಸಾಣಿಕೊಪ್ಪ, ವಿ.ಕೆ. ಪಾಟೀಲ, ರಮೇಶ ಕಳಸಣ್ಣವರ, ಸತೀಶ ಪಾಟೀಲ ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಆನಂದ ಗುಡಸ್, ಮಹಾದೇವ ಕೆಂಪಿಗೌಡರ, ಮಹಾಂತೇಶ ಪುರಾಣಿಕ, ವಿಜಯ ಹುದಲಿಮಠ, ಪ್ರಭು ಪಾಟೀಲ, ಅನೀಲ ರಗಶೆಟ್ಟಿ, ಫ.ಬ. ಕರಿಕಟ್ಟಿ, ಮಲ್ಲಪ್ಪ ಚೌಗಲಾ, ನಾಗನಗೌಡ ಪಾಟೀಲ, ಎಂ. ಲಕ್ಷ್ಮಣ, ಪಿ.ಆರ್. ಹಿರೇಮಠ, ಕೆ.ಆರ್. ಎಕ್ಸಂಬಿ ಮತ್ತಿತರರು ಉಪಸ್ಥಿತರಿದ್ದರು.
ವೀರಶೈವ ಎಂತ ಎಂದು ಬರಸಬೇಡಿ ಲಿಂಗಾಯತ ಅಂತಲೇ ಬರಸಿ ಮತ್ತೆ ಹಿಂದೂ ಅಂತಲೂ ಬರಿಸಬೇಡಿ ಹಿಂದೂ ವೀರಶೈವ ಅಂತ ಮತ್ತೆ ಬರೆಸಿ ಮೂರ್ಖರಾಗಬೇಡಿ ಲಿಂಗಾಯತ ಅಂತ ಬರೆಸಿ
ವೀರಶೈವ ಲಿಂಗಾಯಿತೆಂದು ಧರಿಸಿದರೆ ಮೂರ್ಖರೆಂದು ಹೇಳುತ್ತೀರಲ್ಲ ನಿಮ್ಮಂತ ಶತಮೂರ್ತರು ಎಲ್ಲೂ ಸಿಗುವುದಿಲ್ಲ ಏಕೆಂದರೆ ನೀವು ಹಿಂದೂ ಧರ್ಮವನ್ನು ಒಡೆದು ಆಳುವ ಎಡಪಂತಿಗಳು ನಮ್ಮ ವೀರಶೈವ ಲಿಂಗಾಯತ ಧರ್ಮ ಎಂದಿಗೂ ಸನಾತನ ಎಂದು ಧರ್ಮ ನಿಮ್ಮಂಥ ಮೂರ್ಖರು ಲಿಂದೆ ನಮ್ಮ ಕರ್ನಾಟಕ ಭಾರತ ಧರ್ಮ ಎಲ್ಲವೂ ನಶಿಸು ಹೋಗುತಿದೆ ಇಂತಹ ಶತಮೋಹೊರ್ಕರ ಮಾತನ್ನು ಕೇಳಿ ಅವರ ಹೇಳಿದ ಹಾಗೆ ಮಾಡಿದ್ದರೆ ಜನರು ನೀವೇ ಹೊಣೆಗಾರ ಆಗುತ್ತೀರಿ ತಿಳಿದುಕೊಳ್ಳಿ ಎದ್ದೇಳಿ ಇಂಥ ಶತಮೂರ್ಖರ ವಿರುದ್ಧ ಹೋರಾಟ ಮಾಡಿ ಇಷ್ಟೇ ನನ್ನ ವಿನಂತಿ
ಬಸವರಾಜ ಅಂತ ಹೆಸರು ಇಟ್ಟುಕೊಂಡಿರುವ ನೀವು ಲಿಂಗಾಯತರ ಇತಿಹಾಸವನ್ನೇ ಅರಿಯದ ಮೂರ್ಖರು ಅಂದರೆ ತಪ್ಪಾಗಲಿಕ್ಕಿಲ್ಲ.
ಕಲ್ಯಾಣದಲ್ಲಿ ನಡೆದ ಶರಣರ ಕಗ್ಗೊಲೆ ಬಸವಣ್ಣನವರ ಗಡಿಪಾರು ಇತ್ಯಾದಿ ಬಗ್ಗೆ ನಿಮಗೆ ಗೊತ್ತೇ ಇಲ್ಲವೆಂಬ ಸಂಶಯ ನನಗೆ.
ಯಾವ ವೈದಿಕ ಧರ್ಮದ ಪುರೋಹಿತ ಶಾಹಿ ಹಾಗೂ ವರ್ಣಾಶ್ರಮದ ವಿರುದ್ಧ ಹೋರಾಡಿ ನಮ್ಮೆಲ್ಲರನ್ನು ಶೂದ್ರ ದಿಂದ ಮುಕ್ತಿ ಗೊಳಿಸಿದ ಬಸವಣ್ಣ ಹಾಗೂ ಶರಣರ ತ್ಯಾಗ ಹಾಗೂ ಬಲಿದಾನಕ್ಕೆ ನೀವು ಕೊಡುವ ಗೌರವ ಇದೇನಾ?
ಲಿಂಗಾಯತ ರೆಂದು ಬರೆಸಿದ ಮಾತ್ರಕ್ಕೆ ನಾವು ಹಿಂದೂ ವಿರೋಧಿಗಳೆಂದು ನೀವು ಏಕೆ ಭಾವಿಸಬೇಕು? ನಮ್ಮ ಹೋರಾಟ ಏನಿದ್ದರೂ ಸನಾತನಿಗಳ ಶೋಷಣೆ, ಅವರ ವರ್ಣಾಶ್ರಮ ವ್ಯವಸ್ಥೆ ಮತ್ತು ಅವರ ಮೌಢ್ಯಗಳ ವಿರುದ್ಧ ಮಾತ್ರ.
ನಮಗೆ ನಮ್ಮದೇ ಆದ ಅಸ್ತಿತ್ವ ಇದೆ. ಅದರ ಸರಿಯಾದ ದಾಖಲೆ ಆಗಬೇಕಾಗಿರುವುದು ನಮ್ಮ ಸಾಂವಿಧಾನಿಕ ಹಕ್ಕು. ಇದನ್ನು ನಿಮ್ಮಂತ ಲಿಂಗಾಯತರು ಅರಿತುಕೊಂಡು ನಡೆದು ಕೊಂಡರೆ ಒಳಿತು. ಹೀಗೆ ಏನೇನೋ ಹುಚ್ಚುಚ್ಚಾರ ಮಾತಾಡಿ ನಿಮ್ಮ ಅಜ್ಞಾನ ಪ್ರದರ್ಶಿಸಬೇಡಿ.
ವೀರಶೈವ ಲಿಂಗಾಯತವೇ ಅಂತಿಮ