ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಜಾತಿ ಕಿರುಕುಳ: ನಟಿ ನಮಿತಾ

ಬಸವ ಮೀಡಿಯಾ
ಬಸವ ಮೀಡಿಯಾ

ಮಧುರೈ

ರವಿಚಂದ್ರನ್​ಗೆ ಜೋಡಿಯಾಗಿ ನಟಿಸಿದ್ದ ನಮಿತಾ ಮಧುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನದ ಅಧಿಕಾರಿಗಳು ತನ್ನನ್ನು ದೇವಸ್ಥಾನದ ಹೊರಗೆ ನಿಲ್ಲಿಸಿ ಜಾತಿ, ಧರ್ಮ ಕೇಳಿ ಕಿರುಕುಳ ನೀಡಿದ್ದಾರೆ ಎಂದು ವಿಡಿಯೋದಲ್ಲಿ ಆಪಾದಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಧರ್ಮದ ಬಗ್ಗೆ ಕೇಳುವ ಮೂಲಕ ತನ್ನನ್ನು ನೋಯಿಸಿದ್ದಾರೆ ಎಂದು ಹೇಳಿದ್ದಾರೆ.

‘ಕೃಷ್ಣಾಷ್ಟಮಿ ಇದ್ದಾಗ ನಾನು ನನ್ನ ಕುಟುಂಬ ಸಮೇತ ಮೀನಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಹೋಗಿದ್ದೇವು. ಅಲ್ಲಿ ನನ್ನನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ಸಿಬ್ಬಂದಿ ತಡೆದರು. ಅಲ್ಲದೆ ಕೆಲವು ಸರ್ಟಿಫಿಕೇಟ್‌ಗಳನ್ನು ತೋರಿಸಲು ಕೇಳಿದರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಇರುವ ಅನೇಕ ಪ್ರಸಿದ್ಧ ದೇವಾಲಯಗಳಿಗೆ ಹೋಗಿದ್ದೇನೆ ಮತ್ತು ಈ ರೀತಿ ಆಗಿಲ್ಲ. ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಬಯಸುವುದಿಲ್ಲ,” ಎಂದು ನಮಿತಾ ನಟಿ ನಮಿತಾ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬರೆದಿಕೊಂಡಿದ್ದಾರೆ.

ನಿಯಮಾವಳಿಯಂತೆ ಅಧಿಕಾರಿಗಳು ಆಕೆಯನ್ನು ಮಾತನಾಡಿಸಿ ನಂತರ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು ಎಂದು ದೇವಸ್ಥಾನದ ಪ್ರಕಟಣೆಯೊಂದು ತಿಳಿಸಿದೆ.

Share This Article
Leave a comment

Leave a Reply

Your email address will not be published. Required fields are marked *