ಅಂದ್ರಾಳು (ಬಳ್ಳಾರಿ)
ಸಾಮಾಜಿಕ ನ್ಯಾಯದ ಮೊದಲ ಹರಿಕಾರರಾದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿ ಒಂದು ವರ್ಷ ಪೂರೈಸಿದ ನಿಮಿತ್ಯ, ಶರಣ ಶಿವಕುಮಾರ ಅಣ್ಣನವರ ಮನೆಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ, ಸಾಮೂಹಿಕ ಪ್ರಾರ್ಥನೆ, ವಚನ ಪಠಣ ಹಾಗೂ ಅವರ ಕುರಿತು ಚಿಂತನೆ ಕಾರ್ಯಕ್ರಮ ಶನಿವಾರ ಸಂಜೆ ನಡೆಸಲಾಯಿತು.
ಬಳ್ಳಾರಿ ಅಂದ್ರಾಳು, ಬಾಪುಜಿನಗರ ಘಟಕದ ರಾಷ್ಟ್ರೀಯ ಬಸವ ದಳ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು, ಸದಸ್ಯರುಗಳಾದ ಎಸ್. ಶಿವಕುಮಾರ, ಶಿವಗಂಗಮ್ಮ, ಕಾರೇಕಲ್ಲು ಬಸನಗೌಡ, ಬಂಡೂರು ಬಸನಗೌಡ, ಮಂಗಳ, ವೀರೇಶ, ಹೆಚ್. ಗಾಳೇಶಪ್ಪ, ಹೆಚ್. ಗೌರಿ, ಎಸ್. ನಾಗಲಿಂಗಪ್ಪ, ಎಸ್. ರಾಜೇಶ್ವರಿ, ರುದ್ರಮ್ಮ ಮತ್ತಿತರ ಶರಣ-ಶರಣೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.