ಸಾಣೇಹಳ್ಳಿ
ಇಂದು ಬೆಂಗಳೂರಿನಿಂದ ದೇಶ ಉಳಿಸುವ ಮಹಾಯಾನ ಆಂದೋಲನ ಭಾಗವಾಗಿ “ಎದ್ದೇಳು ಕರ್ನಾಟಕ ತಂಡ ಸಂವಿಧಾನ ಯಾನ” ಸಂಘಟನೆಯ ಅನೇಕ ಸದಸ್ಯರು ಸಾಣೇಹಳ್ಳಿಗೆ ಬಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಯ ಬಗ್ಗೆ ಗಂಭೀರವಾದ ಚಿಂತನೆಯನ್ನು ನಡೆಸಿದರು.
ಇವತ್ತು ಇಡೀ ದೇಶದಲ್ಲಿ ಭ್ರಷ್ಟತೆ ತಾಂಡವವಾಡುತ್ತಿದೆ. ರಾಜಕೀಯ ಕ್ಷೇತ್ರವನ್ನು ಸುಧಾರಣೆ ಮಾಡಲಿಕ್ಕೆ ತಾವು ಇತ್ತೀಚಿಗೆ ಅನೇಕ ಪ್ರಯೋಗಗಳನ್ನು ಮಾಡ್ತಾ ಇರುವಂಥದ್ದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ನಾವು ನೀವು ಸೇರಿ ಇಂತಹ ಕಾರ್ಯಕ್ರಮಗಳನ್ನು ಮಾಡಿದರೆ ಇನ್ನು ಒಳ್ಳೆಯ ಕೆಲಸ ಕಾರ್ಯಗಳನ್ನು ಸಮಾಜದಲ್ಲಿ ಮಾಡಲಿಕ್ಕೆ ಉತ್ತಮ ಆಡಳಿತವನ್ನು ತರಲಿಕ್ಕೆ, ಅನ್ಯಾಯವನ್ನು ಪ್ರತಿಭಟನೆ ಮಾಡಲಿಕ್ಕೆ ಸಹಕಾರಿಯಾಗುತ್ತದೆ ಎನ್ನುವ ಆಶಯವನ್ನಿಟ್ಟುಕೊಂಡು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಜೊತೆಗೆ ಮುಕ್ತವಾಗಿ ಚರ್ಚೆ ಮಾಡಿದರು.

ಚರ್ಚೆಯಲ್ಲಿ ನೂರ್ ಶ್ರೀಧರ್, ತಾರಾರಾವ್, ವೀರಸಂಗಯ್ಯ, ಮಲ್ಲಿಗೆ ಸಿರಿಮನೆ, ಗಿರಿಜಾ, ಮುನ್ನಾರವರು ಸುಮಾರು ಎರಡು ಗಂಟೆಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದರು.
೨೬ ಏಪ್ರಿಲ್ ೨೦೨೫ರ ಶನಿವಾರದಂದು ‘ಸಂವಿಧಾನ ಸಂರಕ್ಷಕರ ಸಮಾವೇಶ’ ನಡೆಯಲಿದೆ. ಇದಕ್ಕೆ ತಮ್ಮ ಬೆಂಬಲ ಹಾಗೂ ಮಾರ್ಗದರ್ಶನ ಇರಲಿ ಎಂದು ಕೋರಿದರು.