ಹೊಸ ಓದು: ಲಿಂಗಾಯತ ಧರ್ಮದ ಮಹತ್ವ – ಶರಣತತ್ವ ಸಂಸ್ಕಾರ ಸಾಧನ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ಇತ್ತೀಚೆಗೆ ನಗರದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಸಂಗಮೇಶ ಕಲಹಾಳರು ರಚಿಸಿರುವ ‘ಲಿಂಗಾಯತ ಧರ್ಮದ ಮಹತ್ವ’ ಪುಸ್ತಕದ ಎರಡನೇ ಪರಿಷ್ಕೃತಿ ಆವೃತ್ತಿ ಲೋಕಾರ್ಪಣೆಯಾಯಿತು.

ಶರಣ ಧರ್ಮ, ಬಸವ ಧರ್ಮ, ಲಿಂಗಾಯತವಾದಗಳನ್ನು ವಿವರಿಸುವ ಪುಸ್ತಕದ ಕಿರು ಪರಿಚಯ ಇಲ್ಲಿದೆ.

ಪರಿವಿಡಿ

  1. ಲಿಂಗಾಯತರ ನಡವಳಿಕೆಗಳು
  2. ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಜೀವನ ಚರಿತ್ರೆ : ಕರ್ತನಟ್ಟಿದ ಶರಣನೇ ಬಸವ, ಸ್ವಯಂಪ್ರಜ್ಞಾ ಬಸವ, ಜ್ಞಾನಾರ್ಜನೆ, ಇಷ್ಟಲಿಂಗ ಜನಕ ಬಸವ, ಬಲದೇವರಸರ ಮೆಚ್ಚುಗೆಯ ಬಸವ, ಮಂಗಳವೇಡೆಗೆ ಪ್ರಯಾಣ ಮತ್ತು ಕರಣಿಕ ಕಾಯಕ ಸ್ವೀಕಾರ, ನೀಲಗಂಗಾಂಬಿಕೆಯೊಂದಿಗೆ ವಿವಾಹ, ಕರ್ಮಭೂಮಿ ಕಲ್ಯಾಣ ಪ್ರವೇಶ, ರಾಜಘನತೆ ಪ್ರಾಪ್ತಿ ಮತ್ತು ಬಿಜ್ಜಳರಾಜನ ನೆಚ್ಚಿನ ಪ್ರಧಾನಿ, ಅನುಭವ ಮಂಟಪ ಸ್ಥಾಪನೆ, ಜಾತಿ ಮತ ವರ್ಗರಹಿತ, ಧರ್ಮಸಹಿತ ಸಮಾಜ ನಿರ್ಮಾಣ, ದಿವ್ಯ ಪ್ರಯೋಗಶಾಲೆ, ಪರಿವರ್ತನೆಯ ಬಸವಯುಗ, ಮಹಾಮಣಿಹ ಪೂರೈಸಿದ ಬಸವಣ್ಣನವರು, ಬಯಲಲ್ಲಿ ಬಯಲಾದ ಬಸವಣ್ಣನವರು, ಜಗತ್ತಿಗೆ ಲಿಂಗಾಯತ ಬೆಳಗು ಬೆಳಗಿಸಿದ ಹುತಾತ್ಮ ಶರಣರು, ವಚನಸಾಹಿತ್ಯ ಸಂರಕ್ಷಣೆ)
  3. ಶರಣ ತತ್ವಜ್ಞಾನದ ಸಿದ್ಧಾಂತಗಳು : ಲಿಂಗಾಯತ ಮತ್ತು ಲಿಂಗಾಯತರು, ಲಿಂಗಾಯತ ಧರ್ಮದ ಪರ್ಯಾಯಗಳು, ವಿಶ್ವಗುರು ಬಸವಣ್ಣನವರ ಅನುಯಾಯಿಗಳೇ ಲಿಂಗಾಯತರು, ಶರಣತತ್ವ ಜ್ಞಾನ ಸಾಹಿತ್ಯ, ಶಿವಯೋಗೀಶ್ವರ ಪರಂಪರೆ, ಸೃಷ್ಟಿರಚನೆ, ಮಾನವದೇಹ ರಚನೆ ಮತ್ತು ಇಷ್ಟಲಿಂಗದ ಉಗಮ, ಇಷ್ಟಲಿಂಗವೇ ಪರಮಾತ್ಮನ ಕುರುಹು, ಸೃಷ್ಟಿ ಉತ್ಪತ್ತಿ (ವೀಕ್ಷಿಸಬಹುದಾದ ವಿಶ್ವದ ಮಾಹಿತಿ), ಭೂಮಿ, ಜೀವೋತ್ಪತ್ತಿ ಮತ್ತು ನಾಗರಿಕತೆ ವಿವರ, ಜೀವ ವಿಕಾಸ, ಮಾನವ ದೇಹ ಮತ್ತು ರಚನೆ, ಇಷ್ಟಲಿಂಗದ ಉಗಮ, ದೇವರ ಪರಿಕಲ್ಪನೆ, ದೇವರ ಸ್ವರೂಪ ಅರಿಯುವ ಕ್ರಮ, ವಿಶ್ವಾತೀತ ಆತ್ಮ – Transcendental soul, ವಿಶ್ವಾತ್ಮ – Universal soul, ಜೀವಾತ್ಮ – Individual soul.
  4. ಶಿವಯೋಗ: ಶಿವಯೋಗಕ್ಕಾಗಿ ಆರೋಗ್ಯ, ಸಮಗ್ರ ಆರೋಗ್ಯ, ಮೂಢನಂಬಿಕೆ, ಅಂಧಾನುಕರಣೆ ಮತ್ತು ಕಂದಾಚಾರಗಳು, ದುಷ್ಪರಿಣಾಮಗಳು (ಮರೆವು ಮಾಯೆ ಭ್ರಾಂತಿ ಭ್ರಮೆ ದುಃಖ), ಅಂಗಗುಣಗಳನ್ನು ಕಳೆದುಕೊಂಡು ಲಿಂಗಗುಣ ಸಂಪಾದನೆ, ಆರೋಗ್ಯ ಪಾಲನೆ ಕ್ರಮ, ಸುಖದಿಂದ ಇರುವುದು ಹೇಗೆ, ಸಾಕ್ಷಾತ್ಕಾರ ಮತ್ತು ಶಿವಯೋಗ, ಅಂಗಗುಣಗಳು, ಲಿಂಗಗುಣ ಸಂಪಾದನೆ, ಸಾಕ್ಷಾತ್ಕಾರ.
  5. ಶಿವಯೋಗದ ಬುನಾದಿ ಬಸವಣ್ಣನವರ ಭಕ್ತಿಪಥ : ಶೃದ್ಧಾಭಕ್ತಿ, ನಿಷ್ಠಾಭಕ್ತಿ, ಅವಧಾನ ಭಕ್ತಿ, ಅನುಭಾವ ಭಕ್ತಿ, ಆನಂದ ಭಕ್ತಿ, ಸಮರಸ ಭಕ್ತಿ.
  6. ಶಿವಯೋಗದ ಅಡಿಗಟ್ಟು ಬಸವಣ್ಣನವರ ಶಿವಪಥ : ಶಿವಜ್ಞಾನ, ಶಿವಭಕ್ತಿ, ಶಿವಧ್ಯಾನ, ಶಿವವ್ರತ, ಶಿವಾರ್ಚನೆ.
  7. ಶಿವಯೋಗದ ಆಚರಣೆ ಕ್ರಮ : ಇಷ್ಟಲಿಂಗದೀಕ್ಷೆ, ಪ್ರಾರ್ಥನೆ, ದಶಚಕ್ರಗಳ ಧ್ಯಾನ, ಇಷ್ಟಲಿಂಗಾರ್ಚನೆ, ಇಷ್ಟಲಿಂಗಾರ್ಚನೆ ಕ್ರಮ, ಇಷ್ಟಲಿಂಗಾರ್ಚನೆ ಸಿದ್ಧತೆ, ಪೂಜಾ ಕೋಣೆ ಪ್ರವೇಶ (ಪೂಜಾ ಸ್ಥಳಕ್ಕೆ ಬರುವುದು), ಆಸನದ ಬಗ್ಗೆ ಪವಿತ್ರ ಭಾವ, ಜಲಶುದ್ಧಿ (ಶುದ್ಧೋದಕ), ಅರಿವಿನ ಗುರುವಿನ ಸ್ಮರಣೆ, ವಿಭೂತಿ ಧಾರಣೆ, ರುದ್ರಾಕ್ಷಿ ಧಾರಣ, ಇಷ್ಟಲಿಂಗ ಮಜ್ಜನ, ವಿಭೂತಿ, ಬಿಲ್ವಪತ್ರೆ, ಹೂ, ನೈವೇದ್ಯ, ಘಂಟನಾದ ಅರ್ಪಣೆ, ದೃಷ್ಟಿಯೋಗ (ಇಷ್ಟಲಿಂಗ ಧ್ಯಾನ), ಇಷ್ಟಲಿಂಗ ಅರ್ಚನೆ, ಪ್ರಾಣಲಿಂಗ ಅರ್ಚನೆ, ಭಾವಲಿಂಗ ಅರ್ಚನೆ, ಇಷ್ಟಲಿಂಗಪೂಜೆ, ಪ್ರಾಣಲಿಂಗಪೂಜೆ, ಭಾವಲಿಂಗಪೂಜೆ ಯಾವುದು, ಪಾದೋದಕ ಸ್ವೀಕಾರ, ಮಹಾ ಪ್ರಸಾದ ಸ್ವೀಕಾರ, ಅನುಭಾವ, ಇಷ್ಟಲಿಂಗಾರ್ಪಣೆ, ಶಿವಯೋಗವು ವಿಶ್ವ ಪರಮೋಚ್ಚ ಪ್ರಜ್ಞೆಯ ಅನುಭವ.
  8. ಲಿಂಗಾಯತ ಮೂಲಭೂತ ತತ್ವಗಳು : ಅಷ್ಟಾವರಣ, ಪಂಚಾಚಾರಗಳು, ಷಟಸ್ಥಲಗಳು, ಕಾಯಕ, ದಾಸೋಹ, ಮಂತ್ರಗಳು, ಪ್ರಗತಿಪರ ದೃಷ್ಟಿಕೋನ, ಮೂಢನಂಬಿಕೆಗಳ ಆಚರಣೆ, ಧರ್ಮ ಕ್ಷೇತ್ರಗಳು, ಹಬ್ಬ ಹುಣ್ಣಿಮೆಗಳು, ಸಂಸ್ಕಾರಗಳು ಮತ್ತು ನಿಜಾಚರಣೆಗಳು.

ಗ್ರಂಥಕರ್ತರು

ಡಾ ಸಂಗಮೇಶ ಮ. ಕಲಹಾಳ ಶರಣತತ್ವ ಚಿಂತಕರು ಮತ್ತು ಅನುಭಾವಿಗಳು, ಕೊಪ್ಪಳ

ಗಾಂಧೀವಾದಿ ಆದರ್ಶ ಶಿಕ್ಷಕ ದಂಪತಿಗಳಾದ ಲಿಂ. ಕಲಹಾಳ ಮಡಿವಾಳಪ್ಪನವರು ಮತ್ತು ಲಿಂ. ಪಾರ್ವತಮ್ಮನವರ ಸುಪುತ್ರರು, ಎಂ. ಡಿ ಆಯುರ್ವೇದ ಸ್ನಾತಕೊತ್ತರ ಪದವೀಧರರಾಗಿದ್ದಾರೆ. ಇವರು ಒಟ್ಟು 35 ವರ್ಷಗಳ ಸರ್ಕಾರಿ ಸೇವೆಯಲ್ಲಿ ಹಿರಿಯ ವೈದ್ಯಾಧಿಕಾರಿಗಳಾಗಿ, ಎನ್.ಆರ್.ಹೆಚ್.ಎಂ.ಆಯುಷ್ ರಾಜ್ಯ ನೋಡಲ್ ಆಫೀಸರ್ರಾಗಿ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲಾ ಆಯುಷ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

1999 ರಿಂದ 2004 ರವರೆಗೆ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಗೆ ಮತ್ತು 2004 ರಿಂದ 2006 ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೊಪ್ಪಳ ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ, ಕರ್ನಾಟಕ ಸರ್ಕಾರದಿಂದ ನಾಮಕರಣ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಪಾರಂಪರಿಕ ಔಷಧಿಗಳ ಸಂಶೋಧನೆ ಮತ್ತು ಹೆಪ್ ಟೈಟಿಸ್-ಬಿ ಸೋಂಕು (ಕಾಮಣಿ) ರೋಗದ ಮೇಲೆ ಆಯುರ್ವೇದ ಔಷಧಿಯ ಕ್ಲಿನಿಕಲ್ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಇವರು ರಚಿಸಿದ ನಾಗರಿಕ ಬಂದೂಕು ತರಬೇತಿ ಮಾರ್ಗದರ್ಶಿ (1993), ಆಯುಷ್ ಸಿಂಚನ (2008), ಸಂಸ್ಕಾರ ಸಾಧನ (2009), ಪರಿಚಯ ಪ್ರಭ (2009), ಶ್ರೀ ಮಾಚಿದೇವ ಪ್ರಕಾಶ (2009), ಕೊಪ್ಪಳ ಜಿಲ್ಲೆಯ ಸಾಂಪ್ರದಾಯಿಕ ಚಿಕಿತ್ಸೆಗಳು ಕಿರುಸಂಶೋಧನೆ (2009), ಆರೋಗ್ಯವೇ ಜೀವ ಸಂಜೀವಿನಿ (2018), ವಚನಸಾಹಿತ್ಯ ರಕ್ಷಕ ವೀರಶರಣ ಶ್ರೀ ಮಡಿವಾಳ ಮಾಚಿದೇವರು ಕಿರುಗ್ರಂಥ (2018, 2020, 2022, 2025), ಶರಣತತ್ವ ಸಂಸ್ಕಾರ ಸಾಧನ (2024), ಲಿಂಗಾಯತ ಧರ್ಮದ ಮಹತ್ವ (2025) ಇತ್ಯಾದಿ ಗ್ರಂಥಗಳು ಪ್ರಕಟವಾಗಿವೆ.

ಇವರು ಸಿದ್ಧ ಸಂಸ್ಕಾರ ಅಂತರರಾಷ್ಟ್ರೀಯ ಪ್ರಶಸ್ತಿ 2015, ಮುಖ್ಯ ಮಂತ್ರಿಗಳಿಂದ ಅತ್ಯುತ್ತಮ ವೈದ್ಯ ಪ್ರಶಸ್ತಿ 1997, ಶಿರೂರು ನಾಗರಿಕ ಸನ್ಮಾನ 2005, ಮಾಚಿ ಮಡಿವಾಳ ರತ್ನಶ್ರೀ ಪ್ರಶಸ್ತಿ 2005, ಬಸವ ಮಾಚಿದೇವಶ್ರೀ ಪ್ರಶಸ್ತಿ 2005, ಶರಣದಂಪತಿ ಪ್ರಶಸ್ತಿ 2007, ಶಿವಯೋಗಮಂದಿರ ಶತಮಾನೋತ್ಸವ ಗೌರವ ಸನ್ಮಾನ 2010, ಕಾಯಕಯೋಗಿ ಪ್ರಶಸ್ತಿ 2012, ಆರೋಗ್ಯ ದಾಸೋಹಿ ಪ್ರಶಸ್ತಿ 2014, ಶ್ರೀ ಧನ್ವಂತರಿ ವೈದ್ಯರತ್ನ ಪ್ರಶಸ್ತಿ 2015, ಬಸವಶ್ರೀ ಪ್ರಶಸ್ತಿ 2017, ಮೂಲ ಭಕ್ತ ಶಿರೋಮಣಿ ಪ್ರಶಸ್ತಿ 2017 ಮತ್ತು ವಿಶ್ವ ಆದರ್ಶ ಕುಟುಂಬ 2020 ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ.

ವೃತ್ತಿಯಿಂದ ವೈದ್ಯರಾದ ಇವರು ಪ್ರವೃತ್ತಿಯಿಂದ ವೈದ್ಯ ಸಾಹಿತಿ ಮತ್ತು ಶರಣ ಸಾಹಿತಿಗಳಾಗಿದ್ದಾರೆ. ಕಳೆದ 40 ವರ್ಷಗಳಿಂದ ಸಮಾಜ ಸೇವಕರಾಗಿ ಮತ್ತು 17 ವರ್ಷಗಳಿಂದ ಚಿತ್ರದುರ್ಗ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ವಚನಗಳಲ್ಲಿನ ವೈಜ್ಞಾನಿಕ ಮತ್ತು ವೈದ್ಯಕೀಯ ಆಯಾಮಗಳ ಕುರಿತು ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊಪ್ಪಳದಲ್ಲಿ ಮತ್ತು ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಶರಣಸಂಗಮ, ಶಿವಾನುಭವ, ಅಧ್ಯಯನ-ಅನುಸಂಧಾನ ಇತ್ಯಾದಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಸವತತ್ವ ಪ್ರಸಾರಕರು, ಶರಣತತ್ವ ಚಿಂತಕರು ಮತ್ತು ಅನುಭಾವಿಗಳು ಎಂದು ಚಿರಪರಿಚಿತರಾಗಿದ್ದಾರೆ.

ಹೊಸ ಓದು

ಲಿಂಗಾಯತ ಧರ್ಮದ ಮಹತ್ವ
ಶರಣ ಧರ್ಮ / ಬಸವ ಧರ್ಮ / ಲಿಂಗಾಯತವಾದ
(ಶರಣತತ್ವ ಸಂಸ್ಕಾರ ಸಾಧನ ಗ್ರಂಥದ ಪರಿಷ್ಕೃತ ಎರಡನೆಯ ಆವೃತ್ತಿ)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
1 Comment

Leave a Reply

Your email address will not be published. Required fields are marked *