ಬೀದರ
ತಾಲೂಕಿನ ಸಂಗೋಳಗಿ ಗ್ರಾಮದಲ್ಲಿ, ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಶಶಿಧರ ಹಿಂದಾ ಅವರು ನಿರ್ಮಿಸಿದ ನೂತನ ಮನೆ ‘ಕಾಯಕ ಜ್ಯೋತಿ’ ಗುರುಪ್ರವೇಶ ಪೂಜ್ಯಶ್ರೀ ಬಸವಪ್ರಭು ಸ್ವಾಮಿಗಳು ಕಲ್ಯಾಣ ಮಹಾಮನೆ, ಮಹಾಮಠ ಗುಣತೀರ್ಥವಾಡಿ, ಬಸವಕಲ್ಯಾಣ ಇವರ ನೇತೃತ್ವದಲ್ಲಿ ಈಚೆಗೆ ನಡೆಯಿತು.
ಆರಂಭದಲ್ಲಿ ಶಿವಕುಮಾರ ಷಟಸ್ಥಲ ಧ್ವಜಾರೋಹಣ ಮಾಡಿದರು. ನಂತರ ಗುರು ಬಸವಣ್ಣನವರ ಭಾವಚಿತ್ರದೊಂದಿಗೆ ಮನೆಯ ಸದಸ್ಯರೆಲ್ಲ ಮನೆಯೊಳಗೆ ಪ್ರವೇಶ ಮಾಡಿದರು. ಮನೆಯೊಳಗೆ ಪೂಜ್ಯ ಬಸವಪ್ರಭು ಸ್ವಾಮೀಜಿ ಇಷ್ಟಲಿಂಗ ಪೂಜೆ, ವಚನಗಳ ಮಂತ್ರ ಪಠಣ ನಡೆಸಿದರು.

ಶ್ರೀದೇವಿ ಎಸ್. ಹಿಂದಾ, ಶಾಂತಕುಮಾರ, ಬಸವಸಂಕೇತ ಮತ್ತು ಮನೆಯ ಸದಸ್ಯರೆಲ್ಲ ಬಸವಣ್ಣನವರ ಮೂರ್ತಿಗೆ ಪತ್ರೆ, ಪುಷ್ಪ ಅರ್ಪಿಸಿ, ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ನಂತರ ಬಂದವರಿಗೆಲ್ಲ ದಾಸೋಹ ನಡೆಯಿತು.
ಹಿಂದ ಪರಿವಾರ, ಬಂಧು-ಮಿತ್ರರು, ರಾಷ್ಟ್ರೀಯ ಬಸವದಳದ ಪ್ರಮುಖರು, ಸದಸ್ಯರು, ಗ್ರಾಮದ ಶರಣ ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.