‘ಬದುಕಲು ಶಕ್ತಿ ನೀಡುವ ಶರಣ ಸಂಸ್ಕೃತಿ’

ಬಸವ ಮೀಡಿಯಾ
ಬಸವ ಮೀಡಿಯಾ

ಗಜೇಂದ್ರಗಡ

ನಾವೆಲ್ಲ ಬಸವಾದಿ ಶರಣರ ಚಿಂತನೆ ತಿಳಿಯಬೇಕು. ನಮಗೆ ಮತ್ತು ನಮ್ಮ ಮಕ್ಕಳಿಗೆ ಶರಣರ ಸಂಸ್ಕಾರ ಅತ್ಯವಶ್ಯಕವಾಗಿದೆ. ಶರಣರ ನುಡಿಯಂತೆ ನಾವೆಲ್ಲ ನಡೆಯಬೇಕು. ನಮ್ಮ ನಡೆ ನುಡಿ ಶರಣರದೇ ಆಗಿರಬೇಕೆಂದು ಸ್ಥಳೀಯ ಬಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜು ಉಪನ್ಯಾಸಕ ವೀರಭದ್ರಯ್ಯ ಹಿರೇಮಠ ಹೇಳಿದರು.

ಅವರು ತಾಲೂಕ ಜಾಗತಿಕ ಲಿಂಗಾಯತ ಮಹಾಸಭಾ, ಅ.ಭಾ. ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಶರಣೆ ವಿಜಯಲಕ್ಷ್ಮೀ ಮತ್ತು ಶರಣ ಕಳಕಯ್ಯ ಸಾಲಿಮಠ ಅವರ ಮನೆಯಲ್ಲಿ ಶನಿವಾರ ನಡೆದ “ಮನೆ ಮನೆಯಲ್ಲಿ ವಚನ ಚಿಂತನೆ” ಹಾಗೂ “ಶರಣರ ಸ್ಮರಣೆ” ಕಾರ್ಯಕ್ರಮದಲ್ಲಿ ಅನುಭಾವ ನುಡಿಗಳನ್ನು ಆಡಿದರು.

ಅಲಕ್ಷಿತಗೊಂಡಿದ್ದ ಮಹಿಳೆಯರು, ಶೋಷಿತ ವರ್ಗದವರಿಗೆ ಬಸವಾದಿ ಶರಣರು ಅಂದೇ ಉನ್ನತ ಸ್ಥಾನ ಮಾನ ನೀಡಿ, ಎಲ್ಲಾ ಅವಕಾಶಗಳನ್ನು ಒದಗಿಸಿದ್ದರು. ದುಡಿಯೋ ಜನರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಂತಹ ಸಂಸ್ಕೃತಿ ಶರಣರದಾಗಿತ್ತು. ಶರಣ ಸಂಸ್ಕೃತಿ ಎಲ್ಲರಿಗೂ ಬದುಕಲು ಶಕ್ತಿ, ಗೌರವ ಕೊಡುತ್ತದೆ ಎಂದು ತಾಲೂಕು ಶ.ಸಾ. ಪರಿಷತ್ತು ಅಧ್ಯಕ್ಷ ಬಸವರಾಜ ಕೊಟಗಿ ಹೇಳಿದರು.

ವೇದಿಕೆಯಲ್ಲಿ ಪುರಸಭೆ ಸದಸ್ಯ ಯು.ಆರ್. ಚನ್ನಮ್ಮನವರ ಇದ್ದರು. ಅಧ್ಯಕ್ಷತೆಯನ್ನು ಜಾ.ಲಿಂ. ಮಹಾಸಭಾ ಅಧ್ಯಕ್ಷ ಗುರುಲಿಂಗಯ್ಯ ಓದಸುಮಠ ವಹಿಸಿದ್ದರು.

ಶರಣ ಕೆ.ಎಸ್. ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು. ಬಸವರಾಜ ಅಂಗಡಿ ಶರಣು ಸಮರ್ಪಣೆ ಮಾಡಿದರು. ನಿಹಾರಿಕ, ಸಮರ್ಥ ಸಾಲಿಮಠ ವಚನ ಗಾಯನ ಮಾಡಿದರು.

ವಿಜಯಲಕ್ಷ್ಮೀ ಸಾಲಿಮಠ, ನೀಲಮ್ಮ ರೇವಡಿ, ರೇಖಾ ಸಾಲಿಮಠ, ಅನಸೂಯಾ ಹೊನವಾಡ, ಶ್ರೀಮತಿ ಕುಲಕರ್ಣಿ, ಲಕ್ಷ್ಮೀ ಹರಿಹರ, ಪುಷ್ಪ ನಂದಿಹಾಳ, ರೇಣುಕಾ ಸಂಗನಾಳ, ಗೌರಮ್ಮ ಸಜ್ಜನರ, ಪ್ರಭಾವತಿ ಮಂತಾ, ಉಮಾ ಹಿರೇಮಠ, ಯಶೋಧಾ ಜಾವೂರ, ಶೃತಿ ಉಪ್ಪಾರ, ಕಾವ್ಯ ಹಿರೇಮಠ, ನಂದಿನಿ ಹರಿಹರ, ಕಾಶಯ್ಯ ಹಿರೇಮಠ, ಅಂದಪ್ಪ ರೋಣದ, ಸಾಗರ ವಾಲಿ, ಶಂಕರ ಕಲ್ಲಿಗನೂರ, ಬಸವರಾಜ ಚೋಳಿನ, ರಾಘು ಹೋಳಗಿ, ಶರಣಪ್ಪ ರೇವಡಿ, ಸುರೇಶ ಚೋಳಿನ, ಕಳಕಪ್ಪ ಪತಂಗರಾಯ, ಬಸಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *