ತಿಮ್ಮಾಪುರ, ಬಿಳಿಮಲೆ, ದರ್ಗಾ, ರಾಜೂರ, ಬಾಳಿ, ನಿಜಗುಣಾನಂದ ಶ್ರೀ, ಜ್ಞಾನಪ್ರಕಾಶ ಶ್ರೀ, ತರೀಕೆರೆ, ಫಾ. ಮಾಡ್ತಾ, ಚಿನ್ನಸ್ವಾಮಿ ಸಮಿತಿ ಸದ್ಯಸರು.
ಬೆಂಗಳೂರು
ಬಸವ ಜಯಂತಿಯಂದು (ಏಪ್ರಿಲ್ 30) ಕೂಡಲ ಸಂಗಮದಲ್ಲಿ ನಡೆಯಲಿರುವ ಸರ್ವ ಧರ್ಮ ಸಂಸತ್ತಿನ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆಯಾಗಿದೆ.
ಅಭಕಾರಿ ಸಚಿವ ಆರ್ ಬಿ ತಿಮ್ಮಾಪುರ, ಪುರುಷೋತ್ತಮ ಬಿಳಿಮಲೆ, ಹಂಪ ನಾಗರಾಜಯ್ಯ, ರಂಜಾನ್ ದರ್ಗಾ, ವೀರಣ್ಣ ರಾಜೂರ, ಲಲಿತ ನಾಯಕ್, ಮೀನಾಕ್ಷಿ ಬಾಳಿ, ನಿಜಗುಣಾನಂದ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಫಾ. ಪ್ರಶಾಂತ್ ಮಾಡ್ತಾ, ಮೂಡ್ನಾಕೂಡು ಚಿನ್ನಸ್ವಾಮಿ, ರಹಮತ್ ತರೀಕೆರೆ ಸಮಿತಿಯ ಸದ್ಯಸರಾಗಿದ್ದಾರೆ.
ಸಮಿತಿಯ ಮೊದಲ ಸಭೆಯನ್ನು ಏಪ್ರಿಲ್ 2 ರಂದು ಕರೆದಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬದುಕು, ಸಂದೇಶಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ಸರ್ವ ಧರ್ಮ ಸಂಸತ್ತನ್ನು ಆಯೋಜಿಸಲಾಗುತ್ತಿದೆ.
ಬಸವಣ್ಣನವರು ಸೃಷ್ಟಿಸಿದ್ದ ಅನುಭವ ಮಂಟಪವನ್ನು ಮಾದರಿಯಾಗಿಟ್ಟುಕೊಂಡು ʼಸರ್ವಧರ್ಮ ಸಂಸತ್ತುʼ ಸಮಾನತೆ ಹಾಗೂ ಸೌಹಾರ್ದತೆಯ ಸಂದೇಶ ಸಾರಲು ಚರ್ಚೆಗಳನ್ನು ನಡೆಸಲಿದೆ.
ಕನ್ನಡ ಮತ್ತು ಸಂಸ್ಕೃತಿ ಶಿವರಾಜ ತಂಗಡಗಿ, “ಬಸವ, ಅಂಬೇಡ್ಕರ್ ತತ್ವದ ಅಡಿಯಲ್ಲಿ ಸಮಾನತೆಯ ಸಂದೇಶ ಸಾರಲು ಸರ್ಕಾರದ ವತಿಯಿಂದ ಸರ್ವಧರ್ಮ ಸಂಸತ್ತು ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಆ ಹಿನ್ನೆಲೆಯಲ್ಲಿ ಸಮಿತಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ,” ಎಂದು ಮಾಧ್ಯಮಗಳಿಗೆ ಹೇಳಿದರು.
ಶುಕ್ರವಾರ ಕೂಡಲ ಸಂಗಮದಲ್ಲಿ ‘ಸರ್ವ ಧರ್ಮ ಸಂಸತ್ತು’ ಕಾರ್ಯಕ್ರಮವನ್ನು ಘೋಷಿಸಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಈ ವಿಷಯದಲ್ಲಿ ತಾವು ಕನ್ನಡ ಸಂಸ್ಕೃತಿ ಇಲಾಖೆಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನು ಭೇಟಿ ಮಾಡಿದ್ದೇನೇ ಎಂದು ಹೇಳಿದ್ದರು.
ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ 2022 ರಲ್ಲಿ ಸರ್ವಧರ್ಮ ಸಂಸತ್ ಕಾರ್ಯಕ್ರಮವನ್ನು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಆದರೆ, ಈ ಬಾರಿ ಸರ್ಕಾರವೇ ಅಧಿಕೃತವಾಗಿ ಸರ್ವಧರ್ಮ ಸಂಸತ್ ನಡೆಸಲು ಉದ್ದೇಶಿಸಿದೆ.
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬದುಕು, ಸಂದೇಶಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ಸರ್ವ ಧರ್ಮ ಸಂಸತ್ತನ್ನು ಆಯೋಜಿಸಲಾಗುತ್ತಿದೆ.
ಖುಷಿಯ ವಿಚಾರ. ಸರ್ವ ಮಾನ್ಯ. ಬಸವ ವಸ್ತು ಸಂಗ್ರಹಾಲಯ ಕೂಡ ಉದ್ಘಾಟಣೆ ಆಗಬೇಕು. ಸಚಿವರು ಈ ಸಂಬಂಧ ಮಾನ್ಯ ಮುಖ್ಯ ಮಂತ್ರಿಯವರೊಡನೆ ಮಾತಾಡಬೇಕು. ಸಾಂಸ್ಕೃತಿಕ ನಾಯಕ ‘ಬಸವಣ್ಣನವರ ಅಧ್ಯಯನ ಕೇಂದ್ರ’ಕೂಡಲಸಂಗಮದಲ್ಲಿ ಆರಂಭಿಸಬೇಕು. ಕನ್ನಡ ವಿಶ್ವವಿದ್ಯಾಲಯ-ಹಂಪಿ ಇದರ ಸಂಯೋಜನೆಯಲ್ಲಿ ಈ ಕಾರ್ಯ ಮಾಡಬಹುದು. ಅಭಿನಂದನೀಯ ಕಾರ್ಯ. ಶರಣಾರ್ಥಿಗಳು.
ಬಿ. ಡಿ. ಜತ್ತಿ, ಜೆ. ಹೆಚ್. ಪಟೇಲ್ ರವರ ನಂತರ ಬಸವಣ್ಣ ನವರ ಬಗ್ಗೆ ಆಸಕ್ತಿ ವಹಿಸುತ್ತಿರುವ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ನವರಿಗೆ ತುಂಬು ಹೃದಯದ ಧನ್ಯವಾದಗಳು. ಕೂಡಲಸಂಗಮ ದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಬಸವಾದಿ ಶರಣರ ವಚನಗಳ ಆಳವಾದ ಅಧ್ಯಯನಕ್ಕೆ ಭದ್ರ ಬುನಾದಿಯಾಗುತ್ತದೆ. ಶರಣಾರ್ಥಿಗಳು.
ಸೀತಿಲ ಅವಸ್ಥೆಯ ಇರುವ 770 ಬಸವ ಗಳಂಗಳ ಐಕೈ ಆದ ಸ್ಥಳಗಳನ್ನು ಸರ್ಕಾರ ವಶಪಡಿಸಿಕೊಂಡು ಮುಂದಿನ ಶರಣರಿಗೆ ಇತಿಹಾಸ ತಿಳಿಯುವ ಹಾಗೆ ಪವಿತ್ರ ಸ್ಮಾರಕಗಳು ನಿರ್ಮಿಸ ಬೇಕು.ಶ್ರೀ ಗುರು ಬಸವ ಇಷ್ಟ ಲಿಂಗಾಯತ ಧರ್ಮ.
Honble. Siddaramaiah avaru is real basavanna follower
We should (all lingayath) support CM