ಬೀದರ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಸವಣ್ಣನವರ ಮತ್ತು ಕುವೆಂಪು ಅವರ ಕಡೆಗಣನೆಯ ಬಗ್ಗೆ ಬೀದರಿನ ಬಸವ ಮಂಟಪದ ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ ಮಾತನಾಡಿದ್ದಾರೆ.
ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಭಾವಚಿತ್ರವಿದ್ದರೆ ಸಾಂಸ್ಕೃತಿಕ ನಾಯಕರಾಗಿ ಅವರಿಗೆ ಬೆಲೆ ಕೊಟ್ಟಂತೆ ಆಗುತ್ತದೆ. ಇಲ್ಲವೆಂದರೆ ನಾವು ಬಸವಣ್ಣನವರ ಹೆಸರಿನಲ್ಲಿ ಅವರ ಆಸ್ತಿ ತಿಂದ ಹಾಗೆ ಆಗುತ್ತದೆ, ಅವರನ್ನು ಈ ಜಗತ್ತಿಗೆ ಉಳಿಸಿದ ಹಾಗೆ ಆಗುವುದಿಲ್ಲ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಸವಣ್ಣನವರ ಮತ್ತು ಕುವೆಂಪು ಅವರ ಭಾವಚಿತ್ರ ಹಾಕಲೇಬೇಕು ಎಂದು ಆಗ್ರಹಿಸಿದ್ದಾರೆ.