ಬೆಳಗಾವಿ:
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಸಾಮೂಹಿಕ ಪ್ರಾಥ೯ನೆ, ವಚನ ವಿಶ್ಲೇಷಣೆ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ಶಿವನಗೌಡ ಪಾಟೀಲ ಮಾತನಾಡುತ್ತಾ, ನಾವು 1974ರಲ್ಲಿ ಬೆಳಗಾವಿಗೆ ಬಂದೆವು. ಆಗ ಇಲ್ಲಿ ಎಲ್ಲ ಮರಾಠಿಮಯ ವಾತಾವರಣವಿತ್ತು. ದಿವಂಗತರಾದ ಮಹಾದೇವ ಟೊಪ್ಪಣ್ಣವರ, ರಾಘವೇಂದ್ರ ಜೋಷಿ, ಸಿದ್ದನಗೌಡ ಪಾಟೀಲ, ನೇಕಾರ ಜನ ನಾವೆಲ್ಲ ಸೇರಿ ಹೋರಾಟ ಮಾಡಿದೆವು.
ಸತತ ಪ್ರಯತ್ನದಿಂದ ನಮ್ಮ ಕನ್ನಡ ಜನ ಬೆಂಬಲದಿಂದ ನಾವೆಲ್ಲ ಇಂದು ನವ್ಹೆಂಬರ ಒಂದರಂದು ಅತೀ ವಿಜ್ರಂಭಣೆಯಿಂದ ಕನಾ೯ಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ.
ರಾಜ್ಯದ ಜನ ನೋಡುವಂತೆ ಕನ್ನಡಮಯ ವಾತಾವರಣವಿದೆ. ಅಲ್ಲದೇ ಅನೇಕ ಕಡೆ ಜನಜಾಗೃತಿ ಕಾಯ೯ಕ್ರಮ ನಡೆದು ಎಲ್ಲ ಕನ್ನಡಮಯವಾಗಿದೆ ಎಂದು ಹೇಳಿದರು.

ಮೃತ್ಯುಂಜಯಸ್ವಾಮಿ ಹಿರೇಮಠ ಅವರು ಆಧ್ಯಾತ್ಮಿಕ ಪ್ರವಚನ ನೀಡುತ್ತ, ತತ್ವ ಆಧಾರಿತ ವಿಚಾರಗಳನ್ನು ಹೇಳುವವರು ಬಹಳ ಜನರಿದ್ದಾರೆ. ಆದರೆ ಆಚರಣೆ ಕಡಿಮೆ. ಬಸವಾದಿ ಪ್ರಮಥರು ಆಚಾರ ವಿಚಾರಗಳು ಒಂದೇ ಆಗಿರಬೇಕೆoದು ಬಯಸಿದ್ದರು. ಆಚಾರ ವಿಚಾರ ಒಂದಾಗಿ ನಡೆಯುವ ಅವಶ್ಯಕತೆ ಇದೆಯೆಂದರು.
ಆರಂಭದಲ್ಲಿ ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಇದೇ ಸoದಭ೯ದಲ್ಲಿ ಶಿವನಗೌಡ್ರ 60ನೇ ಹುಟ್ಟುಹಬ್ಬ, ಕರಡಿಮಠರ ಹುಟ್ಟುಹಬ್ಬ ಹಾಗೂ 2026ರ ಲಿoಗಾಯತ ದಿನದಶಿ೯ಕೆಯನ್ನು ಲೋಕಾಪ೯ಣೆಗೊಳಿಸಲಾಯಿತು.

ಆನಂದ ಕರಕಿ, ಬಸವರಾಜ ಬಿಜ್ಜರಗಿ, ವಿ.ಕೆ. ಪಾಟೀಲ, ಸುವಣಾ೯ ಗುಡಸ, ಜಯಶ್ರೀ ಚವಲಗಿ, ವಿದ್ಯಾ ಕರಕಿ, ಗುರಸಿದ್ದಪ್ಪ ರೇವಣ್ಣವರ ವಚನ ವಿಶ್ಲೇಷಣೆ ಮಾಡಿದರು.
ಬಸವರಾಜ ಕರಡಿಮಠ ಅವರು ದಾಸೋಹ ಸೇವೆಗೈದರು. ಸಂಗಮೇಶ ಅರಳಿ, ಸುರೇಶ ನರಗುಂದ, ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಶoಕರ ಗುಡಸ, ಮಹದೇವ ಕೆoಪಿಗೌಡ್ರ, ಲಕ್ಷ್ಮೀಕಾoತ ಗುರವ, ಅಕ್ಕಮಹಾದೇವಿ ತೆಗ್ಗಿ, ಶಿವಾನಂದ ನಾಯಕ, ಶರಣ ಶರಣೆಯರು ಉಪಸ್ಥಿತರಿದ್ದರು.
