ಸವದತ್ತಿ ತಾಲೂಕಿನ 15 ಗ್ರಾಮಗಳಲ್ಲಿ ವಚನದರ್ಶನ, ಶಿವಯೋಗ ಸಾಧನೆ ಕಾರ್ಯಕ್ರಮಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಸವದತ್ತಿ

17ನೇ ಶತಮಾನದ ಶರಣ, ವಚನಕಾರ ಜೇವರ್ಗಿಯ ಷಣ್ಮುಖ ಶಿವಯೋಗಿಗಳ ವಚನದರ್ಶನ ಹಾಗೂ ದಿನನಿತ್ಯ ಬೆಳಿಗ್ಗೆ ನಾಲ್ಕರಿಂದ ಐದು ಗಂಟೆಯವರೆಗೆ ಶಿವಯೋಗ ಸಾಧನೆ ಕಾರ್ಯಕ್ರಮ ತಾಲೂಕಿನ 15 ಗ್ರಾಮದಲ್ಲಿ ನಡೆದವು.

ಸವದತ್ತಿ ತಾಲೂಕಿನ, ಚಿಕ್ಕೊಪ್ಪ, ಹಿರೇಕೊಪ್ಪ, ಮರಕುಂಬಿ, ಕಾರಿಮನಿ, ದುಂಡನ್ನಕೊಪ್ಪ, ಮುರಗೋಡ, ಮಾಟೊಳ್ಳಿ ಮಲ್ಲೂರ ಹೊಸೂರ ಬೈಲಹೊಂಗಲ, ಅನಿಗೋಳ, ಪಟ್ಟಿಹಾಳ, ಕೊರವಿಕೊಪ್ಪ,
ಮುಂತಾದ ಗ್ರಾಮಗಳಲ್ಲಿ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಿದವು.

ಒಟ್ಟು 29 ಮಹಾಮನೆಗಳ ವತಿಯಿಂದ ವಚನದರ್ಶನ ನಡೆಯಿತು. 19 ದಿನಗಳು ಬೆಳಿಗ್ಗೆ ಶಿವಯೋಗ ಸಾಧನೆ ನಡೆಯಿತು.

ವಿಶ್ವಗುರು ಬಸವಾನುಭವ ಮಂಟಪ, ಚಿಕ್ಕೊಪ್ಪ ವತಿಯಿಂದ ನಡೆದ ಕಾರ್ಯಕ್ರಮಗಳು ಆಯ್.ಆರ್. ಮಠಪತಿ ಅಪ್ಪಗಳು, ಶರಣ ವಿಚಾರವಾಹಿನಿ ಹಾರೋಗೇರಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸಂಗೊಳ್ಳಿ ಗುರುಗಳ ಉಪಸ್ಥಿತಿಯಲ್ಲಿ ನಡೆದವು.

ಸೆಪ್ಟೆಂಬರ್ 3, 24 ರಂದು ನಡೆದ ವಚನ ಶ್ರಾವಣ ಮುಕ್ತಾಯ ಸಮಾರಂಭದಲ್ಲಿ ಡಾ. ರಾಮಣ್ಣವರ ಅವರು ಮಾನವನ ಶರೀರದಲ್ಲಿರುವ ಜೀವಂತ ಹಾರ್ಟ್, ಕಿಡ್ನಿ, ಪುಪ್ಪಸ, ಮೆದುಳು ಮುಂತಾದವುಗಳ ಬಗ್ಗೆ, ದೇಹದ ದಾಸೋಹದ ಬಗ್ಗೆ ಸವಿಸ್ತಾರವಾಗಿ ಅನುಭಾವ ಮಾಡಿದರು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಸುಮಾರು 15 ಗ್ರಾಮಗಳ ಶರಣ ಶರಣೆಯರು ಪಾಲ್ಗೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *