ಪ್ರಸಾದ ಹಾಳು ಮಾಡಬಾರದೆಂಬ ಸಂದೇಶ ನೀಡಿದ ಶರಣ ಬಿಬ್ಬಿ ಬಾಚಯ್ಯ

ಬೆಳಗಾವಿ

ಕಾಯಕ, ದಾಸೋಹದ ಮಹತ್ವವನ್ನು 12ನೇ ಶತಮಾನದ ಬಸವಾದಿ ಶರಣರು ಲೋಕಕ್ಕೆ ಸಾರಿದ್ದಾರೆ. ದೇವರು ಕೊಟ್ಟ ಕಾಯವನ್ನು ಸತ್ಕಾರ್ಯಗಳ ಮೂಲಕ ಸದ್ವಿನಿಯೋಗ ಮಾಡಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಾಹಿತಿ ಬಸವರಾಜ ಕುಪ್ಪಸಗೌಡ್ರ ಹೇಳಿದರು.

ಅವರು ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ಫ.ಗು. ಹಳಕಟ್ಟಿ ಭವನದಲ್ಲಿ ನಡೆದ, ವಾರದ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವಾದಿ ಶರಣ ಬಿಬ್ಬಿ ಬಾಚಯ್ಯನವರ ಕುರಿತು ಉಪನ್ಯಾಸ ನೀಡಿದರು.

ಶರಣರ ವಚನ ಸಾಹಿತ್ಯ ಸರ್ವಕಾಲಿಕ ಸತ್ಯ ಸಂದೇಶವಾಗಿದೆ. ಎಲ್ಲ ಶರಣರಲ್ಲಿ ಅಮೃತಮಯ ಮೌಲ್ಯಗಳಿದ್ದು, ಅವರು ದಿವ್ಯ ಶಕ್ತಿಯಾಗಿದ್ದರು. ಶರಣರ ಮಿಕ್ಕುಳಿದ ಪ್ರಸಾದ ಸಂಗ್ರಹದ ಕಾಯಕದಲ್ಲಿ ತೊಡಗಿದ್ದ ಶರಣ ಬಿಬ್ಬಿ ಬಾಚಯ್ಯ ದಾಸೋಹ ಅರ್ಪಣೆಯ ಜೊತೆಗೆ ಪ್ರಸಾದವನ್ನು ಹಾಳು ಮಾಡಬಾರದೆಂಬ ಮಹತ್ವದ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.

ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು. ಶರಣ ಎಂ. ವೈ. ಮೆಣಸಿನಕಾಯಿ ಪರಿಚಯಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ಪ್ರಾರ್ಥನೆ ಮಾಡಿದರು. ಓಂಕಾರ್ ಚವಲಗಿ ದಾಸೋಹ ಸೇವೆ ಮಾಡಿದರು.

ಬಿ.ಪಿ.‌ ಜೇವಣಿ, ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚವಲಗಿ, ಸುರೇಶ ನರಗುಂದ, ಸುವರ್ಣ ಗುಡಸ, ಶ್ರೀದೇವಿ ನರಗುಂದ, ಸುನೀಲ ಸಾಣಿಕೊಪ್ಪ, ಸಿದ್ದಪ್ಪ ಸಾರಾಪುರಿ, ಸೋಮಶೇಖರ ಕಟ್ಟಿ, ಬಸವರಾಜ ಬಿಜ್ಜರಗಿ, ಶೇಖರ ವಾಲಿಇಟಗಿ, ಮಂಗಳಾ ಕಾಗತಿಕರ, ದೀಪಾ ಪಾಟೀಲ, ಚಂಪಾವತಿ ತಂಗಡೆ, ನಂದಾ ಬಗಲಿ, ಬಾಬಣ್ಣ ತಿಗಡಿ, ಬಸವರಾಜ ಮತ್ತಿಕಟ್ಟಿ, ಲಲಿತಾ ವಾಲಿಇಟಗಿ, ಶಿವಾನಂದ ನಾಯಕ, ಜ್ಯೋತಿ ಬದಾಮಿ, ಸುಜಾತ ಮತ್ತಿಕಟ್ಟಿ, ಲಕ್ಷ್ಮಿಕಾಂತ ಗುರವ ಮತ್ತಿತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *