ಹುಲಸೂರ:
ತಾಲ್ಲೂಕಿನ ಗೋರ್ಟಾ ಬಿ. ಲಿಂಗಾಯತ ಮಹಾಮಠದ ವಾರ್ಷಿಕ ಕಾರ್ಯಕ್ರಮದಂಗವಾಗಿ, ಪ್ರತಿ ವರ್ಷದಂತೆ ಇದೇ ಎಪ್ರೀಲ್ 2 ಮತ್ತು 3, 2026 ಎರಡು ದಿನ ‘ಜಗನ್ಮಾತೆ ಅಕ್ಕಮಹಾದೇವಿ ಜಯಂತ್ಯುತ್ಸವ ಹಾಗೂ ವಚನ ವಿಜಯೋತ್ಸವವನ್ನು’ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.
12ನೇ ಶತಮಾನದ ಮಹಾದೇವಿಯಕ್ಕ ವಿಶ್ವದ ಮೊದಲ ಕವಿಯತ್ರಿ. ಅನುಭವ ಮಂಟಪದ ಮಾಣಿಕ್ಯ, ಸ್ತ್ರೀ ಕುಲದ ಅನರ್ಘ್ಯರತ್ನ. ಅಕ್ಕನ ಜೀವನ ಮತ್ತು ಸಂದೇಶಗಳು ಮಾನವ ಕುಲಕ್ಕೆ ಮಾರ್ಗದರ್ಶಿ. ಮಹಾದೇವಿ ಅಕ್ಕನ ವಚನಗಳು ಮತ್ತು ಯೋಗಾಂಗ ತ್ರಿವಿಧಿಗಳು ಅನುಭವದ ರಸಗಟ್ಟಿಯಾಗಿದ್ದು, ಅಧ್ಯಾತ್ಮ ಸಾಧನೆಗೆ ಪಥದರ್ಶಿಯಾಗಿವೆ. ಕಾರಣ ಅಕ್ಕನ ಜಯಂತ್ಯುತ್ಸವ ಮೂಲಕ ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ವಿವರ
ಕಾರ್ಯಕ್ರಮದ ನಿಮಿತ್ಯ ಈಗಾಗಲೇ ಮಾರ್ಚ್ 25ರಿಂದ ಎಪ್ರೀಲ್ 01ರವರೆಗೆ ಎಂಟು ದಿನ ಅಕ್ಕನ ದರ್ಶನ ಪ್ರವಚನ ಜರುಗುತ್ತಿದೆ. ಕಾರ್ಯಕ್ರಮಕ್ಕೆ ಬೇಕಾದ ಸಕಲ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಶ್ರೀಮಠದ ಸದ್ಭಕ್ತ ಮಂಡಳಿಯವರು, ಲಿಂಗಾಯತ ಸೇವಾದಳ ಮತ್ತು ನೀಲಮ್ಮನ ಬಳಗದವರು ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಎಂಬುದಾಗಿ ಹರುಷಪಟ್ಟು ವಿವರಿಸಿದರು.
ಮೊದಲ ದಿನ 02 ರಂದು ಸಂಜೆ 6 ಗಂಟೆಗೆ ನೀಲಮ್ಮನ ಬಳಗದವರು ಅಕ್ಕನ ತೊಟ್ಟಿಲು ವಿಶೇಷವಾಗಿ ನೆರವೇರಿಸುವರು. ನಂತರ ವಿಶೇಷ ಉಪನ್ಯಾಸ ಕಾರ್ಯಕ್ರಮ, ಸಾನಿಧ್ಯ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಲಿಂಗಾಯತ ಮಹಾಮಠ ಗೋರ್ಟಾ(ಬಿ) ಮತ್ತು ಬಸವಗಿರಿ ಬೀದರ, ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಸಂಚಾಲಕರು ಅನುಭವ ಮಂಟಪ ಬಸವಕಲ್ಯಾಣ,ಪೂಜ್ಯ ಅನೀಲ ಮಹಾರಾಜರು ಕಲಖೋರಾ, ಪೂಜ್ಯ ಲಾವಣ್ಯದೇವಿ ಮಾತಾಜಿ ಬಸವ ಮಹಾಮನೆ ಬಸವಕಲ್ಯಾಣ, ಪೂಜ್ಯ ಬಸವ ದೇವರು ಬಸವತತ್ವ ಪ್ರಸಾರಕರು, ಬಸವಕಲ್ಯಾಣ ಪೂಜ್ಯ ಪರುಷಕಟ್ಟೆ ಚನ್ನಬಸವಣ್ಣ ಲಿಂಗಾಯತ ಮಹಾಮಠ, ಬೀದರ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ವಿಶೇಷ ಅನುಭಾವ ನೀಡಲು ಡಾ. ವಚನಶೃತಿ ಪುರಾಣಿಕಮಠ ತಜ್ಞವೈದ್ಯರು, ಸರಕಾರಿ ಆಯುರ್ವೇದ ಆಸ್ಪತ್ರೆ, ಬೀದರ, ಮುಖ್ಯ ಅತಿಥಿಗಳಾಗಿ ಪ್ರಿಯಾಂಕ ಸಂಜುಕುಮಾರ ಬಿರಾದಾರ ಯೋಗ ಶಿಕ್ಷಕರು, ಪುಣೆ, ಉದ್ಘಾಟನೆ ಆಕಾಶ ಖಂಡಾಳೆ ಅಧ್ಯಕ್ಷರು ತಾಲೂಕು ಬಸವ ಕೇಂದ್ರ, ಹುಲಸೂರ, ಷಟಸ್ಥಲ ಧ್ವಜಾರೋಹಣ ಲಾವಣ್ಯ ಹಂಗರಗಿ ನೀಲಮ್ಮನ ಬಳಗ, ಬೀದರ ನೆರವೇರಿಸುವರು.
ಗೌರವ ಉಪಸ್ಥಿತಿ ರೂಪಾ ಎಸ್. ಬಿರಾದಾರ, ಮೀನಾಕ್ಷಿ ಧರ್ಮಣ್ಣನವರ, ಅಭಿಷೇಕ ಮಠಪತಿ, ಪ್ರೇಮ ರಾಜಭವನ, ಸುಪ್ರೀತ ಪತಂಗೆ, ಸದಾನಂದ ಬಿರಾದಾರ, ಅಧ್ಯಕ್ಷತೆ ಸುಮಿತ್ರಾ ದುಬಲಗುಂಡೆ ಎಲ್ಲರ ಸಮ್ಮುಖದಲ್ಲಿ ಕಾರ್ಯಕ್ರಮ ಮೊದಲ ದಿನ ಅದ್ದೂರಿಯಾಗಿ ನಡೆಯುತ್ತದೆ ಎಂದು ತಿಳಿಸಿದರು.
ಎರಡನೇ ದಿನ 03 ರಂದು ಸಾಯಂಕಾಲ 4 ಗಂಟೆಗೆ ವಚನ ವಿಜಯೋತ್ಸವದ ಭವ್ಯ ಮೆರವಣಿಗೆ ಜರುಗಲಿದೆ.
ಅಲಂಕೃತ ವಾಹನದಲ್ಲಿ ವಿಶ್ವಗುರು ಬಸವಣ್ಣನವರು, ಮಹಾದೇವಿ ಅಕ್ಕರ ಭಾವಚಿತ್ರ ಮತ್ತು ವಚನ ಸಾಹಿತ್ಯದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳ ಮೂಲಕ ನಡೆಯಲಿದೆ.
ಸಹಸ್ರಾರು ಶರಣ/ಶರಣೆಯರು ವಚನ ಗ್ರಂಥಗಳನ್ನು ತಲೆಮೇಲೆ ಹೊತ್ತು ಹೆಜ್ಜೆ ಹಾಕಲಿದ್ದು, ಛತ್ರಿ ಚಾಮರಗಳ ಷಟಸ್ಥಲ ಧ್ವಜಗಳ ಮೆರೆವಣಿಯು ಮೆರಗು ಹೆಚ್ಚಿಸಲಿವೆ. ದಾರಿಯುದ್ದಕ್ಕೂ ಛಳಿ ಹೊಡೆದು, ರಂಗೋಲಿಯಿಕ್ಕಿ, ಹೂವಾಲೆಗರೆದು ಪ್ರತಿ ಮನೆಯವರು ಸ್ವಾಗತಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಸಂಜೆ ಆರು ಗಂಟೆಗೆ 770 ಸಮವಸ್ತ್ರಧಾರಿ ಶರಣ/ ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಸಾಮೂಹಿಕ ಪಾರಾಯಣ ನಡೆಯಲಿದ್ದು, ಕಣ್ಣು ಕಿವಿಗಳಿಗೆ ಭಕ್ತಿ ಪುರಸ್ಪರವಾದ ಹಬ್ಬವನ್ನುಂಟು ಮಾಡಲಿದೆ.
ವಚನ ನೃತ್ಯರೂಪಕವನ್ನು ಪೂರ್ಣಚಂದ್ರ ಮೈನಾಳೆ ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರ, ಬೀದರ ಸೊಗಸಾದ ವಚನ ನೃತ್ಯ ಮಾಡಲಿದ್ದಾರೆ ಎಂದು ತಿಳಿಸಿದರು.
ಅನುಭಾವ ಗೋಷ್ಠಿಯ ಸಾನಿಧ್ಯವನ್ನು ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಅನುಭವ ಮಂಟಪ, ಬಸವಕಲ್ಯಾಣ, ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಶ್ರೀಗುರು ಬಸವೇಶ್ವರ ಸಂಸ್ಥಾನ ಮಠ, ಹುಲಸೂರ-ಹುಲಕುಂಟಿ,
ಪೂಜ್ಯ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನ, ಭಾಲ್ಕಿ, ನೇತೃತ್ವ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಲಿಂಗಾಯತ ಮಹಾಮಠ, ಗೋರ್ಟಾ & ಬಸವಗಿರಿ, ಬೀದರ ವಹಿಸುವರು.
ಸಮ್ಮುಖ ಪೂಜ್ಯ ಬಸವಪ್ರಭು ಮಹಾಸ್ವಾಮಿಗಳು ಕಲ್ಯಾಣ ಮಹಾಮನೆ ಗುಣತೀರ್ಥ, ಬಸವಕಲ್ಯಾಣ, ಉದ್ಘಾಟನೆಯನ್ನು ಈಶ್ವರ ಬಿ. ಖಂಡ್ರೆ ಮಾನ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಮಾಡುವರು. ಅಧ್ಯಕ್ಷತೆ ಶರಣು ಸಲಗರ ಮಾನ್ಯ ಶಾಸಕರು, ಬಸವಕಲ್ಯಾಣ ವಹಿಸುವರು. ಮುಖ್ಯ ಅತಿಥಿಗಳು ವಿಜಯ ಸಿಂಗ್ ಮಾಜಿ ವಿಧಾನ ಪರಿಷತ್ ಸದಸ್ಯರು, ಬೀದರ. ಅನುಭಾವ ವಿಶ್ವರಾಧ್ಯ ಸತ್ಯಂಪೇಟೆ ಅಧ್ಯಕ್ಷರು, ಬಸವ ಮಾರ್ಗ ಪ್ರತಿಷ್ಠಾನ, ಸತ್ಯಂಪೇಟೆ. ಅತಿಥಿಗಳು ಲತಾ ಎಸ್. ಹಾರಕುಡೆ, ಸುನೀತಾ ಮಮ್ಮಾ, ನೀಲಮ್ಮ ರೂಗನ, ಶಾಮಾ ಅನೀಲಕುಮಾರ ರಗಟೆ, ಛಾಯಾ ವಿಜಯಕುಮಾರ ರಾಜಭವನ, ಜಯಶ್ರೀ ಮಾಶೆಟ್ಟೆ ಮಹಿಳಾ ಅಧ್ಯಕ್ಷರು, ಬಸವ ಅನುಭವ ಮಂಟಪ, ಹೈದ್ರಾಬಾದ, ಗೋದಾವರಿ ತಾಯಿ ಲಿಂಗಾಯತ ಮಹಾಮಠ, ಗೋರ್ಟಾ(ಬಿ) ಎಲ್ಲ ಪೂಜ್ಯರ ಹಾಗೂ ಅತಿಥಿ ಗಣ್ಯರು
ಗ್ರಾಮದಲ್ಲಿ ಸಡಗರ ಸಂಭ್ರಮದೊಂದಿಗೆ ಶರಣರ ಬರುವಿಕೆಗಾಗಿ ಮಕ್ಕಳು ಹಿರಿಯರು ಕಾತರದಿಂದ ಕಾಯುತ್ತಿದ್ದಾರೆ. ಶರಣರಿಗಾಗಿ ವಿಶೇಷ ಪ್ರಸಾದ ಶೇಂಗಾ ಹೋಳಿಗೆ, ಜೋಳದ ರೊಟ್ಟಿ ಶರಣೆಯರು ತಯಾರಿಸುತ್ತಿದ್ದಾರೆ. ನಾಡಿನ ಮೂಲೆ ಮೂಲೆಯಿಂದ ಶರಣ ಬಳಗ ಗೋರ್ಟಾ ಗ್ರಾಮದತ್ತ ಧಾವಿಸಿ ಬರಲಿದ್ದಾರೆ ಎಂದು ತಿಳಿಸಿದರು.
ಬಾಬುರಾವ ರಾಜೋಳೆ, ಚಂದ್ರಕಾಂತ ಕಣಜೆ, ಸುಭಾಷ ಪತಂಗೆ, ಭರತರಾಜ್ ಪತಂಗೆ, ಬಸವರಾಜ ಮಾಶೆಟ್ಟೆ, ಮಹೇಶ ಪಟ್ನೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ನೀಲಮ್ಮನ ಬಳಗದ ಅಧ್ಯಕ್ಷರಾದ ವಿಜಯಲಕ್ಷ್ಮಿ ರಾಜೋಳೆ ಸ್ವಾಗತ ಕೋರಿದರು. ಲಿಂಗಾಯತ ಸೇವಾದಳದ ಅಧ್ಯಕ್ಷರಾದ ಸುಪ್ರೀತ ಪತಂಗೆ ನಿರೂಪಿಸಿದರು.
