ಶರಣಗ್ರಾಮ ಗುಳೆಯಲ್ಲಿ 101ನೇ ಮಾಸಿಕ ಹುಣ್ಣಿಮೆ ಬಸವಾನುಭವ ಕಾರ್ಯಕ್ರಮ

ಯಲಬುರ್ಗಾ

ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗು ಯುವ ಘಟಕದ ವತಿಯಿಂದ, ವಿಶ್ವ ಗುರು ಬಸವ ಮಂಟಪದಲ್ಲಿ 101ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಶರಣಪ್ಪ ಹೊಸಳ್ಳಿ ಇವರು, ಈ ನಾಡಿನಲ್ಲಿ ಗುರು ಬಸವಣ್ಣನವರು ಹುಟ್ಟಿಕೊಂಡದ್ದು ಮನುಷ್ಯನ ಅಂಧಕಾರತ್ವ ಹೋಗಲು ಮೂಲ ಕಾರಣವಾಗಿದೆ. ನಮ್ಮಲ್ಲಿ ಇರುವಂತಹ ಮೌಢ್ಯಾಚರಣೆ, ಅಂಧಕಾರತ್ವ ತೊಲಗಬೇಕಾದರೆ ತಿಂಗಳಿಗೊಮ್ಮೆಯಾದರು, ಬಸವಾದಿ ಶಿವಶರಣರ ಚಿಂತನೆ ನಡೆಯಬೇಕು. ಅಂದಾಗ ಮಾತ್ರ ನಮ್ಮ ಜೀವನ ಸುರಕ್ಷಿತವಾಗಿ ಸಾಗಲು ಸಾದ್ಯವಿದೆ. ಅದಕ್ಕಾಗಿ ನಾವು ಪ್ರತಿ ಮಾಸಕ್ಕೊಮ್ಮೆ ಸುತ್ತಮುತ್ತಲಿನ ಶರಣ ಸದ್ಭಕ್ತರನ್ನ ಸಂಗಮಗೊಳಿಸಿ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಬಸವಾದಿ ಶಿವಶರಣರ ವಿಚಾರಗಳನ್ನು ಬಿತ್ತರಿಸುವ ಕಾರ್ಯ ಶಿವಾನುಭವದ ಕಾರ್ಯಕ್ರಮದ ಉದ್ದೇಶ ಆಗಿದೆ ಎಂದರು.

ಗೌರವಾನ್ವಿತರಾಗಿ ಆಗಮಿಸಿ ಕಾರ್ಯಕ್ರಮದ ಕುರಿತು ಶರಣ ಅಮರೇಶಪ್ಪ ಗಡಿಹಳ್ಳಿ ಸಾ. ಸೋಮಸಾಗರ ಇವರು ಮಾತನಾಡಿ, ಗುರು ಬಸವಣ್ಣನವರು ನೀಡಿದ ಈ ಸಮಾನತೆಯ ತತ್ವ ವಿಶೇಷವಾಗಿ ಪರಿಣಮಿಸಿದೆ.

ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿದರು.

ಕಾರ್ಯಕ್ರಮ ಕುರಿತು ಅನುಭಾವ ನೀಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ, ಗುರು ಬಸವಣ್ಣನವರು ಜಾತಿ, ಮತ, ಪಂಥ, ಲಿಂಗಭೇದವನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾವಾದಿ ಎಂದೂ ಕರೆಯಲಾಗುತ್ತದೆ. “ಮಾನವೀಯತೆ ಹಾಗೂ ಕಾಯಕ ನಿಷ್ಠೆ ಇವು ಧರ್ಮದ ಬುನಾದಿಯಾಗಬೇಕು” ಎಂದು ಬಲವಾಗಿ ನಂಬಿದ್ದರು.

ಗುರು ಬಸವಣ್ಣನವರ ಪ್ರೇರಣೆಯಿಂದ ಹಲವಾರು ಶರಣರು ಷಟ್‌ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ.ಒಟ್ಟಾರೆ ಬಸವಣ್ಣನವರ ತತ್ವ ಮೇರು ಪರ್ವತ ಇದ್ದಹಾಗೆ. ಈ ಮೇರು ಪರ್ವತದಂತೆ ಇರುವ ಸಾಹಿತ್ಯ ವನ್ನ ಮೈಗೂಡಿಸಿಕೊಂಡು ಮೆಟ್ಟಿಲಿಂದ ಮೆಟ್ಟಿಲುಗಳನ್ನ ಏರುತ್ತಾ ಅಧ್ಯಯನ ಮಾಡುತ್ತ ಸಾಗಿದರೆ ನಮ್ಮ ಜೀವನ ಶಿವ ಸ್ವರೂಪಿ ಆಗಲು ಸಾದ್ಯವಿದೆ ಎಂದು ನುಡಿದರು.

ಶರಣ ಯಮನೂರಪ್ಪ ಬೇವೂರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಧ್ಯಕ್ಷತೆ ವಹಿಸಿದ್ದರು. ಉಪಸ್ಥಿತರಾಗಿ ಶರಣ ನಾಗನಗೌಡ ಜಾಲಿಹಾಳ, ವಿರುಪಾಕ್ಷಪ್ಪ ಸೋಮಸಾಗರ, ಗಿರಿಮಲ್ಲಪ್ಪ ಪರಂಗಿ, ವಿರುಪಾಕ್ಷಪ್ಪ ಮೇಟಿ ವನಜಭಾವಿ, ಶೇಖರಗೌಡ ಕನಸಾವಿ ಉಪಸ್ಥಿತರಿದ್ದರು.

ಶರಣ ಬಸವರಾಜ ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳಾದ ಶರಣ ರೇಣುಕಪ್ಪ ಮಂತ್ರಿ, ಲಿಂಗನಗೌಡ ದಳಪತಿ, ಯಮನೂರಪ್ಪ ಕೋಳೂರು, ಬಸಣ್ಣ ಹೊಸಳ್ಳಿ, ಶಿವಪುತ್ರಪ್ಪ ಉಚ್ಚಲಕುಂಟಿ, ಪಕೀರಪ್ಪ ಮಂತ್ರಿ, ಹನಮೇಶ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ರಾಷ್ಟ್ರಪತಿ ಹೊಸಳ್ಳಿ, ಮಲ್ಲಿಕಾರ್ಜುನ ಮಂತ್ರಿ, ಚನ್ನಬಸವ, ಶಾಂತಪ್ಪ ಸೋಮಣ್ಣ ನಿಂಗಪ್ಪ, ದೇವೇಂದ್ರ ಬಸವರಾಜ, ಶಿವುಕುಮಾರ ಹೊಸಳ್ಳಿ, ಮಹಾಂತೇಶ, ಶರಣಪ್ಪ ಹಾಗು ಅಕ್ಕನಾಗಲಾಂಬಿಕ ಮಹಿಳಾ ಗಣದ ಶರಣೆ ಶರಣಮ್ಮ ಪೋಲಿಸಪಾಟೀಲ, ಸಾವಿತ್ರಮ್ಮ ಆವಾರಿ, ನಾಗಮ್ಮ ಜಾಲಿಹಾಳ, ಶಂಕ್ರಮ್ಮ ಹೊಸಳ್ಳಿ, ದ್ರಾಕ್ಷಾಯಣಮ್ಮ, ವಿಶಾಲಾಕ್ಷಮ್ಮ, ಅಕ್ಕಮಹಾದೇವಿ ಮೇಟಿ, ರೇಣುಕಮ್ಮ ಮಂತ್ರಿ, ಗುರುಲಿಂಗಮ್ಮ ಮಂತ್ರಿ ಹನಮಮ್ಮ ಉಚ್ಚಲಕುಂಟಿ, ಬಸಮ್ಮ ಯಮನಮ್ಮ ಗೌಡ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *