ಬಸವಕಲ್ಯಾಣದಲ್ಲಿ ಶರಣರ ಜೀವನ ಕಥಾಲೇಖನ ಬಗ್ಗೆ ಕಾರ್ಯಾಗಾರ

ಸುಧಾ ಪಾಟೀಲ್
ಸುಧಾ ಪಾಟೀಲ್

ಬಸವಕಲ್ಯಾಣ

ನವೆಂಬರ್ 9 ಮತ್ತು 10 ರಂದು ಬಸವಕಲ್ಯಾಣದಲ್ಲಿ ನಡೆದ ಎರಡು ದಿನದ ಕಾರ್ಯಾಗಾರದಲ್ಲಿ 12ನೆಯ ಶತಮಾನದ ಶರಣರ ಜೀವನ ಪರಿಚಯ ಕುರಿತು ಕಥಾಲೇಖನ ಹಾಗೂ ಶರಣರ ವಚನಗಳ ಪರಿಷ್ಕೃತ ಆವೃತ್ತಿಗಳನ್ನು ಸಿದ್ಧಪಡಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ ಆ ಮೂಲಕ ಕಾರ್ಯನಿರ್ವಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಅವರ ವತಿಯಿಂದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. 9 ನೆಯ ತಾರೀಕು ಶನಿವಾರ ಬೆಳಿಗ್ಗೆ ಡಾ. ಬಾಬಾಸಾಹೇಬ ಗಡ್ಡೆ ಅವರು ಹೊಸ ಅನುಭವ ಮಂಟಪ ಶರಣರ ತತ್ವಸಿದ್ಧಾಂತದೊಂದಿಗೆ ಮತ್ತು ಹೊಸ ತಂತ್ರಜ್ಞತೆಯೊಂದಿಗೆ ಹೇಗೆ ರೂಪುಗೊಳ್ಳುತ್ತಿದೆ ಎನ್ನುವುದನ್ನು ಅತ್ಯಂತ ಸಮರ್ಪಕವಾಗಿ, ಕೂಲಂಕುಷವಾಗಿ, ಆಸ್ಥೆಯಿಂದ ಹಂಚಿಕೊಂಡರು.

ಡಾ. ಶಶಿಕಾಂತ ಪಟ್ಟಣ ಅವರು ಶರಣರ ಚರಿತ್ರೆ ರಚನೆ ಕುರಿತು ಮಾತನಾಡಿದರು. ಕಾರ್ಯಾಗಾರದಲ್ಲಿದ್ದ ಐವತ್ತು ಜನರ ತಂಡ ಶರಣರ ಬಗ್ಗೆ ಯಾವುದೇ ಪವಾಡಗಳನ್ನು ಸೇರಿಸದೆ, ಕಾಲ್ಪನಿಕ ಸನ್ನಿವೇಶಗಳನ್ನು ಬರೆಯದೆ ವಚನಗಳ ಆಧಾರದ ಮೇಲೆ ಲೇಖನಗಳನ್ನು ಬರೆಯಲು ತರಬೇತ್ ನೀಡಲಾಯಿತು.

ಎರಡನೆಯ ದಿನ ಬೆಳಿಗ್ಗೆ ಶರಣರ ಸ್ಮಾರಕಗಳನ್ನು ವೀಕ್ಷಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಡಾ. ಶಶಿಕಾಂತ ಪಟ್ಟಣ ಅವರು ವಚನಗಳ ಶುದ್ದೀಕರಣ ಮತ್ತು ಪ್ರಕ್ಷಿಪ್ತ ನಿವಾರಣೆಯ ಅಗತ್ಯತೆ ಬಗ್ಗೆ ವಿವರಿಸಿದರು. ನಂತರ ಶರಣರ ಸಂವಾದ ಮತ್ತು ಸಂಭಾಷಣೆ ಮತ್ತು ವಚನಕಾರರ ಚರಿತ್ರೆ ಪ್ರಾತ್ಯಕ್ಷಿಕೆಯ ಕುರಿತು ಡಾ. ಬಾಬಾಸಾಹೇಬ ಗಡ್ಡೆ ಅವರು ನಮ್ಮ ಜೊತೆಗೆ ಹಂಚಿಕೊಂಡರು. ಕೊನೆಯಲ್ಲಿ ಶಿಭಿರಾರ್ಥಿಗಳು ತಮ್ಮ ತಮ್ಮ ಅಭಿಮತ, ಅಭಿಪ್ರಾಯಗಳನ್ನು
ಹಂಚಿಕೊಂಡರು.

ಶರಣೆ ಗೌರಮ್ಮ ನಾಶಿ, ಪ್ರೊ. ಶಾರದಮ್ಮ ಪಾಟೀಲ್, ಡಾ. ದಾನಮ್ಮ ಝಳಕಿ, ಡಾ. ವೀಣಾ ಎಲಿಗಾರ, ಡಾ. ಶರಣಮ್ಮ ಗೊರೆಬಾಳ, ಡಾ. ಸುಧಾ ಕೌಜಗೇರಿ, ಡಾ. ಕಸ್ತೂರಿ ದಳವಾಯಿ, ಡಾ. ಜಯಶ್ರೀ ಹಸಬಿ, ಡಾ. ಗೀತಾ ಡಿಗ್ಗೆ, ಡಾ. ಸಂಗಮೇಶ ಕಲಹಾಳ ಹೀಗೆ ಪ್ರತಿಯೊಬ್ಬರೂ ತಮ್ಮ ಎರಡು ದಿನಗಳ ಕಾರ್ಯಾಗಾರದ ಬಗೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಯೋಜನೆಗಳ ಕಾರ್ಯಸೂಚಿ ಬಗೆಗೆ ಡಾ. ಬಾಬಾಸಾಹೇಬ ಗಡ್ಡೆ ಅವರು ಸಮಾರೋಪದ ನುಡಿಗಳನ್ನಾಡಿದರು. ಡಾ. ಜಯಶ್ರೀ ಪಟ್ಟಣ ಅವರು ಶರಣು ಸಮರ್ಪಣೆ ಮಾಡಿದರು.

Share This Article
Leave a comment

Leave a Reply

Your email address will not be published. Required fields are marked *