ಬಾಗಲಕೋಟೆ
38ನೇ ಶರಣ ಮೇಳವು 2025ರ ಜನವರಿ 12, 13 ಮತ್ತು 14 ರಂದು ಪರಮಪೂಜ್ಯ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿಯವರ ಸಾನಿಧ್ಯದಲ್ಲಿ ನಡೆಯಲು ಸಿದ್ಧವಾಗಿದೆ.
ಶರಣ ಮೇಳವು ಪ್ರತಿ ವರ್ಷವೂ ಬಸವ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ನಡೆಯುತ್ತಲಿದೆ. ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಲಿಂಗಪೂಜೆ, ಸಾಮೂಹಿಕ ವಚನ ಪಠಣ, ಗಣಲಿಂಗ ದರ್ಶನ, ಐಕ್ಯಮಂಟಪ ದರ್ಶನ ಹಾಗೂ ವಚನ ಸಾಹಿತ್ಯ, ಬಸವಾದಿ ಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ಶರಣ ಮೇಳದ ಪ್ರಮುಖ ಧಾರ್ಮಿಕ ವಿಧಿಗಳು.
ಜನವರಿ 12
12 ರಂದು ಬೆಳಿಗ್ಗೆ 10:30ಕ್ಕೆ ರಾಷ್ಟ್ರೀಯ ಬಸವ ದಳದ 34ನೇ ಅಧಿವೇಶನದ ಸಮ್ಮುಖವನ್ನು ಇಳಕಲ್‌ನ ಪೂಜ್ಯ ಶ್ರೀ ಗುರುಮಹಾಂತ ಸ್ವಾಮೀಜಿ, ಬ್ರಹ್ಮಾನಂದ ಆಶ್ರಮ ರಬಕವಿ ಸಂತಿಯ ಪೂಜ್ಯ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ವಹಿಸುವರು. ಧ್ವಜಾರೋಹಣವನ್ನು ತಂಗಡಗಿಯ ಪೂಜ್ಯ ಶ್ರೀ ಅನ್ನದಾನ ಭಾರತಿ ಅಣ್ಣಪ್ಪ ಸ್ವಾಮೀಜಿ, ಉದ್ಘಾಟನೆಯನ್ನು ಶರಣ. ಶ್ರೀ ಕೆ.ಎಸ್. ಈಶ್ವರಪ್ಪ ಮಾಡುವರು.
ಸಂಜೆ 6ಕ್ಕೆ ಮಹಿಳಾ ಗೋಷ್ಠಿಯ ಸಮ್ಮುಖವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಬ್ಬಳ್ಳಿ ಬೃಹನ್ಮಠದ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಧಾರವಾಡ ಅಕ್ಕಮಹಾದೇವಿ ಪೀಠದ ಪೂಜ್ಯ ಶ್ರೀ ಮಾತೆ ಜ್ಞಾನೇಶ್ವರಿ, ಬಸವಕಲ್ಯಾಣದ ಹರಳಯ್ಯ ಪೀಠದ ಪೂಜ್ಯ ಅಕ್ಕ ಗಂಗಾಂಬಿಕೆ ವಹಿಸುವರು. ಬಾಗಲಕೋಟೆ ಜಿಲ್ಲಾಧಿಕಾರಿ ಶರಣೆ. ಕೆ.ಎಂ. ಜಾನಕಿ ಉದ್ಘಾಟಿಸುವರು, ಬೆಂಗಳೂರಿನ ಕೆ.ಎ.ಎಸ್. ಅಧಿಕಾರಿ ಅನುಪಮ ವಿವೇಕ ಧ್ವಜಾರೋಹಣ ಮಾಡುವರು.
ಜನವರಿ 13
13 ರಂದು ಬೆಳಿಗ್ಗೆ 10:30ಕ್ಕೆ 38ನೇ ಶರಣ ಮೇಳ ಉದ್ಘಾಟನೆಯ ಪ್ರಾಸ್ತಾವಿಕ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ, ಸಾನಿಧ್ಯವನ್ನು ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹುಲಸೂರಿನ ಪೂಜ್ಯ ಶಿವಾನಂದ ಸ್ವಾಮೀಜಿ, ಮಹಾರಾಷ್ಟ್ರದ ಅಲ್ಲಮಪ್ರಭು ಪೀಠದ ಬಸವಕುಮಾರ ಸ್ವಾಮೀಜಿ ವಹಿಸುವರು. ವಿಧಾನ ಪರಿಷತ್ ಸಭಾಪತಿಗಳಾದ ಶರಣ, ಶ್ರೀ ಬಸವರಾಜ ಹೊರಟ್ಟಿ ಉದ್ಘಾಟಿಸುವರು.
ಲೋಕೋಪಯೋಗಿ ಸಚಿವರಾದ ಶರಣ. ಶ್ರೀ ಸತೀಶ ಜಾರಕಿಹೊಳಿ ಧ್ವಜಾರೋಹಣ ಮಾಡುವರು. ಬಾಗಲಕೋಟೆ ಜಿಲ್ಲಾ ಉಸ್ತುವಾರಿ, ಅಬಕಾರಿ ಸಚಿವರಾದ ಶರಣ. ಶ್ರೀ ಆರ್.ಬಿ. ತಿಮ್ಮಾಪುರ, ಕಾರ್ಮಿಕ ಸಚಿವರಾದ ಶರಣ. ಶ್ರೀ ಸಂತೋಷ ಲಾಡ್ ಘನ ಉಪಸ್ಥಿತಿ ವಹಿಸುವರು. ಅಧ್ಯಕ್ಷತೆಯನ್ನು ಶರಣ. ಶ್ರೀ ವಿಜಯಾನಂದ ಕಾಶಪ್ಪನವರ, ಬೀದರ್ ಲೋಕಸಭಾ ಸದಸ್ಯ ಶರಣ. ಶ್ರೀ ಸಾಗರ ಖಂಡ್ರೆ, ಹರಿಹರ ಶಾಸಕರಾದ ಶರಣ. ಶ್ರೀ ಬಿ.ಪಿ. ಹರೀಶ್, ವಿಧಾನ ಪರಿಷತ್ ಸದಸ್ಯರಾದ ಶರಣ. ಶ್ರೀ ಎನ್. ರವಿಕುಮಾರ್ ಮತ್ತು ಶರಣ. ಶ್ರೀ ಮಧು ಜಿ. ಮಾದೇಗೌಡ ಕಲ್ಯಾಣ ರತ್ನಗಳು ಕೃತಿ ಬಿಡುಗಡೆ ಮಾಡುವರು.

ಸಂಜೆ 6ಕ್ಕೆ ಬಸವಾದಿ ಶರಣರ ಸ್ವಾಭಿಮಾನದ ಬದುಕು ಗೋಷ್ಠಿಯ ಸಾನಿಧ್ಯವನ್ನು ಮಹಾಜಗದ್ಗುರು ಮಾತೆ ಗಂಗಾದೇವಿ, ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿಯ ಉಪಾಧ್ಯಕ್ಷ ಸದ್ಗುರು ಬಸವಯೋಗಿ ಸ್ವಾಮೀಜಿ, ಸದ್ಗುರು ಮಾತೆ ಬಸವರತ್ನಾದೇವಿ ವಹಿಸುವರು. ಕರ್ನಾಟಕ ರಾಜ್ಯ ಲೋಕಾಯುಕ್ತರಾದ ಶರಣ. ಶ್ರೀ ಬಿ.ಎಸ್.ಪಾಟೀಲ ಉದ್ಘಾಟಿಸುವರು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶರಣೆ. ಶ್ರೀ ಶಾಲಿನಿ ರಜನೀಶ್ ಧ್ವಜಾರೋಹಣ ಮಾಡುವರು.
ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಶರಣೆ. ಶ್ರೀ ಸುಮನ ಡಿ. ಪೆನ್ನೇಕರ ಐ.ಪಿ.ಎಸ್. ಮತ್ತು ಹಿರಿಯ ಪತ್ರಕರ್ತ, ಮಾಧ್ಯಮ ಮುಖ್ಯಸ್ಥ ಶರಣ. ಶ್ರೀ ರಹಮತ್ ಕಂಚಗಾರ್ ವಿಶೇಷ ಸತ್ಕಾರ ಸ್ವೀಕರಿಸುವರು. ಹಿರಿಯ ಪತ್ರಕರ್ತ ಬೀದರ್‌ನ ಶರಣ ಶ್ರೀ ಶಿವಶರಣಪ್ಪ ವಾಲಿ, ಬೆಂಗಳೂರಿನ ಬಸವ ಟಿ.ವಿ.ಯ ಶರಣ ಶ್ರೀ ಈ. ಕೃಷ್ಣಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅಧ್ಯಕ್ಷತೆಯನ್ನು ಬೆಂಗಳೂರಿನ ಹಿರಿಯ ನ್ಯಾಯವಾದಿ ಶರಣ. ಶ್ರೀ ಜೆ.ಜೈರಾಜ ವಹಿಸುವರು.
ಸಂಜೆ 8ಕ್ಕೆ ಬಸವ ಧರ್ಮ ಪೀಠದ 33ನೇ ಪೀಠಾರೋಹಣವನ್ನು ಮಹಾಜಗದ್ಗುರು ಮಾತೆ ಗಂಗಾದೇವಿ ಮಾಡುವರು. ಸಾನಿಧ್ಯವನ್ನು ಗುಳೇದಗುಡ್ಡದ 1008 ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಸ್ವಾಮೀಜಿ ವಹಿಸುವರು. ಅನುಭಾವವನ್ನು ಶರಣ. ಶ್ರೀ ಸಿದ್ದಣ್ಣ ಲಂಗೋಟಿ ನೀಡುವರು. ಬಸವ ಧರ್ಮ ಪೀಠದ ಜಂಗಮ ಮೂರ್ತಿಗಳಿಂದ ಗುರುವಂದನೆ, ಬಸವ ಧರ್ಮ ಪೀಠದ ಗಣನಾಯಕರಿಂದ ಭಕ್ತಿ ಸಮರ್ಪಣೆ ಜರುಗುವುದು.
ಜನವರಿ 14
14 ರಂದು ಬೆಳಿಗ್ಗೆ 10ಕ್ಕೆ ಬಸವ ಕ್ರಾಂತಿ ದಿನಾಚರಣೆಯ ಸಮ್ಮುಖವನ್ನು ಬಸವಕಲ್ಯಾಣದ ಶೂನ್ಯಪೀಠಾಧ್ಯಕ್ಷ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ, ಕೂಡಲಸಂಗಮದ ಉಪಾಧ್ಯಕ್ಷ ಸದ್ಗುರು ಮಹದೇಶ್ವರ ಸ್ವಾಮೀಜಿ, ಬೆಂಗಳೂರಿನ ಬಸವ ಗಂಗೋತ್ರಿ ಆಶ್ರಮದ ಸದ್ಗುರು ಬಸವಯೋಗಿ ಸ್ವಾಮೀಜಿ ವಹಿಸುವರು. ಸ್ವಾಮಿ ಲಿಂಗಾನಂದ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಾದ ಶರಣ. ಶ್ರೀ ಸಿ.ಎಚ್. ವಿಜಯಶಂಕರ್ ಸ್ವೀಕರಿಸುವರು.
ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳು, ಲೋಕಸಭಾ ಸದಸ್ಯರಾದ ಶರಣ. ಶ್ರೀ ಜಗದೀಶ್ ಶೆಟ್ಟರ್ ನೆರವೇರಿಸುವರು, ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ಶರಣ. ಶ್ರೀ ಪಿ.ಸಿ. ಗದ್ದಿಗೌಡರ್ ವಹಿಸುವರು. ಮಾಜಿ ಶಾಸಕರಾದ ಶರಣ. ಶ್ರೀ ದೊಡ್ಡನಗೌಡ ಪಾಟೀಲ, ಹುಬ್ಬಳ್ಳಿ ಶಾಸಕರಾದ ಶರಣ. ಶ್ರೀ ಮಹೇಶ್ ತೆಂಗಿನಕಾಯಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ರಾಜ್ಯ ಪಿ.ಜೆ.ಪಿ ಕಾರ್ಯದರ್ಶಿಗಳು, ಭಾರತ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯರಾದ ಶರಣ. ಶ್ರೀ ಜಗದೀಶ ಹಿರೇಮನಿ ಹಾಗೂ ಬಸವನ ಬಾಗೇವಾಡಿಯ ವಿಶ್ವಬಂಧು ಬಸವ ಸಮಿತಿಯ ಅಧ್ಯಕ್ಷರಾದ ಶರಣ. ಶ್ರೀ ಅಮರೇಶ್ ಮಿಣಜಗಿ ವಿಶೇಷ ಸತ್ಕಾರ ಸ್ವೀಕರಿಸುವರು. ಬೆಂಗಳೂರಿನ ನಿಶ್ಚಿತ ಫೌಂಡೇಶನ್ ಅಧ್ಯಕ್ಷರಾದ ಶರಣ. ಶ್ರೀ ಡಾ. ನಿಶ್ಚಿತ, ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ. ಶ್ರೀ ಎನ್. ಚಂದ್ರಮೌಳಿ ಘನ ಉಪಸ್ಥಿತರಾಗಿ ಆಗಮಿಸುವರು. ಸಂಜೆ 3 ರಿಂದ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಹಾಗೂ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮದೊಂದಿಗೆ ಸಮಾರೋಪವಾಗುವುದು.
ಇಡೀ ಶರಣಮೇಳದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿಯವರು ಪೀಠಾಧ್ಯಕ್ಷರು ಬಸವ ಧರ್ಮ ಪೀಠ, ಕೂಡಲಸಂಗಮ ಇವರು ವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು :
ಬಸವ ಧರ್ಮ ಪೀಠದ ವೆಬ್ ಸೈಟ್ ಬಿಡುಗಡೆ, ಬೆಂಗಳೂರಿನ ಕುಂಬಳಗೋಡಿನಲ್ಲಿ ನಿರ್ಮಾಣ ಹಂತದಲ್ಲಿರುವ ವಿಶ್ವಗುರು ಬಸವಣ್ಣನವರ 112 ಅಡಿ ಎತ್ತರದ ಪುತ್ಥಳಿಯ 3ಡಿ ದೃಶ್ಯಾವಳಿ ಬಿಡುಗಡೆ, ಪರಮಪೂಜ್ಯ ಲಿಂ. ಮಾತೆ ಮಹಾದೇವಿಯವರ ಕುರಿತಾದ “ಅನರ್ಥ್ಯ ರತ್ನ” ಸಾಕ್ಷ್ಯಚಿತ್ರ ಬಿಡುಗಡೆ-ಪ್ರದರ್ಶನ, ವಚನಗಳ ಪಠಣ-ಗಾಯನ ಸ್ಪರ್ಧೆಗಳು.
ವಚನಾಧಾರಿತ ರಸಪ್ರಶ್ನೆ, ಊಟಿಯ ರಾಷ್ಟ್ರೀಯ ಬಸವ ದಳದವರಿಂದ ವಿಶೇಷ ವಚನ ಭಜನೆ-ನೃತ್ಯ, ವಚನಾಭಿನಯ ನೃತ್ಯ, ಸುಡಗಾಡು ಸಿದ್ದಪ್ಪ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮ ಹಾಗೂ ಶರಣ. ಹುಲಿಕಲ್ ನಟರಾಜ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಸೇರಿದಂತೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ಎರಡುವರೆ ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು ಬರುವಂತಹ ಶರಣ ಬಂಧುಗಳಿಗಾಗಿ ವಸತಿ, ಊಟ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ :
01) ಪರಮಪೂಜ್ಯ ಮಹಾಜಗದ್ಗುರು ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿಯವರ ಸ್ಮರಣಾರ್ಥ ಸ್ವಾಮಿ ಲಿಂಗಾನಂದ ಶ್ರೀ ರಾಷ್ಟ್ರೀಯ ಪ್ರಶಸ್ತಿ : ಶರಣ. ಶ್ರೀ ಸಿ.ಎಚ್. ವಿಜಯಶಂಕರ್, ಗೌರವಾನ್ವಿತ ರಾಜ್ಯಪಾಲರು, ಮೇಘಾಲಯ (ಮೊತ್ತ : 1 ಲಕ್ಷ ರೂ.)
02) ಪರಮಪೂಜ್ಯ ಮಹಾಜಗದ್ಗುರು ಲಿಂಗೈಕ್ಯ ಮಾತೆ ಮಹಾದೇವಿಯವರ ಸ್ಮರಣಾರ್ಥ ಬಸವಾತ್ಮಜೆ ರಾಷ್ಟ್ರೀಯ ಪ್ರಶಸ್ತಿ : ಶರಣೆ. ಶ್ರೀ ಡಾ. ವಿಜಯಲಕ್ಷ್ಮಿ ದೇಶಮಾನೆ, ಖ್ಯಾತ ಕ್ಯಾನ್ಸರ್ ವೈದ್ಯರು, ಕಲ್ಬುರ್ಗಿ (ಮೊತ್ತ : 50 ಸಾವಿರ ರೂ.)
03) 12ನೇ ಶತಮಾನದ ಬಸವ ಶರಣ. ಒಕ್ಕಲಿಗ ಮುದ್ದಣ್ಣನವರ ಸ್ಮರಣಾರ್ಥ ಪ್ರಮುಖ ಪ್ರಜೆ ರಾಷ್ಟ್ರೀಯ ಪ್ರಶಸ್ತಿ : ಶರಣ. ಶ್ರೀ ಬಸವ ರೆಡ್ಡಿ, ರೈತ ಮುಖಂಡರು, ಚಿತ್ರದುರ್ಗ (ಮೊತ್ತ : 11 ಸಾವಿರ ರೂ.)
04) ಕಾಯಕ ಕಲಿ ರಾಜ್ಯ ಪ್ರಶಸ್ತಿ : ಶರಣ. ಶ್ರೀ ಬಸವಯೋಗೇಶ್ ಎ.ಬಿ. ಬಸವ ತತ್ವ ಪ್ರಚಾರಕರು, ಯುವ ಸಾಧಕರು, ನಂಜನಗೂಡು, ಮೈಸೂರು (ಮೊತ್ತ : 11 ಸಾವಿರ ರೂ.)
05) ಕಾಯಕ ರತ್ನ ರಾಜ್ಯ ಪ್ರಶಸ್ತಿ : ಶರಣ. ಶ್ರೀ ಎಸ್. ಆರ್. ಪಾಟೀಲ, ಮಾಜಿ ಸಚಿವರು. ಬಾಗಲಕೋಟೆ.
06) ಶರಣ ವೈದ್ಯ ರತ್ನ ರಾಜ್ಯ ಪ್ರಶಸ್ತಿ : ಶರಣ. ಶ್ರೀ ಡಾ. ಮಹಾಂತೇಶ್ ಕಡಪಟ್ಟಿ, ಖ್ಯಾತ ವೈದ್ಯರು, ಇಳಕಲ್
ಧರ್ಮಕರ್ತ ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮವನ್ನು ಲಿಂಗಾಯತ (ಬಸವ) ಧರ್ಮೀಯರ ಧರ್ಮಕ್ಷೇತ್ರ ಎಂದು ಗುರುತಿಸಿಕೊಂಡು 1988 ರ ಜನವರಿ 14, 15 ಮತ್ತು 16 ರಂದು ಪ್ರಥಮ ಚಾರಿತ್ರಿಕ ಶರಣ ಮೇಳವನ್ನು ಪರಮಪೂಜ್ಯ ಮಹಾಜಗದ್ಗುರು ಲಿಂಗಾನಂದ ಮಹಾ ಸ್ವಾಮೀಜಿಯವರು ಹಾಗೂ ಪರಮಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರು ಪ್ರಾರಂಭಿಸಿದರು. ಮೊಟ್ಟ ಮೊದಲನೆಯ ಚಾರಿತ್ರಿಕ ಶರಣ ಮೇಳವು ಎರಡೂವರೆ ಲಕ್ಷಕ್ಕೂ ಮಿಕ್ಕಿದ ಜನ ಸಮೂಹವನ್ನು ಆಕರ್ಷಿಸಿತು.
ಧರ್ಮಗುರು ಬಸವಣ್ಣನವರ ಕಾರಣಿಕತ್ವ ಮತ್ತು ಸಂದೇಶಗಳಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರು, ಬಸವ ಧರ್ಮೀಯರಾದ ಲಿಂಗಾಯತರು ಮತ್ತು ಬಸವ ತತ್ವಾಭಿಮಾನಿಗಳೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಒಂದು ಸ್ಥಳದಲ್ಲಿ ಸಮಾವೇಶವಾಗುವುದು ಅತ್ಯಂತ ಅವಶ್ಯಕ. ಇದು ಸಮಾನತ್ವ ಮತ್ತು ಸಹೋದರತ್ವ ಬೆಳೆಸಲು ಸಹಕಾರಿಯಾಗುವುದು ಎಂಬ ಉದ್ದೇಶದಿಂದ ಆದಿ ಶರಣರ ಸಂಕಲ್ಪದಂತೆ ಶರಣ ಮೇಳವನ್ನು ನಡೆಸಲಾಗುತ್ತಿದೆ, ಎಂದು ಆಯೋಜಕರು ಹೇಳಿದ್ದಾರೆ.