ಕೊಪ್ಪಳ
ಕೊಪ್ಪಳ ಜಿಲ್ಲೆಯ ಟಣಕನಕಲ್ಲ ಗ್ರಾಮದ ರಾಷ್ಟ್ರೀಯ ಬಸವದಳದ ಬಸವ ಭಕ್ತರು ಕೂಡಲಸಂಗಮದಲ್ಲಿ ಡಾ. ಗಂಗಾ ಮಾತಾಜಿಯವರ ಸಾನಿದ್ಯದ 38ನೇ ಶರಣ ಮೇಳ ದಾಸೋಹಕ್ಕೆಂದು, ಐದು ಕ್ವಿಂಟಲ್ ಮಾದಲಿ, ಐದು ಸಾವಿರ ರೊಟ್ಟಿ, 25 ಕೆಜಿ ಉಪ್ಪಿನಕಾಯಿ, ದವಸ ಧಾನ್ಯಗಳು ಹಾಗೂ ಐವತ್ತು ಸಾವಿರ ರೂಪಾಯಿ ಕಾಣಿಕೆಯನ್ನು ಸಲ್ಲಿಸಿದ್ದಾರೆ.
ಈ ದಾಸೋಹ ಸೇವೆಗೆ ಶರಣ ಶಿವಬಸಯ್ಯ ಹಿರೇಮಠ ವೀರಾಪುರ, ಪರಪ್ಪ ಗೊಂದಿ ಹೊಸಳ್ಳಿ ಹಾಗೂ ಬಸವನಗೌಡ ಪೋಲಿಸಪಾಟೀಲ್ ನಿವೃತ್ತ ಪಿ. ಎಸ್. ಐ. ಗ್ರಾಮದ ಶರಣ-ಶರಣೆಯರು ಸಹಾಯ, ಸಹಕಾರ ನೀಡಿದ್ದಾರೆ.
ಯಲಬುರ್ಗಾ
ತಾಲೂಕಿನ ಶರಣಗ್ರಾಮ ಗುಳೆಯ ರಾಷ್ಟ್ರೀಯ ಬಸವದಳ ಹಾಗೂ ಅಕ್ಕನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶರಣ ಮೇಳದ ಪ್ರಸಾದಕ್ಕಾಗಿ ಐದು ಸಾವಿರ ಕರ್ಚಿಕಾಯಿ ಹಾಗೂ 10 ಸಾವಿರ ರೊಟ್ಟಿಗಳ ದಾಸೋಹ ಸೇವೆ ಸಲ್ಲಿಸಿದ್ದಾರೆ. ಇದಕ್ಕಾಗಿ ಗ್ರಾಮದ ಶರಣ-ಶರಣೆಯರು ದುಡಿದಿದ್ದಾರೆ.