39ನೇ ಶರಣಮೇಳಕ್ಕೆ ಸಿದ್ದಗೊಂಡ ಬೃಹತ್ ವೇದಿಕೆ

ಸಜ್ಜುಗೊಂಡ ಅಚ್ಚುಕಟ್ಟಾದ ಸಕಲ ವ್ಯವಸ್ಥೆ

ಕೂಡಲಸಂಗಮ :

ಜನವರಿ ೧೨ ರಿಂದ ೧೪ರ ವರೆಗೆ ೩ ದಿನಗಳ ಕಾಲ ಕೂಡಲಸಂಗಮ ಬಸವಧರ್ಮ ಪೀಠದ ಆವರಣದಲ್ಲಿ ನಡೆಯುವ ೩೯ನೇ ಶರಣ ಮೇಳಕ್ಕೆ ವೇದಿಕೆ ಸಿದ್ದಗೊಂಡಿದ್ದು, ಭಾನುವಾರ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸುತ್ತಿದ್ದಾರೆ.

ಬಸವಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಸುದ್ಧಿಗಾರರೊಂದಿಗೆ ಮಾತನಾಡಿ, ಬರುವ ಭಕ್ತರಿಗೆ ಬಸವಧರ್ಮ ಪೀಠದ ಆವರಣದ ವಿವಿಧ ಶರಣಧಾಮಗಳಲ್ಲಿ ೪೦೦ ಕೊಠಡಿಗಳು, ೨೦೦ ತಾತ್ಕಾಲಿಕ ವಸತಿ ಟೆಂಟುಗಳನ್ನು ನಿರ್ಮಿಸಿದೆ.

೪ ಎಕರೆ ಪ್ರದೇಶದಲ್ಲಿ ೨೦೦/೪೦೦ ಅಡಿ ಉದ್ದದ ವೇದಿಕೆ, ೪ ಎಕರೆ ಪ್ರದೇಶದಲ್ಲಿ ೨೦೦/೨೦೦ ಅಡಿ ಉದ್ದದ ಊಟದ ಮನೆ, ೨ ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ವಸತಿ ಟೆಂಟಗಳು ನಿರ್ಮಿಸಿದೆ, ೨೦ ಸಾವಿರ ಜನ ಕುರ್ಚಿ ಮೇಲೆ ಕುಳಿತು, ೧ ಲಕ್ಷ ಜನ ನೆಲದ ಮೇಲೆ ಕುಳಿತು ಕಾರ್ಯಕ್ರಮ ವಿಕ್ಷಿಸುವ ವ್ಯವಸ್ಥೆ ಮಾಡಿದೆ.

 ಬರುವ ಭಕ್ತರಿಗೆ ಉತ್ತರ ಕರ್ನಾಟಕದ ಬಿಳಿಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಲಾಡು, ಹುಗ್ಗಿ, ಶಾವಿಗೆ ಪಾಯಸ, ಕುಂಬಳಕಾಯಿ ಪಾಯಸ ಮುಂತಾದ ಸಿಹಿತಿಂಡಿಗಳ ಜೊತೆಗೆ ಮೊಸರು, ಮಜ್ಜಿಗೆ ಕೊಡಲಾಗುವುದು. ೫೦ ಬಾಣಸಿಗರು, ೨೦೦ ಜನ ಸಹಾಯಕರು ಅಡುಗೆ ತಯಾರಿಕೆಯಲ್ಲಿ ತೊಡಗಿದ್ದು ೫ ಸಾವಿರ ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಪ್ರಸಾದ ಬಡಿಸಲು ಪಾಳೆ ಪದ್ದತಿಯಲ್ಲಿ ನಿಯೋಜನೆ ಮಾಡಿದೆ.

ಕಳೆದ ೧೫ ದಿನದಿಂದ ವೇದಿಕೆ ನಿರ್ಮಾಣ ಕಾರ್ಯ ನಡೆದಿದೆ. ಶರಣ ಮೇಳಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಬಾಗಲಕೋಟೆ, ಇಲಕಲ್ಲ, ಹುನಗುಂದ, ವಿಜಯಪುರ ರಸ್ತೆ ಸಾರಿಗೆ ಘಟಕದವರಿಗೆ ಅಧಿಕ ಬಸ್ ಬಿಡುವಂತೆ ತಿಳಿಸಿದೆ ಎಂದು ಸ್ವಾಮೀಜಿ ತಿಳಿಸಿದರು.

ಶರಣ ಮೇಳದ ನಿಮಿತ್ಯ ಬಸವಧರ್ಮ ಪೀಠದ ಶರಣ ಲೋಕ, ಮಹಾಮನೆ, ಮಡಿವಾಳ ಮಾಚಿದೇವ ಮಹಾದ್ವಾರ ಬಣ್ಣಬಣ್ಣದ ವಿದ್ಯುತ್ ದ್ವೀಪಗಳಿಂದ ಶೃಂಗಾರಗೊಂಡಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ.

ಬಸವ ಧರ್ಮ ಪೀಠದ ವಿವಿಧ ಜಂಗಮ ಮೂರ್ತಿಗಳು, ಕಾರ್ಯಕರ್ತರು, ರಾಷ್ಟ್ರೀಯ ಬಸವ ದಳದ ಸದಸ್ಯರು ಆಗಮಿಸಿದ್ದು, ಸಿದ್ದತೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

ಮೊದಲ ದಿನ: ಶರಣ ಮೇಳದ ಮೊದಲನೆ ದಿನವಾದ ಸೋಮವಾರ ಬೆಳಿಗ್ಗೆ ೧೦:೩೦ಕ್ಕೆ ರಾಷ್ಟ್ರೀಯ ಬಸವ ದಳದ ೩೫ನೇ ಅಧಿವೇಶನ ನಡೆಯುವುದು.

ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸಂಗಪ್ಪ ಮಾಡುವರು. ಸಾನಿಧ್ಯವನ್ನು ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ, ಉಳವಿ ಅಕ್ಕನಾಗಲಾಂಬಿಕಾ ಪೀಠದ ಮಾತೆ ದಾನೇಶ್ವರಿ ವಹಿಸುವರು.

ಸಾಯಂಕಾಲ ೬ ಗಂಟೆಗೆ ಮಠಾಧಿಪತಿಗಳ ಧರ್ಮಚಿಂತನ ಗೋಷ್ಠಿ ನಡೆಯುವುದು. ಉದ್ಘಾಟನೆಯನ್ನು ಮೈಸೂರು ಗಾವಡಗೆರೆ ಗುರು-ಲಿಂಗ-ಜಂಗಮ ದೇವರ ಮಠದ ನಟರಾಜ ಸ್ವಾಮೀಜಿ ಮಾಡುವರು. ಸಾನಿಧ್ಯವನ್ನು ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ವಹಿಸುವರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *