ಬೆಳಗಾವಿ:
ಸತಿಪತಿಯರಲ್ಲಿ ಅನ್ಯೋನ್ಯತೆ, ಸಾಮರಸ್ಯ ಭಾವನೆಯ ಬಾಂಧವ್ಯ, ಸಹಾನುಭೂತಿ, ಕುಟುಂಬದ ಕಳಕಳಿ ಇದ್ದರೆ ಅದು ಸಾಮಾಜಿಕ ಸಾಮರಸ್ಯಕ್ಕೆ ನಾಂದಿಯಾಗುತ್ತದೆ. ಆದಕಾರಣ ಸತಿಪತಿಯರ ಭಾವ ಬಂಧ ಅತಿ ಪ್ರಮುಖವಾಗಿದೆ ಎಂದು ಸಾಹಿತಿ ಶ್ರೀಕಾಂತ ಶಾನವಾಡ ಹೇಳಿದರು.
ರವಿವಾರ ಬೆಳಗಾವಿ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ ವಾರದ ಪ್ರಾರ್ಥನೆ ಮತ್ತು ಚಿಂತನ ಕಾರ್ಯಕ್ರಮದಲ್ಲಿ ‘ದಾಂಪತ್ಯ ಧರ್ಮ’ವಿಷಯ ಕುರಿತು ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಸಾಮಾಜಿಕ, ಕೌಟುಂಬಿಕ ಸ್ಥಿತಿ ಹದಗೆಡಲು ಭಿನ್ನಾಭಿಪ್ರಾಯಗಳೇ ಕಾರಣವಾಗಿದೆ. 12ನೇ ಶತಮಾನದಲ್ಲಿ ಶರಣರ ಕಾಲದಲ್ಲಿ ಸತಿಪತಿಯರಲ್ಲಿದ್ದ ಅವಿನಾಭಾವ ಸಂಬಂಧ ನಿಜಕ್ಕೂ ಅನುಕರಣೀಯ ಮತ್ತು ಸ್ಮರಣೀಯವಾಗಿದೆ. ಆ ನಿಟ್ಟಿನ ಬಾಂಧವ್ಯ ಸಮಾಜದಲ್ಲಿ ಕಣ್ಮರೆಯಾಗುತ್ತಿದೆ, ಅದೀಗ ಬೇಕಾಗಿದೆ ಎಂದರು.
ಅಕ್ಕಮಹಾದೇವಿ, ಚನ್ನಬಸವಣ್ಣ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಶರಣರ ಬಾಂಧವ್ಯ ಕುರಿತಾದ ಅನೇಕ ದೃಷ್ಟಾಂತಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಲಿಂಗಾಯತ ಸಂಘಟನೆಯ ವಾರದ ಪ್ರಾರ್ಥನೆ, ಚಿಂತನ, ಉಪನ್ಯಾಸ ಕಾರ್ಯಕ್ರಮಗಳು ನೆರವೇರುವಲ್ಲಿ ಕ್ರಿಯಾಶೀಲರಾಗಿ ಶ್ರಮ ವಹಿಸುತ್ತಿರುವ ಸಾಹಿತಿ, ವರದಿಗಾರ ಮಹಾಂತೇಶ ಮೆಣಸಿನಕಾಯಿ ಅವರನ್ನು ಸಂಘಟನೆ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ, ವಿ.ಕೆ. ಪಾಟೀಲ, ಸದಾಶಿವ ದೇವರಮನಿ, ಬಸವರಾಜ ಬಿಜ್ಜರಗಿ, ಬಸವರಾಜ ಕರಡಿಮಠ, ಎಸ್. ಎಸ್. ಪೂಜಾರ, ಪ. ಬ. ಕರಿಕಟ್ಟಿ, ಮಹದೇವ ಕೆoಪಿಗೌಡ್ರ, ಶೇಖರ ವಾಲಿಇಟಗಿ, ಗುರಸಿದ್ದಪ್ಪ ರೇವಣ್ಣವರ, ಶಂಕ್ರಪ್ಪ ಮೆಣಸಗಿ, ವಿರೂಪಾಕ್ಷ ದೊಡ್ಡಮನಿ, ಅಕ್ಕನವರ ದಂಪತಿ, ಸುನೀಲ ಸಾಣಿಕೊಪ್ಪ, ಲಕ್ಷ್ಮಿಕಾಂತ ಗುರವ, ಶಿವಾನಂದ ತಲ್ಲೂರ, ಅಕ್ಕಮಹಾದೇವಿ ತೆಗ್ಗಿ ಸೇರಿದಂತೆ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸುರೇಶ ನರಗುoದ ಪ್ರಾರ್ಥಿನೆ, ಆನಂದ ಕರ್ಕಿ ವಚನ ವಿಶ್ಲೇಷಣೆ, ಸಂಗಮೇಶ ಅರಳಿ ನಿರೂಪಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
