‘ಶರಣರ ಶಕ್ತಿ ಚಿತ್ರ ೧೨ನೇ ಶತಮಾನದ ಕಲ್ಯಾಣದ ಚರಿತ್ರೆಯನ್ನು ಹೇಳುತ್ತದೆ’
12ನೆಯ ಶತಮಾನ ಇಡೀ ವಿಶ್ವವೇ ಧರ್ಮವೆಂದರೆ ಉಳ್ಳವರ ಸ್ವತ್ತು ಎಂದು ನಂಬಿದ್ದ ಕಾಲವಾಗಿದ್ದರೂ ನಮ್ಮ ಕನ್ನಡದ ನೆಲದಲ್ಲಿ ಮಾತ್ರ ಧರ್ಮ ಸರ್ವಜನಾಂಗದ ಶಾಂತಿಯ ತೋಟ ವಾಗಿತ್ತು. ಯಾಕಂದರೆ ಅದು (ಕರಿಚೋಳ ಕಲ್ಯಾಣ ) ಜಗಜ್ಯೋತಿ , ಭಕ್ತಿ ಭಂಡಾರಿ ಬಸವಣ್ಣನವರ ಕಾಲವಾಗಿತ್ತು, ಶರಣರ ಶಕ್ತಿಯ ಕಾಲವಾಗಿತ್ತು.
ಅನುಭವ ಮಂಟಪದ ಆಕರ್ಷಣೆ. ಇಷ್ಟಲಿಂಗದ ಪರಿಕಲ್ಪನೆ.. ಕಾಯಕ, ಪ್ರಸಾದ ದಾಸೋಹ ವಚನಗಳ ವಿಚಾರಗಳು ವಿಶ್ವದ ಎಲ್ಲಾ ಶರಣರನ್ನು ಕಲ್ಯಾಣದ ಕಡೆಗೆ ಹೇಗೆ ಆಕರ್ಷಿಸಿತ್ತು ಎಂದು ತೋರಿಸುವುದೇ ಶರಣರ ಶಕ್ತಿ ಚಿತ್ರದ ವಿಶೇಷ. ಶರಣರ ಸಮೂಹ ಯಾವ ಕಾರಣಕ್ಕಾಗಿ ಕಲ್ಯಾಣಕ್ಕೆ ಬರುತಿತ್ತು ಎನ್ನುವುದೇ ಚಿತ್ರ ಕಥೆಯ ಪ್ರಮುಖ ವಿಷಯ.
ಮಹಾಶರಣರಾದ ಮಾದರಚನ್ನಯ್ಯನವರು, ತಳವಾರ ಕಾಮೀದೇವರು, ಊರಲಿಂಗ ಪೆದ್ದಿಯವರು, ಕುರುಬ ಗೊಲ್ಲಾಳೇಶ್ವರರು, ಇತರ ಮಹಿಳಾ ಶರಣೆಯರು ಅನುಭವಮಂಟಪದಲ್ಲಿ ಹೇಗೆ ವಿಚಾರಗಳನ್ನು ಮಂಡಿಸುತ್ತಿದ್ದರು ಎಂಬುದನ್ನು ವಿಶೇಷವಾಗಿ ಚಿತ್ರಿಸಿದ್ದೇವೆ.
ಕಲ್ಯಾಣಕ್ರಾಂತಿ ನಂತರದಲ್ಲಿ ಬಸವಣ್ಣನವರ ಅನುಯಾಯಿಗಳು ವಚನ ಸಾಹಿತ್ಯವನ್ನು ಕಲ್ಯಾಣದಿಂದ ಉಳವಿಗೆ ಹೇಗೆ ಮುಟ್ಟಿಸಿದರು, ಅವರು ಪಟ್ಟ ಕಷ್ಟಗಳು, ಹೋರಾಟ , ತ್ಯಾಗ, ಬಲಿದಾನಗಳನ್ನು ಇಲ್ಲಿ ಕಾಣಬಹುದು.
ಶರಣರ ಶಕ್ತಿ ಎಂದರೇ ಬಸವಣ್ಣನರೇ? ವಚನ ಸಾಹಿತ್ಯವೇ? ಇಷ್ಟಲಿಂಗದ ಪರಿಕಲ್ಪನೆಯೇ? ಅನುಭವ ಮಂಟಪವೇ? ಷಟಸ್ಥಲಗಳ ಆಚರಣೆಯೆ? ಎಂಬುದನ್ನ ತಿಳಿಸುವುದೇ ಚಲನಚಿತ್ರದ ಮುಖ್ಯ ಉದ್ದೇಶವಾಗಿದೆ.
ವಚನ ಭಂಡಾರವನ್ನು ಶರಣರು ಹೇಗೆ ಹಂಚಿಕೊಂಡು ದಶದಿಕ್ಕುಗಳಲ್ಲಿ ಸಾಗಿಸಿ ರಕ್ಷಿಸಿದರು ಎಂದು ಈ ಚಿತ್ರ ತೋರಿಸುತ್ತ
