ಚಿತ್ರದುರ್ಗದಲ್ಲಿ ಶರಣ-ಶರಣೆಯರ ವೇಷಭೂಷಣ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಶರಣ ಸಂಸ್ಕ್ರತಿ ಉತ್ಸವ -೨೦೨೫ ರ ಅಂಗವಾಗಿ ಅಲ್ಲಮ್ಮಪ್ರಭು ಸಂಶೋಧನ ಕೇಂದ್ರದಲ್ಲಿ ಶಿವಶರಣ ಶರಣೆಯರ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿದ್ಯಾಸಂಸ್ಥೆಯ ಶಾಲೆಯ ಚಿಕ್ಕಮಕ್ಕಳು ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಯ್ದಕಿ ಮಾರಯ್ಯ, ಅಂಬಿಗರ ಚೌಡಯ್ಯ, ಅಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಮುಕ್ತಾಯಕ್ಕ, ಸತ್ಯಕ್ಕ ಮುಂತಾದವರ ವೇಷಭೂಷಣ ಧರಿಸಿ ಭಾಗಿಯಾಗಿದ್ದರು.

೧೨ನೇ ಶತಮಾನದದಲ್ಲಿ ಜೀವಿಸಿ, ತಮ್ಮ ನಡೆ ನುಡಿಗಳಿಂದ ಹಾಗೂ ವಚನಗಳ ರಚನೆಯ ಮೂಲಕ ಸಮಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದವರು. ಅಂತಹ ಶರಣ ಶರಣೆಯರು ವೇಷಭೂಷಣಗಳನ್ನು ಧರಿಸಿ ಅವರ ವಚನಗಳನ್ನು ಹೇಳುವ ಮೂಲಕ ಪರಿಚಯಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ಸಂಗಮೇಶ, ಗಾಯತ್ರಿ, ಪುಷ್ಪಾವತಿ ವಹಿಸಿದ್ದರು.

ವಿದ್ಯಾರ್ಥಿಗಳ ವಿಭಾಗದಲ್ಲಿ

ಪ್ರಥಮ ಬಹುಮಾನ ಕುಮಾರಿ ಲೇಖನ ಪ್ರಿಯ- ಅಕ್ಕಮಹಾದೇವಿ ಪಾತ್ರ,

ದ್ವಿತೀಯ ಬಹುಮಾನ -ಚೇತನ ಎಂ -ಅಲ್ಲಮಪ್ರಭು ಹಾಗೂ ಪ್ರಣವಿ ಜಿ ಡಿ- ಆಯ್ದಕ್ಕಿ ಲಕ್ಕಮ್ಮನ ಪಾತ್ರ,

ತೃತೀಯ ಬಹುಮಾನ -ನಿತ್ಯಶ್ರೀ ಆರ್ ಶರಣೆ ಸತ್ಯಕ್ಕ ಪಾತ್ರ.

ವಯಸ್ಕರ ವಿಭಾಗದಲ್ಲಿ

ಪ್ರಥಮ ಬಹುಮಾನ- ಕವಿತಾ ಸಿದ್ದೇಶ್ -ಗಂಗಾಂಬಿಕೆ ಪಾತ್ರ,

ದ್ವಿತೀಯ ಬಹುಮಾನ ಆಯಿಷ ಅಂಜುಮ್- ಅಕ್ಕಮಹಾದೇವಿ ಪಾತ್ರ ಹಾಗೂ ಜ್ಯೋತಿ ಬಸವರಾಜ-ಶರಣೆ ಸತ್ಯಕ್ಕನ ಪಾತ್ರ,

ತೃತೀಯ ಬಹುಮಾನ ಶ್ರೀಮತಿ ಅನ್ನಪೂರ್ಣ ಸಜ್ಜನ್, ನೀಲಾಂಬಿಕೆ ಪಾತ್ರ ಧರಿಸಿ ಬಹುಮಾನ ಗಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *