ಬಸವಕಲ್ಯಾಣ
ಸಮಾನತೆ, ಸಹೋದರತೆ ಮಾನವೀಯ ಮೌಲ್ಯಗಳಿಗಾಗಿ ಹುತಾತ್ಮರಾದ ಶರಣರ ಸ್ಮರಣೆಗಾಗಿ ಪ್ರತಿವರ್ಷದಂತೆ ಈ ವರ್ಷವೂ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಆಚರಿಸುವ ನಿಮಿತ್ಯ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಸಭೆಯ ಸಾನಿಧ್ಯ ವಹಿಸಿಕೊಂಡಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, “ಕಲ್ಯಾಣ ಕ್ರಾಂತಿಯಲ್ಲಿ ಹುತಾತ್ಮ ಶರಣರ ಸ್ಮರಣೆಗಾಗಿ ಸೆಪ್ಟೆಂಬರ್ ೨೨ ರಿಂದ ಅಕ್ಟೋಬರ್ ೦೨ ರವರೆಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ. ನಾಡಿನ ಪೂಜ್ಯರನ್ನು, ಸಾಹಿತಿಗಳನ್ನು ಆಮಂತ್ರಿಸಿ ಪ್ರತಿದಿನ ಅನುಭಾವ, ಇಷ್ಟಲಿಂಗ ಪೂಜೆ, ವಚನ ಸಂಗೀತ, ವಚನ ನೃತ್ಯ, ರೂಪಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶರಣ ವಿಜಯ ಪ್ರಶಸ್ತಿ ಪ್ರದಾನ, ಮೆರವಣಿಗೆ ನಡೆಯಲಿವೆ” ಎಂದರು.
ಬಿಡಿವಿಸಿ ಉಪಾಧ್ಯಕ್ಷ ಡಾ. ಜಿ.ಎಸ್. ಬುರಾಳೆ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗಾಗಿ ತನು, ಮನ, ಧನದಿಂದ ಸಹಕರಿಸುವುದಾಗಿ ಹೇಳಿದರು.
ಮುಖಂಡ ಶಿವಕುಮಾರ ಬಿರಾದಾರ ಮಾತನಾಡಿ, ಉದ್ಘಾಟನೆಗೆ ವಿಶೇಷ ವ್ಯಕ್ತಿಗಳನ್ನು ಕರೆಯಿಸಬೇಕು, ಮಕ್ಕಳಿಗಾಗಿ ಸ್ಫರ್ಧೆಗಳನ್ನು ಏರ್ಪಡಿಸಬೇಕು ಎಂದರು. ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರವಿಂದ್ರ ಕೊಳಕೂರ ಮಾತನಾಡಿ, ಕಾರ್ಯಕ್ರಮಕ್ಕೆ ಯುವ ಸಾಧಕರನ್ನು ಕರೆಯಿಸಿ ಯುವಕರನ್ನು ಕಾರ್ಯಕ್ರಮದತ್ತ ಸೆಳೆಯಬೇಕು. ಬಸವತತ್ವಕ್ಕಾಗಿ ದುಡಿದಿರುವ ವ್ಯಕ್ತಿಗಳಿಗೆ ಶರಣ ವಿಜಯ ಪ್ರಶಸ್ತಿ ನೀಡಬೇಕು ಎಂದರು.

ಹುಲಸೂರು ತಾಲೂಕ ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ಯುವಕರಿಗಾಗಿ ವಿಶಿಷ್ಠ ಗೋಷ್ಠಿ ಆಯೋಜಿಸಿ ಬಸವಣ್ಣನವರ ಸಂಪೂರ್ಣ ಇತಿಹಾಸ ತಿಳಿಸಬೇಕೆಂದರು.
ಸಾಹಿತಿ ಸಂಗಮೇಶ ಜವಾದಿ, ಆರೋಗ್ಯದ ಕುರಿತು ಗೋಷ್ಠಿಗಳನ್ನು ಆಯೋಜಿಸಲು ಸಲಹೆ ನೀಡಿದರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುರುನಾಥ ಗಡ್ಡೆ ಮಾತನಾಡಿ, ಮಕ್ಕಳಿಗಾಗಿ ವಚನ ಕಂಠಪಾಠ ಸ್ಫರ್ಧೆ ಆಯೋಜಿಸಲು ಸಲಹೆ ನೀಡಿದರು.
ಸಭೆಯಲ್ಲಿ ಕಾರ್ಯಕ್ರಮಕ್ಕಾಗಿ ಕರೆಸಬಹುದಾದಂಥ ಅತಿಥಿಗಳು, ಸ್ವಾಮಿಗಳು, ಆಯ್ದುಗೊಳ್ಳಬಹುದಾದ ವಿಚಾರಗಳ ಬಗ್ಗೆ ಸುಧಿರ್ಘ ಚರ್ಚೆ ನಡೆಯಿತು. ಭಾಗವಹಿಸಿದ ಅನೇಕರು ತಮ್ಮ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಪೂಜ್ಯ ಸತ್ಯಕ್ಕತಾಯಿ, ಬಿಡಿಪಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಚನ್ನಪ್ಪ ಪರ್ತಾಪೂರೆ, ಅನಿಲಕುಮಾರ ರಗಟೆ, ಅಶೋಕ ನಾಗರಾಳೆ, ರೇವಣಪ್ಪ ರಾಯವಾಡೆ, ಜಗನ್ನಾಥ ಖೂಬಾ, ಶಿವರಾಜ ಶಾಶೆಟ್ಟಿ, ಬಸವರಾಜ ಬಾಲಿಕಿಲೆ, ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ, ಜಯಪ್ರಕಾಶ ಸದಾನಂದೆ, ಮಹಾದೇವ ಮಹಾಜನ, ಶಿವರಾಜ ನೀಲಕಂಠೆ, ಶಿವಕುಮಾರ ಸಿದ್ದೇಶ್ವರ, ಲಕ್ಷ್ಮೀಬಾಯಿ ಪಾಟೀಲ, ಜ್ಯೋತಿ ಶಿವಣಕರ, ಶಿವಕುಮಾರ ಕುದ್ರೆ, ಲಕ್ಷ್ಮೀಕಾಂತ ಜ್ಯಾಂತೆ, ಸಂಜು ಜಾಧವ, ರವೀಂದ್ರ ಬೇಲೂರೆ, ಮಹಾದೇವ ಪಾಟೀಲ, ಗಣಪತಿ ಮಡಿವಾಳ, ಮೀನಾ ಜಾಧವ ಸಂಗಮೇಶ ಅವಸೆ, ಸುಲೋಚನಾ ಗುದಗೆ, ಕವಿತಾ ರಾಜೋಳೆ, ಜಯಶ್ರೀ ಬಿರಾದಾರ, ಸವಿತಾ ರಗಟೆ, ವಿದ್ಯಾವತಿ ಶೇರಿಕಾರ, ಜಯಶ್ರೀ ಪಾಟೀಲ ಸೇರಿದಂತೆ ನೂರಾರು ಶರಣ ಶರಣೆಯರು ಭಾಗವಹಿಸಿದ್ದರು. ಶಂಕರ ಕರಣೆ ಸ್ವಾಗತಿಸಿ ನಿರೂಪಿಸಿದರು.