ಶರಣರ ಸ್ಮಾರಕಗಳ ಸಂರಕ್ಷಣೆ ಆಗಲಿ: ಪೂಜ್ಯ ಬಸವಲಿಂಗ ಪಟ್ಟದ್ದೇವರು

ಬಸವ ಮೀಡಿಯಾ
ಬಸವ ಮೀಡಿಯಾ

ಚಿಂಚೋಳಿ

ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆಯಲ್ಲಿ ಜರುಗಿದ ಶ್ರಾವಣ ಪ್ರವಚನದ ಸಮಾರೋಪ ಸಮಾರಂಭ ಜರುಗಿತು.

ಶಾಸಕರಾದ ಅವಿನಾಶ್ ಜಾಧವ್ ರವರು ಶ್ರೀ ಬಸವ ಪರುಷ ಕಟ್ಟೆಗೆ ಸಂದರ್ಶನ ಮಾಡಿ ದರ್ಶನ ಪಡೆದರು.

ನಂತರ ಶ್ರೀ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯ ಡಾ ಬಸವಲಿಂಗ ಪಟ್ಟದ್ದೇವರು ಮಾತನಾಡಿ ಊರು ಬಿಟ್ಟರು ಊರಿನ ಬಗ್ಗೆ ಹಿತ ಕಾಳಜಿ ವಹಿಸುವುದನ್ನು ಎಂದು ಮರೆಯಬಾರದು. ಹಬ್ಬ ಜಾತ್ರೆ ಮತ್ತೀತರ ವಿಶೇಷ ಸಂದರ್ಭಗಳಲ್ಲಿ ಬಂದು ಹೋಗುವಂತೆ ಸದಾ ಹುಟ್ಟೂರಿನ ಬಗ್ಗೆ ಅಭಿಮಾನ ಹೊಂದಿ ಅಭಿವೃದ್ಧಿಗೆ ಕೈಗೂಡಿಸುತ್ತಾ ಹೋಗಬೇಕು.

ಬಸವ ಎಂಬ ಪಂಚ ಪರುಷ ಮೂರ್ತಿ ಎಲ್ಲರ ಹೃದಯದಲ್ಲಿ ನೆಲೆಗೊಳ್ಳಬೇಕು ಎಂದು ತಿಳಿಸಿದರು. ಬಸವಾದಿ ಪ್ರಮಥರು ಶರಣರು ಅಡಿ ಇಟ್ಟ ಸ್ಥಳಗಳೆಲ್ಲವೂ ಪಾವನ ಕ್ಷೇತ್ರಗಳಾಗಿದ್ದು ಅಲ್ಲೆಲ್ಲ ಶರಣರ ಸ್ಮಾರಕಗಳ ಸಂರಕ್ಷಣೆ ಆಗಬೇಕೆಂದು ಮಾರ್ಗದರ್ಶನ ಮಾಡಿದರು. ಚೆನ್ನಬಸವಾನಂದ ಸ್ವಾಮಿಗಳು ಮಾತನಾಡುತ್ತಾ ಸತ್ಕಾರ್ಯಗಳಿಗೆ ಎಲ್ಲರ ಸಹಕಾರ ಮತ್ತು ಸಹಯೋಗ ಇದ್ದರೆ ಒಳ್ಳೆಯ ಕೆಲಸಗಳು ಜರುಗುತ್ತವೆ ಎಂದು ತಿಳಿಸಿದರು.

ಇದೇ ವೇಳೆ ಪ್ರವಚನಕಾರರಾದ ಶಿವಸ್ವಾಮಿ ಚಿನಕೇರಾ ರವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಪರುಷ ಕಟ್ಟೆ ಅಧ್ಯಕ್ಷರಾದ ಆನಂದಕುಮಾರ ಬೆಡಸೂರು, ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ , ಡಾ : ಸಿ ಎಸ್ ರಗಟೆ, ವೀರಶೆಟ್ಟಿ ಇಮಡಾಪುರ, ಸಿದ್ಧರಾಮಪ್ಪ ಕಪಲಾಪುರೆ , ಚಂದ್ರಯ್ಯ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ವಿಜಯಕುಮಾರ ಬೆಡಸೂರು, ಬಸವ ದಳದ ನಂದಿಕುಮಾರ ಪಾಟೀಲ, ನ್ಯಾಯವಾದಿ ವೀರೇಂದ್ರ ಕೋರಿ, ಉಪನ್ಯಾಸಕ ವಿಶ್ವನಾಥ ಬುರುಕಪಳ್ಳಿ, ಸಂಗಮೇಶ್ವರ ದೇವಾಲಯದ ಸಂಗಾರೆಡ್ಡಿ ನರಸನ್, ಬಕ್ಕಾರೆಡ್ಡಿ ಪೋಲಿಸ್ ಪಾಟೀಲ, ನಿವೃತ್ತ ಭಾರತ ಸರ್ಕಾರದ ಅಭಿಯಂತರ ಸಂಗಮೇಶ ರಗಟೆ, ಶಿವಮೂರ್ತಿ ಜಾಡರ್, ರಾಜಶೇಖರ ದುಬಲಗುಂಡಿ ಸೂರ್ಯಕಾಂತ ಹುಲಿ ಪಾಟೀಲ, ಜಗದೀಶ್ ಮರಪಳ್ಳಿ, ಗುರುಶಾಂತ ಹುಂಡೇಕಾರ ,ಶಾಂತಪ್ಪ ದುಬಲಗುಂಡಿ, ವೀರಸಂಗಯ್ಯ ಮದರಗಿ, ಮಹೇಶಕುಮಾರ ಕೊಡಂಗಲ್, ಶಿವಶರಣ ಕೊಡಂಗಲ್, ಶರಣು ಕಪ್ಲಿ, ಶಾಂತಕುಮಾರ ಸೀತಾಳಗೇರಾ, ರವೀಂದ್ರ ಕೊಡಂಗಲ್ , ಸೋಮನಾಥ ದುಬಲಗುಂಡಿ,ಚಂದ್ರಕಾಂತ ಕೊಡಂಗಲ್, ಈಶ್ವರಮ್ಮ ಮದರಗಿ ಮಠ, ಅಂಜನಾದೇವಿ ದುಬಲಗುಂಡಿ, ಶಾಂತವೀರ ಮಠ, ನಾಗಮ್ಮ ಮಠ, ಶಿವಶಂಕರ ಬೆಡಸೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ ರಿತಿಷಾ ಬೆಡಸೂರೆ ವಚನ ನೃತ್ಯ ಮಾಡಿದರು.ಕವಿತಾ ಜಾಡರ್ ಸ್ವಾಗತಿಸಿ ಸಿದ್ಧಲಿಂಗ ದುಬಲಗುಂಡಿ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *